Asianet Suvarna News Asianet Suvarna News

ಅಮ್ರತಂ ಜತೆ ಮದ್ವೆಯಾಗಿದ್ದ ಮಂಜುಳಾ ಮೈಗೆ ಬೆಂಕಿ-ಸಾವು; ಚಾಮರಾಜನಗರ ಹುಡುಗ ಮರುಮದ್ವೆಗೆ ಒಪ್ಪಿರಲಿಲ್ವಾ?!

ಮಂಜುಳಾ ಸಾವಿನ ಬಗ್ಗೆ ಇಂದಿಗೂ ಹಲವರು ಸಂದೇಹ ವ್ಯಕ್ತಪಡಿಸುತ್ತಾರೆ. 1986 ಸೆಪ್ಟೆಂಬರ್ 12 ರಂದು ನಟಿ ಮಂಜುಳಾ ನಿಧನರಾದರು. ಆದರೆ ಅದಕ್ಕೂ ಒಂದು ವಾರ ಮೊದಲು ಅವರ ಮೈಗೆ ಬೆಂಕಿ ತಗುಲಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ತೀವ್ರ ಹೋರಾಟ ನಡೆಸಿದ್ದರು. 

Sampathige Savaal fame Kannada actress Manjula unexpected death controversy srb
Author
First Published Jan 28, 2024, 4:01 PM IST

ಕನ್ನಡದ ನಟಿ ಮಂಜುಳಾರನ್ನು ಯಾರು ಮರೆಯಬಲ್ಲರು? ಕಪ್ಪು-ಬಿಳುಪು ಚಿತ್ರರಂಗದ ಕಾಲದಲ್ಲಿ ಇದ್ದ ನಟಿಯರಲ್ಲೊಬ್ಬರು ಮಂಜುಳಾ. ಕಲ್ಪನಾ, ಆರತಿ, ಭಾರತಿ, ಮಂಜುಳಾ, ಸರೋಜಾದೇವಿ, ಫಂಡರಿಭಾಯಿ ಮೊದಲಾದ ನಟಿಯರ ಸಾಲಿನಲ್ಲಿ ನಟಿ ಮಂಜುಳಾರನ್ನು ಕೂಡ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಡಾ ರಾಜ್ ಕುಮಾರ್ (Dr Rajkumar) ಜತೆ ಸಹ ನಟಿಸಿದ್ದರು ಮಂಜುಳಾ. ಮಂಜುಳಾ-ಡಾ ರಾಜ್ ಜೋಡಿಯಲ್ಲಿ 'ಸಂಪತ್ತಿಗೆ ಸವಾಲ್' ಚಿತ್ರದ 'ನನ್ನ ನೀನು ಗೆಲ್ಲಲಾರೆ' ಹಾಡು ಅಂದಿಗೂ ಇಂದೆಂದಿಗೂ ಭಾರೀ ಜನಪ್ರಿಯವಾಗಿದೆ. 

ನಟಿಯಾಗಿ ಚಿಕ್ಕ ವಯಸ್ಸಿಗೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಮಂಜುಳಾರಿಗೆ (Actress Manjula) ಅಂದಿನ ಕಾಲದ ಎಲ್ಲ ನಟರೊಂದಿಗೂ ನಟಿಸುವ ಭಾಗ್ಯ ದೊರಕಿತ್ತು. ಡಾ ರಾಜ್‌ಕುಮಾರ್, ಕಲ್ಯಾಣ್‌ ಕುಮಾರ್, ಶ್ರೀನಾಥ್ ಮುಂತಾದ ಸಮಕಾಲೀನ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ನಟಿ ಮಂಜುಳಾ ಅಂದು ಬಹುಬೇಡಿಕೆಯ ಸ್ಟಾರ್ ನಟಿಯಾಗಿದ್ದರು. ಆದರೆ 32ನೇ ವಯಸ್ಸಿನಲ್ಲಿಯೇ ತೀರಿಕೊಂಡರು. 

ಮಂಜುಳಾ ಸಾವಿನ ಬಗ್ಗೆ ಇಂದಿಗೂ ಹಲವರು ಸಂದೇಹ ವ್ಯಕ್ತಪಡಿಸುತ್ತಾರೆ. 1986 ಸೆಪ್ಟೆಂಬರ್ 12 ರಂದು ನಟಿ ಮಂಜುಳಾ ನಿಧನರಾದರು. ಆದರೆ ಅದಕ್ಕೂ ಒಂದು ವಾರ ಮೊದಲು ಅವರ ಮೈಗೆ ಬೆಂಕಿ ತಗುಲಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ತೀವ್ರ ಹೋರಾಟ ನಡೆಸಿದ್ದರು. ಆದರೆ, ಬದುಕಿನ ವಿರುದ್ಧ ಸಾವಿಗೆ ಶರಣಾದ ಮಂಜುಳಾ ಅವರು ಚಿತ್ರರಂಗ ಹಾಗು ಅಪಾರ ಅಭಿಮಾನಿಗಳನ್ನು ಅಗಲಿ ದೂರ ಹೋಗಿಬಿಟ್ಟರು. 

ಮಂಜುಳಾ ಅಷ್ಟು ಚಿಕ್ಕ ವಯಸ್ಸು, 32ರಲ್ಲೇ ಅಸು ನೀಗಿದ್ದರೂ ಅವರಿಗೆ ಅದಾಗಲೇ ಮದುವೆಯಾಗಿ ಒಬ್ಬ ಮಗ ಇದ್ದರು ಎನ್ನಲಾಗಿದೆ. ತಮಿಳುನಾಡಿನ ಎಂ ಕರುಣಾನಿಧಿ ಅಕ್ಕನ ಮಗ ಅಮೃತಂ ಜತೆ ವಿವಾಹವಾಗಿದ್ದರು ನಟಿ ಮಂಜುಳಾ. ಅವರಿಗೊಬ್ಬ ಮಗನೂ ಹುಟ್ಟಿದ. ಆದರೆ, ಕಾಲಕಳೆದಂತೆ ಗಂಡ-ಹೆಂಡತಿ ನಡುವೆ ಅನ್ಯೋನ್ಯತೆ ಇರಲಿಲ್ಲ, ಅಮೃತಂ ಮಂಜುಳಾರನ್ನು ಬಿಟ್ಟು ಶಾಶ್ವತವಾಗಿ ಮದ್ರಾಸ್ ಸೇರಿಕೊಂಡಿದ್ದರು ಎನ್ನಲಾಗಿದೆ.

ಕತ್ರಿನಾಗಿಂತ ಒಳ್ಳೆಯ ನಟಿ ಸಿಕ್ರೆ 'ಡಿವೋರ್ಸ್‌' ಮಾಡ್ತೀರಾ; ಪ್ರಶ್ನೆ ಕೇಳಿ ತಬ್ಬಿಬ್ಬಾದ ವಿಕ್ಕಿ ಕೌಶಲ್‌ ಏನ್ ಹೇಳಿದ್ರು..?!

ಬಳಿಕ ಒಬ್ಬಂಟಿಯಾಗಿದ್ದ ಮಂಜುಳಾ ಚಾಮರಾಜನಗರದ (Chamarajanagara) ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದರು. ಆದರೆ, ಪ್ರೀತಿಸಿಯೇನೋ ಆಗಿತ್ತು, ಜತೆಯಲ್ಲಿ ಓಡಾಡುತ್ತಲೂ ಇದ್ದ ಆ ಹುಡುಗ ಮಂಜುಳಾರನ್ನು ಮದುವೆಯಾಗಲು ಮಾತ್ರ ನಿರಾಕರಿಸಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಬೇಸತ್ತಿದ್ದ ನಟಿ ಮಂಜುಳಾ ಸ್ವತಃ ತಾವೇ ಗ್ಯಾಸ್ ಲೀಕ್ ಮಾಡಿಕೊಂಡು, ಕಡ್ಡಿ ಗೀರಿಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು. ತಕ್ಷಣಕ್ಕೆ ಪ್ರಾಣಪಕ್ಷಿ ಹಾರಿ ಹೋಗಲಿಲ್ಲ, ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿಕೊಂಡು ಅಲ್ಲಿ ವಾರಗಟ್ಟಲೇ ನರಳಿ ಸತ್ತರು ಎನ್ನುತ್ತಾರೆ ಕೆಲವರು.

ಆದರೆ, ಚಾಮರಾಜನಗರದ ಹುಡುಗನ ಜತೆ ಮಂಜಳಾಗಿದ್ದ ಸಂಬಂಧ, ಆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಎಂಬುದು ಅಂದಿನಿಂದ ಇಂದಿನವರೆಗೂ ಹರಿದಾಡುತ್ತಿರುವ ಗಾಸಿಪ್. ಆ ಬಗ್ಗೆ ಅಧಿಕೃತವಾಗಿ ಯಾರೂ ಮಾತನಾಡಿಲ್ಲ, ಈಗಲೂ ಯಾರೂ ಹೇಳುತ್ತಿಲ್ಲ.ಮದುವೆಯಾಗಿದ್ದ ಅಮೃತಂ ಜತೆ ಅನ್ಯೋನ್ಯವಾಗಿರಲಿಲ್ಲ ಎನ್ನುತ್ತಿದ್ದರಾದರೂ ಅದಕ್ಕೂ ಅಧಿಕೃತ ಮುದ್ರೆ ಒತ್ತಿದವರಾರು ಎನ್ನಬಹುದು. ಒಟ್ಟಿನಲ್ಲಿ ನಟಿ ಮಂಜುಳಾ ದುರಂತ ಸಾವು ಕಂಡಿದ್ದತೂ ನಿಜ!

ಅಂಬಿ ಲೈಫಲ್ಲಿ ಒಮ್ಮೆ ಮಾತ್ರ ಅತ್ತಿದ್ರು, ಕಣ್ಣೀರಿಗೆ ಅಸಲಿ ಕಾರಣ ನಂಗೊತ್ತು; ಗುಟ್ಟು ಬಿಚ್ಚಿಟ್ರು ಸುಮಲತಾ!

ಸತ್ಯ ಸಂಗತಿ ಏನೇ ಆಗಿರಲಿ, ನಟಿ ಮಂಜುಳಾ ಸತ್ತಿದ್ದು (Death) ಮಾತ್ರ ಅತಿ ಕಡಿಮೆ ವಯಸ್ಸಿನಲ್ಲಿ. ಮಂಜುಳಾ ಅನಿರೀಕ್ಷಿತ ಸಾವಿನಿಂದ ಅಮದು ಚಿfರಂಗ ಸೇರಿದಂತೆ ಇಡೀ ಕನ್ನಡನಾಡು ನಿಜವಾಗಿಯೂ ದಿಗ್ಭ್ರಮೆಗೊಂಡಿತ್ತು. ನಟಿ ಮಂಜುಳಾ ಸತ್ತು ಇಂದಿಗೆ ಬರೋಬ್ಬರಿ 40ಕ್ಕೂ ವರ್ಷಗಳು ಕಳೆದು ಹೋದರೂ ಇಂದಿಗೂ ಜನರು ಕನ್ನಡನಾಡು ಅವರನ್ನು ನೆನಪಿಸಿಕೊಳ್ಳುತ್ತಿದೆ ಎಂದರೆ ಅವರ ಕಲಾಸೇವೆಯೇ ಹೊರತೂ ಬೇರಿನ್ನೇನೂ ಅಲ್ಲ. 

ಚೆಂದ ನೋಡಿ ಮರುಳಾಗಿ ಮದ್ವೆಯಾಗ್ಬಿಟ್ರಾ ಉಮಾಶ್ರೀ; ಎರಡು ತಿಂಗಳ ಬಸುರಿಯನ್ನೇ ಬಿಟ್ಟೋದ್ನ ಗಂಡ..?!

Follow Us:
Download App:
  • android
  • ios