ದರ್ಶನ್‌ಗೆ ಬೇಲ್ ಸಿಕ್ಕ ಬೆನ್ನಲ್ಲಿಯೇ ದೇವರಿಗೆ ಹೂ ಅರ್ಪಿಸಿದ ಪತ್ನಿ ವಿಜಯಲಕ್ಷ್ಮಿ!
ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಅವರಿದ್ದ ಏಕಪೀಠದಿಂದ ರೇಣುಕಾಸ್ವಾಮಿ ಕೊಲೆ ಕೇಸಿನ ಆರೋಪಿ ನಟ ದರ್ಶನ್, ಆತನ ಸ್ನೇಹಿತೆ ಪವಿತ್ರಾಗೌಡ ಸೇರಿದಂತೆ ಒಟ್ಟು 7 ಮಂದಿಗೆ ಜಾಮೀನು ಮಂಜೂರು ಮಾಡಲಾಗಿದೆ. ಕಳೆದ ಕಳೆದ 6 ತಿಂಗಳಿಂದ ಜೈಲಲ್ಲಿ ಇದ್ದ ಪವಿತ್ರಾಗೌಡ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ..
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಆರೋಪದಲ್ಲಿ ಜೈಲು ಸೇರಿ, ಇದೀಗ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗಾಗಿ 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದ ನಟ ದರ್ಶನ್ ತೂಗುದೀಪ (Darshan Thoogudeepa) ಸೇರಿದಂತೆ ಒಟ್ಟು 7 ಮಂದಿಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಸಂಗತಿಗೆ ಸಂತೋಷಗೊಂಡ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಹೂ ಕೈನಲ್ಲಿ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಭಾರೀ ವೈರಲ್ ಆಗುತ್ತಿದೆ. ದೇವರ ವರಪ್ರಸಾದ ಎಂದಿರುವ ವಿಜಯಲಕ್ಷ್ಮೀ ಪೋಸ್ಟ್ ಈಗ ಭಾರೀ ವೈರಲ್ ಆಗುತ್ತಿದೆ.
ನಟ, ತಮ್ಮ ಪತಿ ದರ್ಶನ್ ಹಾಗೂ ಉಳಿದ ಆರು ಜನರಿಗೆ ಜಾಮೀನು ಸಿಗುತ್ತಿದ್ದಂತೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತೆ ದೇವರಿಗೆ ಮೊರೆ ಹೋಗಿದ್ದಾರೆ. ಮೊಟ್ಟಮೊದಲು ತಾವು ನಂಬಿರುವ ದೇವರಿಗೆ ಕೃತಜ್ನತೆ ಸಲ್ಲಿಸಿದ ವಿಜಯಲಕ್ಷ್ಮಿ, ಹೂವು ಹಿಡಿದು ಪೋಸ್ಟ್ ಮಾಡಿದ್ದಾರೆ. ಪತಿ ಜೈಲು ಪಾಲಾದ ದಿನದಿಂದಲೂ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಲೇ ಇದ್ದರು ವಿಜಯಲಕ್ಷ್ಮೀ. ದರ್ಶನ್ ಅವರು ಅರೆಸ್ಟ್ ಆಗಿ ಜೈಲು ಸೇರಿದ ದಿನಗಳಿಂದಲೂ ಕೂಡ ವಿಜಯಲಕ್ಷ್ಮಿ ಅವರು ಸತತವಾಗಿ ದೇವರಿಗೆ ಮೊರೆ ಹೋಗಿ ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದರು.
ಸಬ್ಸಿಡಿ ಹಣ, ರಾಜ್ಯ ಪ್ರಶಸ್ತಿಗಾಗಿ ರೂಪಾ ಅಯ್ಯರ್ ಹೋರಾಟ; ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಅವರಿದ್ದ ಏಕಪೀಠದಿಂದ ರೇಣುಕಾಸ್ವಾಮಿ ಕೊಲೆ ಕೇಸಿನ ಆರೋಪಿ ನಟ ದರ್ಶನ್, ಆತನ ಸ್ನೇಹಿತೆ ಪವಿತ್ರಾಗೌಡ ಸೇರಿದಂತೆ ಒಟ್ಟು 7 ಮಂದಿಗೆ ಜಾಮೀನು ಮಂಜೂರು ಮಾಡಲಾಗಿದೆ. ಕಳೆದ ಕಳೆದ 6 ತಿಂಗಳಿಂದ ಜೈಲಲ್ಲಿ ಇದ್ದ ಪವಿತ್ರಾಗೌಡ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಒಟ್ಟಾರೆಯಾಗಿ ಆರೋಪಿಗಳಾದ ಪವಿತ್ರಾಗೌಡ, ದರ್ಶನ್, ನಾಗರಾಜ್, ಲಕ್ಷ್ಮಣ್, ಅನುಕುಮಾರ್, ಜಗದೀಶ್ ಹಾಗೂ ಪ್ರದೂಷ್ ಗೆ ಜಾಮೀನು ಮಂಜೂರಾಗಿದ್ದು, ಇಂದು ಅಥವಾ ನಾಳೆ ಜೈಲಿನಿಂದ ಬಿಡುಗಡೆ ಆಗಿ ಹೊರಗೆ ಬರಲಿದ್ದಾರೆ.
ಒಟ್ಟಿನಲ್ಲಿ, ನಟ ದರ್ಶನ್ ತೂಗುದೀಪಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಮಂಜೂರು ಆದ ಬೆನ್ನಲ್ಲಿಯೇ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ದೇವರಿಗೆ ಹೂವುಗಳನ್ನು ಅರ್ಪಿಸಿ ತಾನು ಬೇಡಿಕೊಂಡಿದ್ದನ್ನು ಕರುಣಿಸಿದ್ದಕ್ಕೆ ಧನ್ಯತಾ ಭಾವವನ್ನು ಅರ್ಪಿಸಿದ್ದಾರೆ. ಇದೇ ಅವರ ಮೊಟ್ಟಮೊದಲ ಪ್ರತಿಕ್ರಿಯೆ ಆಗಿದೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಸೂಪರ್ಸ್ಟಾರ್ ರಜನಿ ! 74ರ ಹರೆಯದಲ್ಲೂ ಫುಲ್ ಜೋಶ್!
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಜನರು ಆರೋಪಿಗಳಾಗಿದ್ದರು. ಅದರಲ್ಲಿ ನಟಿ ಪವಿತ್ರಾಗೌಡ ಎ1 ಆರೋಪಿ ಆಗಿದ್ದರೆ, ನಟ ದರ್ಶನ್ ಎ2 ಆರೋಪಿ ಆಗಿದ್ದರು. ಇನ್ನು ಕೊಲೆ ಆರೋಪದಲ್ಲಿ ಸುಮಾರು 5 ತಿಂಗಳ ಕಾಲ ಜೈಲಿನಲ್ಲಿದ್ದರು. ಆದರೆ, ಗಂಡ ಜೈಲಿನಲ್ಲಿದ್ದ ಹಿನ್ನೆಲೆಯಲ್ಲಿ ದೇವರ ಮೊರೆ ಹೋಗಿದ್ದರು.