Asianet Suvarna News Asianet Suvarna News

ಅಂಬಿ ಲೈಫಲ್ಲಿ ಒಮ್ಮೆ ಮಾತ್ರ ಅತ್ತಿದ್ರು, ಕಣ್ಣೀರಿಗೆ ಅಸಲಿ ಕಾರಣ ನಂಗೊತ್ತು; ಗುಟ್ಟು ಬಿಚ್ಚಿಟ್ರು ಸುಮಲತಾ!

ಯಾವ್ ನೋವನ್ನು ಅವ್ರು ಅನುಭವಿಸಿದಾರೋ ಅದನ್ನೆಲ್ಲ ಅವ್ರ ಜತೆನಲ್ಲಿ ನಾನೂ ಅನುಭವಿಸಿದೀನಿ. ಅದಕ್ಕೇ ಆ ಒಂದು ವಿಷ್ಯದಲ್ಲಿ ಮಾತ್ರ ನಾನು ಕಾಂಪ್ರೋಮೈಸ್ ಆಗಲ್ಲ. ಅವ್ರಿಗೆ ಆದಂಥ ನೋವನ್ನ ನಾನು ಲೈಫಲ್ಲಿ ಯಾವತ್ತೂ ಮರೆಯಲ್ಲ..

Actor Politician Ambareesh cried once in his whole life says wife Sumalatha Ambareesh srb
Author
First Published Jan 28, 2024, 12:25 PM IST

'ಪ್ರಪಂಚದಲ್ಲಿ ಏನ್ ಬೇಕಾದ್ರೂ ತಡ್ಕೋತೀನಿ ನಾನು, ಆದ್ರೆ ಅಂಬರೀಷ್ ಕಣ್ಣಲ್ಲಿ ನೀರು ಬಂದ್ರೆ ಮಾತ್ರ ನಂಗೆ ಸಹಿಸಿಕೊಳ್ಳೋಕೆ ಆಗ್ತಿರಲಿಲ್ಲ. ನಾರ್ಮಲ್ಲಾಗಿ ಅಂಬರೀಷ್ ಕಣ್ಣೀರು ಹಾಕುವಂಥ ವ್ಯಕ್ತಿ ಅಲ್ಲ. ಅವ್ರ ಕಣ್ಣಲ್ಲಿ ನೀರು ಬರಲ್ಲ, ಅದೇನೋ ಬಂದಿತ್ತು ಒಂದ್ ಬಾರಿ, ಅವ್ರು ಕಣ್ಣೀರು ಹಾಕಿದ್ದನ್ನ ನಾನು ನೋಡಿದ್ದು ಒಂದೇ ಸಾರಿ, ಅದೂ ಕೂಡ ಅವರು ಸಾಯೋ ಟೈಮು ಹತ್ರ ಹತ್ರ ಬಂದಂಥ ಟೈಮ್‌ನಲ್ಲಿ. ಲಾಸ್ಟ್‌ ಲಾಸ್ಟ್‌ನಲ್ಲಿ, ಅವ್ರು ಯಾವ್ ರೀತಿ ಕೊರಗಿದ್ರು, ಅವ್ರಿಗೆ ಯಾವ್ ರೀತಿನಲ್ಲಿ ನೋವಾಯ್ತು ಅಂತ ನಾನ್ ನೋಡಿದ್ದೀನಿ. 

ಅಂಬರೀಷ್ ಅವ್ರ ಆ ನೋವು ಇಂದಿನ ನನ್ನ ಹಲವಾರು ಹೆಜ್ಜೆಗಳಿಗೆ ಕಾರಣ. ಅದನ್ನು ನಾನು ಡೀಟೇಲಾಗಿ ಹೇಳಲ್ಲ. ಆದ್ರೆ, ಯಾವ್ ನೋವನ್ನು ಅವ್ರು ಅನುಭವಿಸಿದಾರೋ ಅದನ್ನೆಲ್ಲ ಅವ್ರ ಜತೆನಲ್ಲಿ ನಾನೂ ಅನುಭವಿಸಿದೀನಿ. ಅದಕ್ಕೇ ಆ ಒಂದು ವಿಷ್ಯದಲ್ಲಿ ಮಾತ್ರ ನಾನು ಕಾಂಪ್ರೋಮೈಸ್ ಆಗಲ್ಲ. ಅವ್ರಿಗೆ ಆದಂಥ ನೋವನ್ನ ನಾನು ಲೈಫಲ್ಲಿ ಯಾವತ್ತೂ ಮರೆಯಲ್ಲ' ಎಂದು ಖಾಸಗಿ ಚಾನೆಲ್ ಒಂದರ ಸಂದರ್ಶನದ ವೇಳೆ ನಟಿ ಮತ್ತು ಸಂಸದೆ ಸುಮಲತಾ ಹೇಳಿದ್ದಾರೆ. 

ಸುಮಲತಾ ಹಾಗೂ ಅಂಬರೀಷ್ ದಂಪತಿಗಳು ಸಿನಿಮಾ ತಾರಾ ದಂಪತಿಗಳು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಅಂಬಿ ಮತ್ತು ಸುಮಲತಾ ಇಬ್ಬರೂ ಚಿತ್ರರಂಗದಲ್ಲಿ ಬಹಳಷ್ಟು ಮಿಂಚಿ ಹೆಸರು ಮಾಡಿದವರು. ಸುಮಲತಾ ಕನ್ನಡ, ತೆಲುಗು ಸೇರದಂತೆ ಬಹುಭಾಷಾ ನಟಿ ಎನಿಸಿಕೊಂಡಿದ್ದರೆ ಅಂಬರೀಷ್ ಕನ್ನಡಕ್ಕೆ ಸೀಮಿತರಾಗಿದ್ದರು. ಆದರೆ ನಟ ಅಂಬರೀಷ್ ನಾಯಕನಟರಾಗಿ ಮಾತ್ರವಲ್ಲ, ಅಗತ್ಯವಿದ್ದವರಿಗೆ ತಮ್ಮಲ್ಲಿರುವುದನ್ನು ದಾನ ಮಾಡುವ ಮೂಲಕ 'ದಾನಶೂರ ಕರ್ಣ' ಎಂದು ಬಿರುದು ಸಂಪಾದಿಸಿಕೊಂಡಿದ್ದರು. 

ಬಿಬಿK 10 ಕಪ್ ವಿನ್ನರ್ ಕಾರ್ತಿಕ್ ಮಹೇಶ್, ಮೈಸೂರಿನ ಮನೆಮನೆಯಲ್ಲಿ ಸಂಭ್ರಮ; ಅಸಲಿ ಕತೆಯೇನು?!

ಸಿನಿಮಾ ಮಾತ್ರವಲ್ಲ ರಾಜಕೀಯದಲ್ಲೂ ಕೂಡ ಅಂಬರೀಷ್ ಸಚಿವರಾಗಿ, ಮಂತ್ರಿಯಾಗಿ ಭಾರೀ ಛಾಪು ಒತ್ತಿದ್ದಾರೆ. ಅಂಬರೀಷ್ ಆರೋಗ್ಯ ಹದಗೆಡುತ್ತಿದ್ದಂತೆ ರಾಜಕೀಯದಿಂದ ಸ್ವಲ್ಪ ಸ್ವಲ್ಪವೇ ಅಂತರ ಕಾಯ್ದುಕೊಂಡಿದ್ದರು ಎಂಬುದನ್ನು ಬಿಟ್ಟರೆ ಸಾಯುವತನಕವೂ ಯಾವತ್ತೂ ತಮ್ಮ ಸಾಮಾಜಿಕ ಕಳಕಳಿ ಮರೆಯುತ್ತಲೇ ಇದ್ದರು.  ಅಂಬರೀಷ್ ಸತ್ತಾಗ ಕರುನಾಡಿನಲ್ಲಿ ಬಹಳಷ್ಟು ಮಂದಿ ಕಣ್ಣಿರು ಹಾಕಿದ್ದಾರೆ ಎಂಬ ಸಂಗತಿ ಗುಟ್ಟಾಗಿಯೇನೂ ಉಳಿದಿಲ್ಲ. 

ಚೆಂದ ನೋಡಿ ಮರುಳಾಗಿ ಮದ್ವೆಯಾಗ್ಬಿಟ್ರಾ ಉಮಾಶ್ರೀ; ಎರಡು ತಿಂಗಳ ಬಸುರಿಯನ್ನೇ ಬಿಟ್ಟೋದ್ನ ಗಂಡ..?!

ಸದ್ಯ ದಿವಂಗತ ಅಂಬರೀಷ್ ಹೆಂಡತಿ, ನಟಿ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಂಸದೆಯಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅಂಬರೀಷ್ ಮಗ ಅಭಿಷೇಕ್ ಸಿನಿಮಾ ನಟರಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ಸಮಯದಲ್ಲಿ ಸುಮಲತಾ ಅಗಲಿರುವ ತಮ್ಮ ಪತಿ ಅಂಬರೀಷ್ ಬಗ್ಗೆ ಮಾತನಾಡಿರುವ ವೀಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. 

ಮತ್ತೆ ಹೆದರಿಸಲು ಬರ್ತಿದಾರೆ ಅದೇ ಜೋಡಿ; ಯಾವುದಕ್ಕೂ ಎಲ್ರೂ ಹುಶಾರಾಗಿರಿ ಆಯ್ತಾ!

Follow Us:
Download App:
  • android
  • ios