2014ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ  ಸಿನಿಮಾ 'ಮಾಣಿಕ್ಯ'.  ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ತಮಿಳು ನಟಿ ವರಲಕ್ಷ್ಮಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಅಷ್ಟಕ್ಕೂ ಇದು ನಿಜಾನಾ?

ಉದ್ಯಮಿ ಜೊತೆ ಮದುವೆ:

ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ವರಲಕ್ಷ್ಮಿ ಶರತ್‌ ಕುಮಾರ್‌ ಭಾರತೀಯ ಕ್ರಿಕೆಟ್‌ ತಂಡದ ಜೊತೆ ಸಂಬಂಧ ಹೊಂದಿರುವ ಉದ್ಯಮಿ ಜೊತೆ ಡೇಟಿಂಗ್ ಮಾಡುತ್ತಿದ್ದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

ಅದ್ಧೂರಿ ಮದುವೆ ಕನಸು ಕಂಡಿರುವ ವರಲಕ್ಷ್ಮಿ ಲಾಕ್‌ಡೌನ್‌ ಇರುವ ಕಾರಣ ಸುಮ್ಮನಾಗಿದ್ದಾರೆ ಇಲ್ಲವಾದರೆ ಈಗಾಗಲೇ  ಎರಡು ಕುಟುಂಬಗಳು ತಾಂಬೂಲ  ಬದಲಾಯಿಸಿಕೊಳ್ಳಬೇಕಿತ್ತಂತೆ. ಹೀಗೆಂದು  ಸಾಕಷ್ಟು ವದಂತಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮಾಧ್ಯದ ವಿರುದ್ಧ ಗರಂ:

ದಿನ ಬೆಳಗಾದರೆ ವರಲಕ್ಷ್ಮಿ ಮದುವೆ ವಿಚಾರವನ್ನು ಪ್ರಸಾರ ಮಾಡುತ್ತಿರುವ ಕಾರಣ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ. ಈ ಬಗ್ಗೆ ಟ್ಟಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. 'ನನ್ನ ಮದುವೆ ಬಗ್ಗೆ ನನಗೇ ತಿಳಿದಿರಲಿಲ್ಲ. ಮಾಧ್ಯಮದವರ ಮುಖಾಂತರ ತಿಳಿಯಿತು . ಅದೇ Nonsense rumour. ಯಾಕೆಲ್ಲರೂ ನನ್ನ ಮದುವೆ ಬಗ್ಗೆ ಅಷ್ಟೊಂದು ತೆಲೆಗೆಡಿಸಿಕೊಳ್ಳುತ್ತಿದ್ದೀರಾ? ನಾನು ಮದುವೆ ಆಗುವ ದಿನ  ಹತ್ತಿರ ಬಂದರೆ ಮನೆ ಚಾವಣಿ ಕಿತ್ತು ಹೋಗುವ ಹಾಗೆ ಕೂಗುವೆ.  ಇದರ ಬಗ್ಗೆ ದಿನ ಬರೆಯುವ ಮಾಧ್ಯಮದವರಿಗೆ ಹೇಳುತ್ತಿರುವೆ ನಾನು ಮದುವೆ ಆಗುತ್ತಿಲ್ಲ, ಕೆಲಸ ಬಿಡುತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ.  

ವರಲಕ್ಷ್ಮಿ ವೇಟ್‌ ಲಾಸ್‌:

ತಮಿಳು  ಚಿತ್ರರಂಗದ ಖ್ಯಾತ ನಟ ಶರತ್‌ ಕುಮಾರ್ ಪುತ್ರಿ ವರಲಕ್ಷ್ಮಿ ಚಿತ್ರರಂಗಕ್ಕೆ ಕಾಲಿಡುವ ಮುನ್ನ ತುಂಬಾನೇ ದಪ್ಪಗಿದ್ದರಂತೆ.  ಈ ಕಾರಣಕ್ಕೆ ಅನೇಕ ಚಿತ್ರಕತೆಯಲ್ಲಿ ಹಳ್ಳಿ ಹುಡುಗಿ ಅಥವಾ ಡುಮ್ಮಿ ಪಾತ್ರವಿರುತ್ತಿತ್ತು. ತನ್ನ ಆರೋಗ್ಯದ ದೃಷ್ಟಿಯಿಂದ ವರಲಕ್ಷ್ಮಿ ಫುಲ್‌ ವರ್ಕೌಟ್‌ ಮಾಡಿ ಈಗ ಫಿಟ್‌ ಆಂಡ್  ಪೈನ್‌ ಆದ ನಂತರ ಗ್ಲಾಮರ್‌ ಪಾತ್ರಗಳು ಹುಡುಕಿಕೊಂಡು ಬರುತ್ತಿದೆ ಎನ್ನಲಾಗಿದೆ..

ಕೈ ತುಂಬಾ ಆಫರ್‌....

ಸಿಬಿಐ ಅಧಿಕಾರಿಯಾಗಿ ಮತ್ತೆ ಕನ್ನಡಕ್ಕೆ ಬಂದ ವರಲಕ್ಷ್ಮಿ!

'ಮಾಣಿಕ್ಯ' ಹಾಗೂ 'ರನ್ನ' ಚಿತ್ರದಲ್ಲಿ ಕಾಣಿಸಿಕೊಂಡ ನಂತರ ವರಲಕ್ಷ್ಮಿ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ತುಂಬಾನೇ ಬ್ಯುಸಿಯಾದರು.  ಅದರಲ್ಲೂ ಅನೇಕ ಸ್ಟಾರ್ ನಟನರ ಜೊತೆ ಗ್ಲಾಮರ್ ಗೊಂಬೆಯಾಗಿ ಮಾತ್ರವಲ್ಲದೆ ಖಡಕ್‌ ಆಫೀಸರ್‌ ಪಾತ್ರದಲ್ಲೂ ಮಿಂಚಿದ್ದಾರೆ. ಸದ್ಯಕ್ಕೆ 10 ಸಿನಿಮಾಗಳು ವರಲಕ್ಷ್ಮಿ ಕೈಯಲ್ಲಿದ್ದು ಲಾಕ್‌ಡೌನ್‌ ಸಡಿಲಿಕೆಗೆ ಕಾಯುತ್ತಿದ್ದಾರೆ.