ಸಮಂತಾ- ನಾಗಚೈತನ್ಯ ಟಾಲಿವುಡ್‌ ಇಂಡಸ್ಟ್ರಿಯ ಸೂಪರ್ ಕಪಲ್ ಎಂದೇ ಹೆಸರಾದವರು. ಪತಿ ನಾಗಚೈತನ್ಯ ಬರ್ತಡೇಗೆ ಸಮಂತಾ ವಿಶಸ್ ಗಮನ ಸೆಳೆದಿದೆ. 

ಟಾಲಿವುಡ್ ಸ್ಟಾರ್ ನಟ ನಾಗಚೈತನ್ಯ 33 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪತಿಯ ಹುಟ್ಟುಹಬ್ಬಕ್ಕೆ ಸಮಂತಾ ಅಕ್ಕಿನೇನಿ ವಾರ್ಮ್‌ಫುಲ್ ವಿಶ್ ಮಾಡಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಪತಿ- ಪತ್ನಿಯರಿಬ್ಬರೂ ಗೋವಾದಲ್ಲಿ ಬರ್ತಡೇ ಸೆಲಬ್ರೇಟ್ ಮಾಡಿದ್ದಾರೆ. 

View post on Instagram

' ನಿನ್ನ ಖುಷಿಯಾಗಿರಬೇಕೆಂದು ನಾನು ಪ್ರತಿದಿನವೂ ಪ್ರಾರ್ಥಿಸುತ್ತೇನೆ. ಪ್ರತಿದಿನವೂ ನೀನು ಬೆಳೆಯುತ್ತಿರುವುದನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ನಾವು ಇಂದು ಹೆಚ್ಚು ಸ್ಟ್ರಾಂಗ್ ಆಗಿದ್ದೇವೆ. ಅದಕ್ಕೆ ಖುಷಿಯಿದೆ. ಐ ಲವ್ ಯೂ. ಹ್ಯಾಪಿ ಬರ್ತಡೇ' ಎಂದು ವಿಶ್ ಮಾಡಿದ್ದಾರೆ. 

View post on Instagram

ಸಮಂತಾ- ನಾಗಚೈತನ್ಯ ಗೋವಾದಲ್ಲಿ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.