ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಸಿನಿಮಾ 'ಕಿರಿಕ್ ಪಾರ್ಟಿ' ಚಿತ್ರಕಥೆಗೆ ಮಾತ್ರವಲ್ಲದೇ ತನ್ನದೇ ಅದ್ಭುತ ಹಾಡುಗಳ ಮೂಲಕ ಪ್ರೇಕ್ಷಕರ ಮನ ಗೆದ್ದ ಚಿತ್ರ. ಅಪಾರ ಸಂಖ್ಯೆಯಲ್ಲಿ ಅವಾರ್ಡ್‌ಗಳನ್ನು ಪಡೆದುಕೊಂಡಿರುವ ಈ ಕಿರಿಕ್ ಪಾರ್ಟಿ ಚಿತ್ರತಂಡದಲ್ಲಿ ಮತ್ತೊಂದು ಸಂಭ್ರಮ ಮನೆ ಮಾಡಿದೆ. ಅದುವೇ '100M'ವೀಕ್ಷಣೆ.

ಚಿತ್ರದಲ್ಲಿ ಸೂಪರ್ ಹಿಟ್ ಸಾಂಗ್ 'ಬೆಳಗೆದ್ದು ಯಾರ ಮುಖವ ನಾನು ನೋಡಿದೆ..' ಯುಟ್ಯೂಬ್‌ನಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಸಂತೋಷದ ವಿಚಾರವನ್ನು ರಶ್ಮಿಕಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಜೊತೆಗೆ ಯಾರನ್ನೆಲ್ಲಾ ಟ್ಯಾಗ್ ಮಾಡಿದ್ದಾರೆ ಎಂಬುವುದು ಕೊಂಚ ಕನ್ಫ್ಯೂಷನ್ ಕ್ರಿಯೇಟ್ ಮಾಡಿದೆ. ಈ ಪೋಸ್ಟಿಗೆ ವಿಸಿಟ್ ಮಾಡಿದವರು ಅಲ್ಲಿ ರಕ್ಷಿತ್ ಶೆಟ್ಟಿ ಹೆಸರಿದ್ಯಾ ಅಂತ ಚೆಕ್ ಮಾಡುತ್ತಿದ್ದಾರೆ. ಮತ್ತೆ ಪದೆ ಪದೇ ಕನ್ಫರ್ಮ್ ಮಾಡಿಕೊಳ್ಳುತ್ತಿದ್ದಾರೆ!

ನಮ್ಮ ಧರ್ಮ ಗೌರವಿಸುತ್ತೇನೆ ಇದು ತಮಾಷೆಗಾಗಿ; ಸರಸ್ವತಿ ಅವತಾರದಲ್ಲಿ ರಶ್ಮಿಕಾ ಮಂದಣ್ಣ! 

ರಶ್ಮಿಕಾ ಪೋಸ್ಟ್:
'ಬೆಳಗ್ಗೆದ್ದು-ನನ್ನ ಮೊಟ್ಟ ಮೊದಲ ಹಾಡು. ನಾನು ಸಿಕ್ಕಾಪಟ್ಟೆ ಇಷ್ಟ ಪಡುವ ಈ ಹಾಡು 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈಗಲೂ ಹಾಡು ಚಿತ್ರೀಕರಿಸಿದ ಪ್ರತಿ ಕ್ಷಣವೂ ನನ್ನ ಕಣ್ಣೆದುರಿದೆ. ನನ್ನೊಳಗೆ ನಾನು ಮತ್ತೆ ಸಾನ್ವಿ ಹುಡುಕುತ್ತಿರುವೆ. ಎಂಥ ಜರ್ನಿ..' ಎಂದು ಬರೆದು ರಿಷಬ್ ಶೆಟ್ಟಿ. ರಕ್ಷಿತ್ ಶೆಟ್ಟಿ, ಸಂಯುಕ್ತಾ ಹೆಗ್ಡೆ, ಅಜನೀಶ್ ಲೋಕನಾಥ್ ಹಾಗೂ ಪರಂ ಸ್ಟುಡಿಯೋವನ್ನು ಟ್ಯಾಗ್ ಮಾಡಿದ್ದಾರೆ.

'ಕಿರಿಕ್ ಪಾರ್ಟಿ' ಸಿನಿಮಾ ಚಿತ್ರೀಕರಣ ವೇಳೆ ಲವ್‌ನಲ್ಲಿ ಬಿದ್ದ ರಕ್ಷಿತ್ ಹಾಗೂ ರಶ್ಮಿಕಾ ಸಿನಿಮಾ ರಿಲೀಸ್‌ ಆಗಿ ಕೆಲವೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಇಬ್ಬರೂ ದೂರವಾದರು. ಅಂದಿನಿಂದ ರಶ್ಮಿಕಾ ಹಾಗೂ ರಕ್ಷಿತ್ ಸಂಪರ್ಕ ಕಡಿದುಕೊಂಡರು, ಆದರೀಗ ರಶ್ಮಿಕಾ ರಕ್ಷಿತ್‌ನನ್ನು ಟ್ಯಾಗ್ ಮಾಡಿರುವುದು ನೋಡಿದ ಇಬ್ಬರ ನಡುವೆ ಮತ್ತೆ ಸ್ನೇಹ ಹುಟ್ಟಿದ್ಯಾ ಎಂಬುವುದು ನೆಟ್ಟಿಗರ ಪ್ರಶ್ನೆ. ಅವರಿಬ್ಬರು ಮತ್ತೆ ಒಂದಾಗಲಿ ಎಂಬುವುದು ಅಭಿಮಾನಿಗಳ ಹಾರೈಕೆ.