Asianet Suvarna News Asianet Suvarna News

Sakath: ಅಂಧರ ಅಸೋಸಿಯೇಷನ್‌ಗೆ ಪತ್ರದ ಮೂಲಕ ಕ್ಷಮೆ ಕೇಳಿದ ನಿರ್ದೇಶಕ ಸುನಿ

ಸಖತ್ ಸಿನಿಮಾ ಪ್ರದರ್ಶನಕ್ಕೆ ಸ್ಟೇ ತರಲು ಅಂಧರ ಅಸೋಸಿಯೇಷನ್ ಹೊರಟಿತ್ತು. ಇದು ಅಂಧರ ಕುರಿತಾದ ಸಿನಿಮಾ, ಇದರಲ್ಲಿ ತಪ್ಪಾಗಿದ್ದರೆ, ನಿಮ್ಮ ಮನ ನೋಯಿಸುವ ವಿಷಯ ಇದ್ದರೆ ತಿದ್ದಿಕೊಳ್ಳುತ್ತೇವೆ ಎಂದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಕ್ಷಮೆ ಯಾಚಿಸಿದ್ದಾರೆ.

sakath movie director simple suni apologizes to the blind association gvd
Author
Bangalore, First Published Nov 26, 2021, 8:53 PM IST
  • Facebook
  • Twitter
  • Whatsapp

ಬೆಂಗಳೂರು (ನ.26): ನಿರ್ದೇಶಕ ಸಿಂಪಲ್​ ಸುನಿ (Simple Suni) ಮತ್ತು  ಗೋಲ್ಡನ್​ ಸ್ಟಾರ್​ ಗಣೇಶ್ (Golden Star Ganesh)​ ಅಭಿನಯದ 'ಸಖತ್' (Sakath) ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಸಿನಿಪ್ರಿಯರಿಂದ ಒಳ್ಳೆಯ ಮೆಚ್ಚುಗೆಯನ್ನ ಪಡೆದಿದೆ. ಈ ಮಧ್ಯೆ 'ಸಖತ್' ಸಿನಿಮಾ ಪ್ರದರ್ಶನಕ್ಕೆ ಸ್ಟೇ (Stay) ತರಲು ಅಂಧರ ಅಸೋಸಿಯೇಷನ್ (Blind Association) ಹೊರಟಿತ್ತು. ಇದು ಅಂಧರ ಕುರಿತಾದ ಸಿನಿಮಾ, ಇದರಲ್ಲಿ ತಪ್ಪಾಗಿದ್ದರೆ, ನಿಮ್ಮ ಮನ ನೋಯಿಸುವ ವಿಷಯ ಇದ್ದರೆ ತಿದ್ದಿಕೊಳ್ಳುತ್ತೇವೆ ಎಂದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಕ್ಷಮೆ (Forgiveness) ಯಾಚಿಸಿದ್ದಾರೆ.

Golden Star Ganesh: ನಾನು ಎಸ್.ಪಿ.ಬಾಲು ಆಗಬೇಕು, ಇಳಯರಾಜ ಆಗಬೇಕು ಎಂದ 'ಸಖತ್ ಬಾಲು'

ಹೌದು! 'ಸಖತ್' ಸಿನಿಮಾ ಒಬ್ಬ ಅಂಧನ ಸುತ್ತ ಸುತ್ತುವ ಕಥೆ. ಅಂಧನ ಪಾತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿದ್ದು, ಸಿಂಪಲ್ ಸುನಿ ನಿರ್ದೇಶಿಸಿದ್ದಾರೆ. ಇಂದು ಚಿತ್ರ ತೆರೆ ಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಸದ್ಯ ಸಿನಿಮಾ ಪ್ರದರ್ಶನಕ್ಕೆ ಸ್ಟೇ ತರಲು ಅಂಧರ ಅಸೋಸಿಯೇಷನ್ ಹೊರಟಿತ್ತು. ಚಿತ್ರದ ನಿರ್ದೇಶಕ ಸುನೀಲ್ ಕುಮಾರ್ (ಸುನಿ) ಈ ಬಗ್ಗೆ ಪತ್ರ ಬರೆದು ಕ್ಷಮೆ ಯಾಚಿಸಿದ್ದಾರೆ. 'ಇದು ಅಂಧರ ಕುರಿತಾದ ಸಿನಿಮಾ, ಇದರಲ್ಲಿ ತಪ್ಪಾಗಿದ್ದರೆ, ನಿಮ್ಮ ಮನ ನೋಯಿಸುವ ವಿಷಯ ಇದ್ದರೆ ತಿದ್ದಿಕೊಳ್ಳುತ್ತೇವೆ. ಸಿನಿಮಾ ಬಿಡುಗಡೆ ಮುಂದುವರೆಸಲು ಅನುವು ಮಾಡಿಕೊಡಿ. ತಿಳಿದೋ ತಿಳಿಯದೆಯೋ ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಇಂದು ಸಂಜೆ ನಿಮಗೆಲ್ಲಾ ಸಿನಿಮಾ ತೋರಿಸಿ, ತಪ್ಪಿದ್ದರೆ ಸರಿಪಡಿಸಿಕೊಳ್ಳುತ್ತೇವೆ. ನಮ್ಮ ಚಿತ್ರತಂಡ ಹಾಗೂ ಚಿತ್ರದ ಅಭಿಮಾನಿಗಳಿಂದ ಯಾವುದೇ ರೀತಿಯ ತೊಂದರೆ ಆಗದಂತೆ ವಿನಂತಿಸಿಕೊಳ್ಳುತ್ತೇನೆ ಈ ಮೂಲಕ ಭರವಸೆ ನೀಡುತ್ತೇನೆ' ಎಂದು 'ಸಖತ್' ಚಿತ್ರದ ನಿರ್ದೇಶಕ ಸುನಿ ಪತ್ರದಲ್ಲಿ ತಿಳಿಸಿದ್ದಾರೆ.

sakath movie director simple suni apologizes to the blind association gvd

ಇನ್ನು ಅಂಧರ ಸಮುದಾಯಕ್ಕೆ ಸಿಂಪಲ್ ಸುನಿ 'ಸಖತ್' ಸಿನಿಮಾ ತೋರಿಸುತ್ತಿದ್ದು, ಈ ವಿಚಾರವಾಗಿ ಇಂದು ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ರೊಮ್ಯಾಂಟಿಕ್ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಟಿ.ವಿ. ರಿಯಾಲಿಟಿ ಶೋ ಮತ್ತು ಕೋರ್ಟ್ ಕೇಸ್ ಸುತ್ತ ಸಾಗುತ್ತದೆ. ಚಿತ್ರದಲ್ಲಿ ಗಣೇಶ್‌ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. 'ಚಮಕ್' ಚಿತ್ರದ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಕೊಟ್ಟಿದ್ದ ಗಣಿ-ಸುನಿ ಈ ಬಾರಿ 'ಸಖತ್' ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾ ಟೀಸರ್‌ಗೆ (Teaser) ಅಭೂತ ಪೂರ್ವ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಬಾರಿಗೆ ಈ ಚಿತ್ರದಲ್ಲಿ ಕಣ್ಣು ಕಾಣದ ವ್ಯಕ್ತಿಯಾಗಿ ಗಣೇಶ್​ ಕಾಣಿಸಿಕೊಂಡಿದ್ದಾರೆ. ಕಚಗುಳಿ ಇಡುವ ಡೈಲಾಗ್​ಗಳು, ಭರ್ಜರಿ ಕಾಮಿಡಿ ಟೀಸರ್‌ನಲ್ಲಿತ್ತು. ಹಾಗೇ ಚಿತ್ರದ ಹಾಡುಗಳು ಕೂಡ ಎಲ್ಲರ ಗಮನ ಸೆಳೆಯುತ್ತಿವೆ. 

ಎರಡೂವರೆ ಗಂಟೆ ನಗಿಸುವ ಸಿನಿಮಾ ಸಖತ್‌: ಸಿಂಪಲ್‌ ಸುನಿ

ಚಿತ್ರದಲ್ಲಿ ಗಣೇಶ್​ ಜೊತೆ ನಿಶ್ವಿಕಾ ನಾಯ್ಡು (Nishwika Naidu), ಸುರಭಿ (Surabhi) ನಾಯಕಿಯರಾಗಿ ನಟಿಸಿದ್ದಾರೆ. ರಂಗಾಯಣ ರಘು (Rangayana Raghu), ಸಾಧು ಕೋಕಿಲ (Sadhu Kokila), ಗಿರಿ, ಧರ್ಮಣ್ಣ ಮುಂತಾದ ಕಲಾವಿದರ ತಾರಾಬಳಗ ಚಿತ್ರಕ್ಕಿದೆ. ಕೆವಿಎನ್​ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಈ ಸಿನಿಮಾ ತಯಾರಾಗಿದ್ದು,​ ನಿಶಾ ವೆಂಕಟ್​ ಕೋನಂಕಿ ಮತ್ತು ಸುಪ್ರಿತ್​ ಬಂಡವಾಳ ಹಾಕಿದ್ದಾರೆ. ಜೂಡಾ ಸ್ಯಾಂಡಿ (Judah Sandhy) ಸಂಗೀತ ಸಂಯೋಜನೆ, ಶಾಂತ್​ ಕುಮಾರ್​ ಸಂಕಲನ ಮತ್ತು ಸಂತೋಷ್​ ರೈ ಪಾತಾಜೆ ಕ್ಯಾಮರಾ ಕೈಚಳಕ 'ಸಖತ್'​ ಸಿನಿಮಾಗಿದೆ. 

Follow Us:
Download App:
  • android
  • ios