ರಜನೀಕಾಂತ್‌ಗೆ ಪ್ರಧಾನಿ ಮೋದಿಯಿಂದ ಹುಟ್ಟಿದ ಹಬ್ಬದ ಶುಭಾಶಯ..!

ಭಾರತದ ಚಿತ್ರರಂಗದಲ್ಲಿ ಪ್ರಮುಖ ನಟರಲ್ಲೊಬ್ಬರು ರಜನೀಕಾಂತ್. 70ನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿರುವ ನಟನಿಗೆ ಪ್ರಧಾನಿ ಮೋದಿ ಶುಭಾಶಯ ತಿಳಿಸಿದ್ದಾರೆ. ಪೆಟ್ಟಾ ನಟನನ್ನು ಅವರ ಅಭಿಮಾನಿಗಳು ನಟನಾಗಿ ಕಾಣದೆ ದೇವರಾಗಿಯೇ ಕಂಡು ಆರಾಧಿಸುತ್ತಾರೆಂಬುದು ವಿಶೇಷ. ಇದೀಗ 70 ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ನಟ.

ಪ್ರಧಾನಿ ನರೇಂದ್ರ ಮೋದಿ ಬರ್ತ್‌ಡೇ ಶುಭಾಶಯ ತಿಳಿಸಿದ್ದು, ಪ್ರೀತಿಯ ರಜನೀಕಾಂತ್ ಜೀ ಹುಟ್ಟುಹಬ್ಬದ ಶುಭಾಶಯಗಳು. ಸುಖವಾಗಿ ಆರೋಗ್ಯಕರವಾಗಿ ಬಾಳಿ ಎಂದು ಹಾರೈಸಿದ್ದಾರೆ.

ರಜನೀಕಾಂತ್‌ಗಾಗಿ 10 ದಿನ ಉಪವಾಸ ಮಾಡಿದ ಶ್ರೀದೇವಿ

ಕೂಲಿಯಾಗಿ, ಕಂಡಕ್ಟರ್ ಆಗಿ ದುಡಿದು ಮೇಲೆ ಬಂದ ನಟ ರಜನೀಕಾಂತ್‌ಗೆ ದೊಡ್ಡ ಫ್ಯಾನ್ ಪಾಲೋಯಿಂಗ್ ಇದೆ. ಸರಳ ವ್ಯಕ್ತಿತ್ವದ ನಟನನ್ನು ಸಿನಿಮಾ ಹೊರತಾಗಿಯೂ ಜನ ಇಷ್ಟಪಡುತ್ತಾರೆ.

Scroll to load tweet…

ಬಹಳಷ್ಟು ಸಿನಿಮಾಗಳನ್ನು ಕೊಟ್ಟ ನಟ ಸಿನಿಪ್ರಿಯರ ನಿರೀಕ್ಷೆಯನ್ನು ಎಂದೂ ಹುಸಿ ಮಾಡಿಲ್ಲ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ಕೊಡುತ್ತಲೇ ಬಂದಿದ್ದಾರೆ ಪೆಟ್ಟಾ ಖ್ಯಾತಿಯ ನಟ.

ಬರಡು ಭೂಮಿಯನ್ನು ಹಸಿರಾಗಿಸಿದ ನಟ ಮಾಧವನ್

ಇನ್ನು ರಾಜಕೀಯ ಪಕ್ಷದ ವಿಚಾರವಾಗಿ ನಟ ವಿಳಂಬ ಮಾಡುತ್ತಿದ್ದು, ರಜನಿ ಫ್ಯಾನ್ಸ್ ನಟನ ಬಿಗ್ ಎನೌನ್ಸ್ ಮೆಂಟ್ ನಿರೀಕ್ಷೆಯಲ್ಲಿದ್ದಾರೆ. ಆದರೆ ರಾಜಕೀಯ ಎಂಟ್ರಿ ಬಗ್ಗೆ ನಟ ಸ್ಪಷ್ಟ ಮಾಹಿತಿ ನೀಡಿಲ್ಲ.