ಮಿಡಲ್‌ ಕ್ಲಾಸ್ ಫ್ಯಾಮಿಲಿ ಟಾಮ್‌ ಬಾಯ್‌ ಹುಡುಗಿ ಸಂಯುಕ್ತಾ ಹೆಗ್ಡೆ ಸಿನಿ ಜೀವನ ರೂಪಿಸಿಕೊಟ್ಟ 'ಕಿರಿಕ್ ಪಾರ್ಟಿ' ಸಿನಿಮಾ ರಿಲೀಸ್‌ ಆಗಿ ಇಂದಿಗೆ 4 ವರ್ಷಗಳನ್ನು ಪೂರೈಸಿದೆ.  ಹಳೆ ನೆನಪುಗಳ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡವ ಮೂಲಕ ಇಡೀ ತಂಡ ಸಂಭ್ರಮಿಸುತ್ತಿದೆ. ಹಾಗಿಯೇ ನಟಿ ಸಂಯುಕ್ತಾ ಶೇರ್ ಮಾಡಿರುವ ಫೋಟೋದಲ್ಲಿ ಒಂದು ವಿಶೇಷತೆಯೂ ಇದೆ...

ಕೊನೆಗೂ ರಶ್ಮಿಕಾ ಪೋಸ್ಟ್‌ಗೆ ಕಾಮೆಂಟ್ ಮಾಡಿದ ರಕ್ಷಿತ್ ಶೆಟ್ಟಿ! 

ಸಂಯುಕ್ತಾ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಒಟ್ಟಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದವರು. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಕ್ಷೇತ್ರದಲ್ಲಿ ಸಖತ್ ಹೆಸರು ಮಾಡಿದವರು ಹಾಗೂ ಕಡಿಮೆ ಅವಧಿಯಲ್ಲಿ ಕೈ ತುಂಬಾ ಆಫರ್‌ ಪಡೆದುಕೊಂಡವರು. ಕಿರಿಕ್ ಪಾರ್ಟಿ ಸಿನಿಮಾ ಚಿತ್ರೀಕರಣದ ವೇಳೆ ಸಂಯುಕ್ತಾ, ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಒಳ್ಳೆ ಸ್ನೇಹಿತರಾಗಿದ್ದರು. ಎಲ್ಲಿ ಹೋದರೂ ಒಟ್ಟಿಗೆ ಹೋಗಿ ಎಂಜಾಯ್ ಮಾಡುತ್ತಿದ್ದರು. ಈ ವೇಳೆ ಸೆರೆ ಹಿಡಿದ ಫೋಟೋವೊಂದನ್ನು ನೆನಪಿಗಾಗಿ ಶೇರ್ ಮಾಡಿಕೊಂಡಿದ್ದಾರೆ. 

'4 ವರ್ಷ ಕಿರಿಕ್ ಪಾರ್ಟಿ. ನನಗೆ ಆಗಿನ್ನೂ 17 ವರ್ಷವಷ್ಟೇ,' ಎಂದು ಮೂವರಿರುವ ಫೋಟೋವನ್ನು ಸಂಯುಕ್ತಾ ಅಪ್ಲೋಡ್ ಮಾಡಿದ್ದಾರೆ. ಚಿತ್ರದಲ್ಲಿ ಮಾತ್ರ ಸಂಯುಕ್ತಾ ಟಾಮ್‌ ಬಾಯ್ ಹಾಗೂ ಬೋಲ್ಡ್‌ ಎಂದು ಕೊಂಡಿದ್ದರು. ಆದರೆ ಆಕೆ ರಿಯಲ್ ಲೈಫಲ್ಲೂ ಅಷ್ಟೇ ಬೋಲ್ಡ್‌ ಎಂದು ತಿಳಿದು ಸಿನಿ ಪ್ರೇಮಿಗಳು ಆಕೆಯ ಗುಣಕ್ಕೆ ಫಿದಾ ಆಗಿದ್ದಾರೆ.

'ಬೆಳಗೆದ್ದು' ರಕ್ಷಿತ್ ಶೆಟ್ಟಿಯನ್ನು ನೆನೆದ ರಶ್ಮಿಕಾ; ಎಲ್ಲಾ ಸರಿ ಹೋಯ್ತಾ? 

ಆರ್ಯ ಪಾತ್ರದಲ್ಲಿ ಫೇಮ್‌ ಪಡೆದುಕೊಂಡ ನಂತರ ಸಂಯುಕ್ತಾ 'ಕಾಲೇಜ್‌ ಕುಮಾರ' ಚಿತ್ರದಲ್ಲಿ ಪ್ರಮುಖ ನಾಯಕಿಯಾಗಿ ಮಿಂಚಿದ್ದರು.  ನಂತರದ ದಿನಗಳಲ್ಲಿ ತಮಿಳು ಹಾಗೂ ತೆಲುಗು ಸಿನಿಮಾಗಳಿಗೆ ಸಹಿ ಮಾಡಿದರು. ಇದರ ಜೊತಗೆ ಕನ್ನಡದ ಬಿಗ್ ಬಾಸ್‌ ರಿಯಾಲಿಟಿ ಶೋ, ಹಿಂದಿ ವಾಹಿನಿಗಳಲ್ಲಿ ಪ್ರಸಾರವಾಗುವ MTV ರೋಡೀಸ್‌ ಮತ್ತು splitsvillaದಲ್ಲಿ ಸ್ಪರ್ಧಿಸಿದ್ದಾರೆ. ಒಟ್ಟಿನಲ್ಲಿ ಸಂಯುಕ್ತಾ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮಲ್ಟಿ ಟ್ಯಾಲೆಂಟೆಟ್ ಎಂದು ಸಾಬೀತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಲ್ಲಲ್ಲಿ ಕಿರಿಕ್ ಮಾಡ್ಕೊಂಡು ಸಿಕ್ಕಾಪಟ್ಟೆ ಕಿರಿಕ್ ಎಂಬ ಕುಖ್ಯಾತಿಯನ್ನೂ ಗಳಿಸಿದ್ದಾರೆ. 

ಕಿರಿಕ್ ಪಾರ್ಟಿ ಯಶಸ್ಸಿನ ನಂತರ ರಶ್ಮಿಕಾ-ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಆದರೆ, ಅದೇನು ಆಯಿತೋ, ಈ ಜೋಡಿ ಬೇರೆಯಾಯಿತು. ಅತ್ತ ತೆಲುಗಿನಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಹೆಸರು ಮಾಡಿದರು. ರಕ್ಷಿತ್ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾದರು. ಒಟ್ಟಿನಲ್ಲಿ ಈ ಮೂವರ ಜೀವನದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ.