ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಮೇ 20ರಂದು ಬಿಡುಗಡೆಗೆ ಸಜ್ಜಾಗಿದೆ.

ರಕ್ಷಿತ್‌ ಶೆಟ್ಟಿತಮ್ಮ ಪರವಃ ಸ್ಟುಡಿಯೋ ಮೂಲಕ ನಿರ್ಮಿಸುತ್ತಿರುವ ‘ಸಕುಟುಂಬ ಸಮೇತ’ ಚಿತ್ರ ಮೇ 20ಕ್ಕೆ ಬಿಡುಗಡೆಯಾಗಲಿದೆ. ಹೊಸಬರ ನಿರ್ದೇಶನ, ನಟನೆ ಇರುವ ಈ ಚಿತ್ರದ ಓಟಿಟಿ ರೈಟ್ಸ್‌ ವೂಟ್‌ ಸೆಲೆಕ್ಟ್ ಪಾಲಾಗಿದೆ. ಚಿತ್ರದ ಟ್ರೇಲರ್‌ ಲಾಂಚ್‌ ಪ್ರಯುಕ್ತ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ರಕ್ಷಿತ್‌ ಶೆಟ್ಟಿಮಾತನಾಡಿದರು.

‘ಈ ಚಿತ್ರದ ನಿರ್ದೇಶಕ ರಾಹುಲ್‌ ‘ಉಳಿದವರು ಕಂಡಂತೆ’ ಚಿತ್ರಕ್ಕೆ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿದ್ದರು. ಚೆನ್ನಾಗಿ ಶಾರ್ಚ್‌ಫಿಲಂ ಮಾಡುವ ಇವರ ಫೀಚರ್‌ ಸಿನಿಮಾ ಬಗ್ಗೆ ಕುತೂಹಲ ಇತ್ತು. ಸಿನಿಮಾ ನೋಡಿದ್ದು ವಿಭಿನ್ನ ಅನುಭವ. ಅಚ್ಯುತ್‌ ಕುಮಾರ್‌ ನಗು ನಗುತ್ತಲೇ ಮಾತನಾಡುತ್ತಾ ಕಣ್ಣಲ್ಲಿ ನೀರು ತರಿಸ್ತಾರೆ. ಕ್ಲೈಮ್ಯಾಕ್ಸ್‌ ನೋಡಿದಾಗ ರೋಮಾಂಚನ ಆಯ್ತು. ಈ ಸಿನಿಮಾವನ್ನು ಓಟಿಟಿಗೆ ಅಂತಲೇ ಮಾಡಿದ್ದೆವು. ಆದರೆ ಇದನ್ನು ನೋಡಿದ ಕಲರ್ಸ್‌ ಟೀಮ್‌ನವರು ಇದನ್ನು ಥಿಯೇಟರ್‌ನಲ್ಲಿ ರಿಲೀಸ್‌ ಮಾಡಿದರೆ ಖಂಡಿತಾ ಓಡುತ್ತೆ, ಜನ ಮೆಚ್ಚಿಕೊಳ್ತಾರೆ ಅಂದರು. ಹೀಗಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಾದರೂ ರಿಲೀಸ್‌ ಮಾಡುವ ನಿರ್ಧಾರಕ್ಕೆ ಬಂದೆವು’ ಎಂದರು.

ಗಾಂಧಿನಗರದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಬಗ್ಗೆ ಗಾಸಿಪ್‌!

ನಿರ್ದೇಶಕ ರಾಹುಲ್‌, ‘ಇದೊಂದು ಫ್ಯಾಮಿಲಿ ಡ್ರಾಮಾ. ಮದುವೆಗೆ ಇನ್ನೇನು ಒಂದು ವಾರ ಇರುವಾಗ ಹುಡುಗಿ ಮದುವೆ ಬೇಡ ಅಂತಾಳೆ. ಆಮೇಲೆ ಏನಾಗುತ್ತೆ ಅನ್ನೋದು ಚಿತ್ರದ ಒನ್‌ಲೈನ್‌’ ಎಂದರು.

ಅಚ್ಯುತ ಕುಮಾರ್‌ ಸಿನಿಮಾ ಬಗೆಗಿನ ಅನುಭವ ಹಂಚಿಕೊಂಡರು. ನಾಯಕ ಭರತ್‌, ನಾಯಕಿ ಸಿರಿ ರವಿಕುಮಾರ್‌, ನಟನ ಕೃಷ್ಣ ಹೆಬ್ಬಾಳೆ, ಸಂಗೀತ ನಿರ್ದೇಶಕ ಮಿಧುನ್‌ ಮುಕುಂದನ್‌, ನಟಿಯರಾದ ರೇಖಾ ಕೂಡ್ಲಗಿ, ವಿಜಯಲಕ್ಷ್ಮೇ ಪಾಟೀಲ್‌, ಛಾಯಾಗ್ರಾಹಕ ಕರಮ್‌ ಛಾವ್ಲಾ ಉಪಸ್ಥಿತರಿದ್ದರು. ಪರಂವಃ ಸ್ಟುಡಿಯೋ ಯೂಟ್ಯೂಬ್‌ನಲ್ಲಿ ಟ್ರೇಲರ್‌ ಬಿಡುಗಡೆಯಾಗಿದೆ.

ಮದುವೆ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುತ್ತಿದ್ದವರಿಗೆ ರಕ್ಷಿತ್ ಶೆಟ್ಟಿ ಕೊಟ್ರು ಕ್ಲಾರಿಟಿ!

ಅಚ್ಯುತ್‌ ಕುಮಾರ್‌, ಕೃಷ್ಣ ಹೆಬ್ಬಾಲೆ, ಭರತ್‌ ಜಿ ಬಿ, ಸಿರಿ ರವಿಕುಮಾರ್‌, ಪುಷ್ಪ ಬೆಳವಾಡಿ, ರೇಖಾ ಕೂಡ್ಲಿಗಿ, ಜಯಲಕ್ಷ್ಮೀ ಪಾಟೀಲ್‌ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ನಾಯಕ- ನಾಯಕಿ ಸಿನಿಮಾ ಎನ್ನುವುದಕ್ಕಿಂತ ಕಲಾವಿದರ ಸಿನಿಮಾ ಎಂಬುದನ್ನು ಚಿತ್ರದ ಟೈಟಲ್‌ ಹಾಗೂ ಪೋಸ್ಟರ್‌ ರಿವೀಲ್‌ ಮಾಡಿದೆ. ಕಮ್‌ರ್‍ ಚಾವ್ಲಾ, ಸಂದೇಪ್‌ ವಲ್ಲೂರಿ ಛಾಯಾಗ್ರಾಹಣ, ಮಿಧುನ್‌ ಮುಕುಂದನ್‌ ಸಂಗೀತ ಚಿತ್ರಕ್ಕಿದೆ. ‘ನಮ್ಮ ಪರಂವಃ ಸ್ಟುಡಿಯೋ ನಿರ್ಮಾಣದ ಮುಂದಿನ ಸಿನಿಮಾ ಇದು. ನಿಮ್ಮೆಲ್ಲರ ಬೆಂಬಲ ಇರಲಿ’ ಎನ್ನುವ ಸಾಲುಗಳ ಜತೆ ನಟ ರಕ್ಷಿತ್‌ ಶೆಟ್ಟಿಅವರು ಚಿತ್ರದ ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜಿ ಎಸ್‌ ಗುಪ್ತ, ನಿರ್ಮಾಣದಲ್ಲಿ ರಕ್ಷಿತ್‌ ಶೆಟ್ಟಿಅವರಿಗೆ ಸಾಥ್‌ ನೀಡುತ್ತಿದ್ದಾರೆ.

"