ಹಬ್ಬದ ದಿನ ಸರ್ಜಾ ಕುಟುಂಬದಲ್ಲಿ ಸಂತಸ, ಗಂಡು ಮಗುವಿಗೆ ತಂದೆಯಾದ ಧ್ರುವ ಸರ್ಜಾ
ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಕುಟುಂಬಕ್ಕೀಗ ಹೊಸ ಅತಿಥಿಯ ಆಗಮನವಾಗಿದೆ. ಧ್ರುವ ಅವರ ಪತ್ನಿ ಪ್ರೇರಣಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬೆಂಗಳೂರು (ಸೆ.18): ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಕುಟುಂಬದಲ್ಲೀಗ ಸಂಭ್ರಮ ಮನೆ ಮಾಡಿದೆ. ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಧ್ರುವ ಅವರ ಪತ್ನಿ ಪ್ರೇರಣಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇಂದು ಮುಂಜಾನೆ ಪ್ರೇರಣಾ ಅವರನ್ನು ಬೆಂಗಳೂರಿನ ಕೆ ಆರ್ ರಸ್ತೆಯ ಅಕ್ಷ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ದಂಪತಿಗಳು ಗಂಡು ಮಗುವಿಗೆ ತಂದೆಯಾಗಿದ್ದಾರೆ.
ಕಳೆದ ವರ್ಷ 2022ರ ಅಕ್ಟೋಬರ್ ನಲ್ಲಿ ಹೆಣ್ಣು ಮಗುವನ್ನು ಜೀವನದಲ್ಲಿ ಬರಮಾಡಿಕೊಂಡಿದ್ದ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಶಂಕರ್ ಈಗ ಎರಡನೇ ಮಗುವನ್ನು ಗೌರಿ-ಗಣೇಶ ಹಬ್ಬದ ದಿನ ಬರಮಾಡಿಕೊಂಡಿದ್ದಾರೆ.
ಕಳೆದ ತಿಂಗಳು ವರ ಮಹಾಲಕ್ಷ್ಮಿ ಹಬ್ಬದ ಶುಭ ದಿನ ಧ್ರುವ ಸರ್ಜಾ ಇನ್ಸ್ಟಾಗ್ರಾಂನಲ್ಲಿ ವಿಶೇಷ ವಿಡಿಯೊ ಹಾಕುವ ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ಲಿಟ್ಲ್ ಸ್ಟಾರ್ ನ ಆಗಮನವಾಗಲಿದೆ ಎಂದು ತಿಳಿಸಿದ್ದರು. ಕಳೆದ ವಾರ ತಮ್ಮ ತೋಟದ ಮನೆದಯಲ್ಲಿ ಸೀಮಂತ ಶಾಸ್ತ್ರ ಮಾಡಿದ್ದರು.
ಧ್ರುವ ಸರ್ಜಾ ಮತ್ತು ಪ್ರೇರಣ 2019 ನವೆಂಬರ್ 24ರಂದು ದಾಂಪತ್ಯಕ್ಕೆ ಕಾಲಿಟ್ಟರು. ಮದುವೆಯಾಗಿ 3 ವರ್ಷಗಳ ಬಳಿಕ ಮೊದಲ ಮಗುವನ್ನು ಸ್ವಾಗತಿಸಿದ್ದರು.