ಸಾಯಿ ಪಲ್ಲವಿ ಮೇಕಪ್ ಇಲ್ಲದೆಯೇ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರ ಸಿನಿಮಾಗಳು ಯಶಸ್ಸು ಕಂಡರೂ, ಆನ್‌ಲೈನ್‌ನಲ್ಲಿ ವೀಕ್ಷಕರು ಇಷ್ಟಪಡುತ್ತಾರೆ. ಸಾಯಿ ಪಲ್ಲವಿ ಅವರಿಗೆ ರಾಜ್ಯ ಪ್ರಶಸ್ತಿ ಗೆಲ್ಲುವ ಆಸೆಯಿದೆ. 21ನೇ ವಯಸ್ಸಿನಲ್ಲಿ ಅಜ್ಜಿ ನೀಡಿದ ಸೀರೆಯನ್ನು ಪ್ರಶಸ್ತಿ ಗೆದ್ದಾಗ ಧರಿಸಬೇಕೆಂಬುದು ಅವರ ಬಯಕೆ. ಪ್ರೇಕ್ಷಕರು ತಮ್ಮ ಪಾತ್ರಗಳಿಗೆ ಕನೆಕ್ಟ್ ಆದರೆ ಅದೇ ದೊಡ್ಡ ಪ್ರಶಸ್ತಿ ಎಂದು ಅವರು ಹೇಳಿದ್ದಾರೆ.
ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ನಿಜಕ್ಕೂ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಸ್ಟ್ಯಾಂಡರ್ಡ್ ಸೆಟ್ ಮಾಡಿಬಿಟ್ಟಿದ್ದಾರೆ. ಮೇಕಪ್ ಹಾಕದಿದ್ದರೂ, ಸರಳ ಲುಕ್ ಜೀವನ ಆಯ್ಕೆ ಮಾಡಿಕೊಂಡರು ಅಭಿಮಾನಿಗಳು ಇರುತ್ತಾರೆ ಅಂತ ಸಾಭೀತು ಮಾಡಿದ್ದಾರೆ. ಸಾಯಿ ಪಲ್ಲವಿ ಸಿನಿಮಾಗಳು ವೀಕ್ಷಕರಿಗೆ ಇಷ್ಟವಾಗುತ್ತದೆ. ಕೆಲವೊಂದು ಸಿನಿಮಾಗಳು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತದೆ ಕೆಲವೊಂದು ವಿಫಲವಾಗುತ್ತದೆ. ಸಿನಿಮಾ ಕೈ ಕೊಟ್ಟರೂ ಸಹ ಆನ್‌ಲೈನ್ ಅಥವಾ ಓಟಿಟಿಯಲ್ಲಿ ಸಿನಿಮಾ ನೋಡುವಷ್ಟು ಕ್ರೇಜ್ ಇದೆ. ಆದರೆ ಪಲ್ಲವಿಗೆ ರಾಜ್ಯ ಪ್ರಶಸ್ತಿ ಬಗ್ಗೆ ಇರುವ ಒಂದೇ ಒಂದು ಆಸೆ ಹೇಳಿಕೊಂಡಿದ್ದಾರೆ.
'ನನಗೆ ಸದಾ ನ್ಯಾಷನಲ್ ಅವಾರ್ಡ್ ಗೆಲ್ಲಬೇಕು ಅನ್ನೋ ಆಸೆ ತುಂಬಾನೇ ಇತ್ತು ಏಕೆಂದರೆ ನನಗೆ 21 ವರ್ಷವಿದ್ದಾಗ ನನ್ನ ಅಜ್ಜಿ ನನಗೊಂದು ಸೀರೆ ಕೊಟ್ಟಿದ್ದರು.ಆ ಸೀರಿಯನ್ನು ನನ್ನ ಕೈಯಲ್ಲಿ ಇಟ್ಟು ಇದನ್ನು ನಿನ್ನ ಮದುವೆಗ ಧರಿಸಬೇಕು ಅಂತ ಹೇಳಿಬಿಟ್ಟರು. ಆ ಸಮಯದಲ್ಲಿ ಅವರಿಗೆ ಆರೋಗ್ಯ ಸರಿಯಾಗಿರಲಿಲ್ಲ ಹಾಗೂ ಆಪರೇಷನ್ ಆಗಿತ್ತು. ಆ ಸಮಯದಲ್ಲಿ ನನ್ನ ಮದುವೆನೇ ಮುಂದೆ ಇರುವುದು ಅಂದುಕೊಂಡು ಮದುವೆಯಲ್ಲಿ ಧರಿಸಲು ನಿರ್ಧರಿಸಿದೆ ಆದರೆ ನಾನು ಮದುವೆ ಆಗುವ ಸಮಯದಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟೆ' ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ.
ಇದ್ದಕ್ಕಿದ್ದಂತೆ ಶೂಟಿಂಗ್ ನಿಲ್ಲಿಸಿಬಿಟ್ಟ ರವಿಚಂದ್ರನ್; ಕೂದಲು ಮುಖ ಮುಚ್ಚುತ್ತಿತ್ತು ಅಂತ ಶಕುನಿ ಬಿಟ್ರಾ?
'ನನಗೆ 23 ವರ್ಷ ಆಗುತ್ತಿದ್ದಂತೆ ಪ್ರೇಮಮ್ ಸಿನಿಮಾ ಮಾಡಿದೆ. ಆಗ ನಾನು ಮುಂದೆ ಒಂದು ದಿನ ದೊಡ್ಡ ಪ್ರಶಸ್ತಿ ಗೆಲ್ಲುತ್ತೀನಿ ಅನ್ನೋ ಭರವಸೆ ಹುಟ್ಟಿಕೊಂಡಿತ್ತು ಏಕೆಂದರೆ ಆ ಸಮಯದಲ್ಲಿ ರಾಜ್ಯ ಪ್ರಶಸ್ತಿನೇ ದೊಡ್ಡ ಪ್ರಶಸ್ತಿ ಆಗಿತ್ತು. ನನ್ನ ಪ್ರಕಾರ ರಾಜ್ಯ ಪ್ರಶಸ್ತಿ ಅಂದ್ರೆ ಸೀರೆಗೆ ಕನೆಕ್ಟ್ ಆಗಿರುವುದು ಅಂತ. ಸದ್ಯಕ್ಕೆ ನನಗೆ ಇರುವ ಪ್ರೆಶರ್ ಏನೆಂದರೆ ಅವಾರ್ಡ್ ಗೆಲ್ಲುವುದು ಏಕೆಂದರೆ ಆ ಸೀರೆಯನ್ನು ಧರಿಸಬಹುದು. ಈಗ ನಾನು ಆಯ್ಕೆ ಮಾಡಿಕೊಳ್ಳುತ್ತಿರುವ ಪಾತ್ರಗಳು ತುಂಬಾನೇ ವಿಭಿನ್ನವಾಗಿದೆ, ವೀಕ್ಷಕರು ನನ್ನ ಪಾತ್ರವನ್ನು ನೋಡಿ ಖುಷಿ ಪಟ್ಟು ಕನೆಕ್ಟ್ ಆಗಿಬಿಟ್ಟರೆ ಖಂಡಿತಾ ನಾನು ಗೆದ್ದಿರುವೆ. ಜನರು ಪಾತ್ರ ಇಷ್ಟ ಪಡುವುದು ಕನೆಕ್ಟ್ ಆಗುವುದು ನಿಜಕ್ಕೂ ದೊಡ್ಡ ಅವಾರ್ಡ್' ಎಂದು ಪಲ್ಲವಿ ಹೇಳಿದ್ದಾರೆ.
ನಾವು ದುಬಾರಿ ಕಾರಿನಲ್ಲಿ ಓಡಾಡಬೇಕು ದೊಡ್ಡ ಶ್ರೀಮಂತರು ಅಂತ ತೋರಿಸಿಕೊಳ್ಳುವುದು ನಿಲ್ಲಿಸಬೇಕು: ನಟಿ ಸೋನು ಗೌಡ

