ವಿಷ್ಣು ಬಗ್ಗೆ ಕೆಟ್ಟ ಮಾತಾಡಿದ ನಟನಿಗೆ ಸುದೀಪ್ ವಾರ್ನಿಂಗ್..!
ವಿಷ್ಣುವರ್ಧನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಟಾಲಿವುಡ್ ನಟಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ | ಕನ್ನಡ ಚಿತ್ರರಂಗ ಪ್ರತಿಕ್ರಿಯೆ ಏನು..?
ವಿಷ್ಣುವರ್ಧನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಟಾಲಿವುಡ್ ನಟ ವಿಜಯ್ ರಂಗರಾಜು ಬಗ್ಗೆ ಕನ್ನಡ ಚಿತ್ರರಂಗ ಆಕ್ರೋಶ ವ್ಯಕ್ತಪಡಿಸಿದೆ. ವಿಷ್ಣುವರ್ಧನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ನಟನ ವಿರುದ್ಧ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಪ್ರತಿಕ್ರಿಯಿಸಿದ್ದಾರೆ.
ವಿಜಯ್ ರಂಗರಾಜುಗೆ ಖಡಕ್ ವಾರ್ನಿಂಗ್ ಕೊಟ್ಟಸುದೀಪ್, ಒಬ್ಬ ಅಭಿಮಾನಿಯಾಗಿ ನಟನಾಗಿ ಮಾತಾನಡುತ್ತಿದ್ದೇನೆ. ವ್ಯಕ್ತಿ ಬದುಕಿದ್ದಾಗ ಮಾತನಾಡಿದ್ರೆ ಅದು ಗಂಡಸ್ತನ. ಆಗ ಅವರಿಲ್ಲದಿರುವಾಗ ಮಾತನಾಡಿರುವುದು ದೊಡ್ಡ ತಪ್ಪು ಎಂದಿದ್ದಾರೆ.
ವಿಷ್ಣುವರ್ಧನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತೆಲಗು ನಟ
ಕೋಟಿ ಜನರ ಆರಾಧ್ಯ ದೈವ ಆಗಿರೋ ಅವರು ಇಲ್ಲದಾಗ ಮಾತನಾಡೋದು ತುಂಬ ತಪ್ಪು. ವಾರ್ನಿಂಗ್ ಮಟ್ಟಕ್ಕೆ ಇಳಿಯಬೇಡಿ, ಅವ್ರಿಲ್ಲದಿದ್ದರೂ ನಾವೆಲ್ಲರೂ ಇದ್ದೀವಿ, ನಿಮ್ಮ ಮಾತನ್ನು ಹಿಂದೆಗೆದುಕೊಳ್ಳಿ ಎಂದಿದ್ದಾರೆ.
ನಾವು ಎಲ್ಲಾ ಇಂಡಸ್ಟ್ರಿಯ ಕಲಾವಿದರಿಗೆ ಗೌರವ ಕೊಡ್ತಿವಿ ಅದನ್ನೇ ನಾವು ನಿರೀಕ್ಷಿಸುತ್ತೇವೆ. ವಿಡಿಯೋದಲ್ಲಿ ಹಂಗ್ ಹಿಡ್ಕೊಂಡ್ ಬಿಟ್ವಿ ಹಿಂಗ್ ಹಿಡ್ಕೊಂಡ್ ಬಿಟ್ವಿ ಅಂದಿದ್ದೀರ. ಅವರಿಲ್ಲದೆ ಇರಬಹುದು ನಾವಿನ್ನು ಇದ್ದೇವೆ ಎಂದು ವಾರ್ನ್ ಮಾಡಿದ್ದಾರೆ ಕಿಚ್ಚ.
ರಜನೀಕಾಂತ್‌ಗೆ 70: ಮೋದಿ ಸ್ಪೆಷಲ್ ಬರ್ತ್‌ಡೇ ವಿಶ್
ಆ ಲೆವೆಲ್ ಗೆ ಹೋಗುದು ಬೇಡ ಸರ್.. ವಾರ್ನಿಂಗ್ ಗೆ ಇಳಿಬೇಡಿ ಇಲ್ಲ್ಯಾರು ಕೈಲಾಗದೇ ಇಲ್ಲದವರು ಇಲ್ಲ. ಅವರಿಲ್ಲದೇ ಇರಬಹುದು ಕೊಟಿ ಕೋಟಿ ಮಕ್ಕಳನ್ನ ಬಿಟ್ಟು ಹೋಗಿದ್ದಾರೆ. ನೀವು ಹೇಳಿರೋ ಮಾತುಗಳನ್ನ ವಾಪಸ್ ತಗೊಳಿ ಎಂದು ಸುದೀಪ್ ಹೇಳಿದ್ದಾರೆ.
ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನ ವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು ಭಾರತೀಯ ಚಿತ್ರರಂಗ ನಮ್ಮ ಮನೆ ಎಲ್ಲ ಕಲಾವಿದರು ಒಂದು ಕುಟುಂಬ ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ ಮೊದಲು ಮಾನವನಾಗು ಎಂದಿದ್ದಾರೆ ಪುನೀತ್