ಹೀರೋಗೆ ಪೈರಸಿ ಕಾಟ.. ಆಪ್ ಬ್ಯಾನ್ ಮಾಡ್ತಾರೆ..ಇಂಥದ್ದಕ್ಕೆ ಬ್ರೇಕ್ ಯಾವಾಗ?
ರಿಷಬ್ ಶೆಟ್ಟಿ ಹೀರೋಕ್ಕೆ ಪೈರಸಿ ಕಾಟ/ ನೊಂದು ಸೋಶಿಯಲ್ ಮೀಡಿಯಾದಲ್ಲಿ ವಿಚಾರ ಹಂಚಿಕೊಂಡ ನಟ-ನಿರ್ದೇಶಕ/ ಜನರೇ ಮುಂದಾಗಿ ಇಮಥವನ್ನು ತಡೆಯಬವೇಕು/ ಆಪ್ ಗಳನ್ನು ಬ್ಯಾನ್ ಮಾಡುವ ಸರ್ಕಾರ ಇಂಥವುಗಳನ್ನೇಕೆ ಸುಮ್ಮನೆ ಬಿಡುತ್ತದೆ?
ಬೆಂಗಳೂರು(ಮಾ. 07) ನಿರ್ದೇಶಕ ರಿಷಬ್ ಶೆಟ್ಟಿ ನಟರಾಗಿ ಗುರುತಿಸಿಕೊಂಡಿದ್ದಾರೆ. ಅವರ 'ಹೀರೋ' ಸಿನಿಮಾ ಮಾರ್ಚ್ 5ರಂದು ತೆರೆಕಂಡಿದೆ. ಲಾಕ್‌ಡೌನ್ ಅವಧಿಯಲ್ಲಿಯೇ 24 ಜನರ ತಂಡ ಕಟ್ಟಿಕೊಂಡು, ಎಸ್ಟೇಟ್‌ವೊಂದರಲ್ಲಿ ಇದ್ದುಕೊಂಡು 'ಹೀರೋ' ಸಿನಿಮಾ ಮಾಡಿದ ಸಂಗತಿಯನ್ನು ಹಂಚಿಕೊಂಡಿದ್ದರು. ಈಗ ಒಂದು ಅತ್ಯಂತ ಬೇಸರವದ ವಿಚಾರವನ್ನು ಹೇಳಿದ್ದಾರೆ.
'ಹೀರೋ'ಗೆ ಪೈರಸಿ ಹಾವಳಿ ವಕ್ಕರಿಸಿದೆ. ಯಾರ ಕೈಯಲ್ಲಿ ಏನೂ ಇಲ್ಲ.. ನಮ್ಮ ಸಿನಿಮಾ ಪೈರಸಿಯಾಗಿದೆ ಎಂದು ರಿಷಬ್ ಬೇಸರ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಳಕ ನೋವು ಹಂಚಿಕೊಂಡಿದ್ದಾರೆ.
ಹೀರೋ ಹೇಗಿದ್ದಾನೆ; ಸಿನಿಮಾ ವಿಮರ್ಶೆ
ಇಡೀ ಊರು ಮಲಗಿದ್ದಾಗ, ಪ್ರೇಕ್ಷಕರನ್ನು ರಂಜಿಸುವುದಕ್ಕಾಗಿ ತುಂಬ ಕ್ವಿಕ್ ಆಗಿ ಒಂದು ಸಿನಿಮಾ ಮಾಡುವುದಕ್ಕೆ ಹೊರಡುತ್ತೇವೆ. ಅದನ್ನು ಮಾಡುವಾಗ ಅದನ್ನು ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಹಾಕುತ್ತೇವೆ ಎಂಬ ಅಂದಾಜು ಕೂಡ ಸಿಗುವುದಿಲ್ಲ. ನಂತರ ಚಿತ್ರಮಂದಿರ ಓಪನ್ ಆದಾಗ, ಎಲ್ಲ ಕೆಲಸಗಳನ್ನು ಮಾಡಿಕೊಂಡು, ಚಿತ್ರಮಂದಿರಕ್ಕೆ ತರುತ್ತೇವೆ. ಬಹುತೇಕ ಪ್ರೇಕ್ಷಕರಿಗೆ ಸಿನಿಮಾ ತುಂಬ ಇಷ್ಟ ಆಗುತ್ತದೆ ಆದರೆ, ಸಿನಿಮಾ ರಿಲೀಸ್ ಆದ ಮೂರನೇ ದಿನಕ್ಕೆ ಪೈರಸಿ ಆದರೆ....ಎಂದು ನೋವಿನಲ್ಲಿ ಮಾತನಾಡಿದ್ದಾರೆ.
ನಮ್ಮ ಸಿನಿಮಾ ಮಾತ್ರವಲ್ಲ. ದೊಡ್ಡವರ ಸಿನಿಮಾ ಪೈರಸಿ ಮಾಡಿದ್ದನ್ನು ಕಂಡಿದ್ದೇವೆ. ಮೊಬೈಲ್ ಗಳನ್ನು ಒಳಕ್ಕೆ ಬಿಟ್ಟುಕೊಂಡು ಶೂಟ್ ಮಾಡಲು ಅವಕಾಶ ಮಾಡಿಕೊಡುವುದು ಹೇಗೆ? ನಿಮಗೆ ಈ ಬಗೆಯ ಪೈರಸಿ ಲಿಂಕ್ ಕಳಿಸಿದರೆ ಅದನ್ನು ಕಳಿಸಿ. ಸೋಶಿಯಲ್ ಮೀಡಿಯಾದಿಂದ ತೆಗೆದು ಹಾಕುವ ಕೆಲಸ ಮಾಡುತ್ತೇವೆ. ಜನರೇ ಮುಂದೆ ನಿಂತು ಇಂಥವುಗಳಿಂದ ದೂರ ಇರಬೇಕು ಎಂದು ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ .