Asianet Suvarna News Asianet Suvarna News

'ಬಘೀರ' ಚಿತ್ರಕ್ಕೆ ನಾಯಕಿ ಫಿಕ್ಸ್; ರಕ್ಷಿತ್ ಶೆಟ್ಟಿ ಹೀರೋಯಿನ್ ಜೊತೆ ಶ್ರೀಮುರಳಿ ರೊಮ್ಯಾನ್ಸ್

ಬಘೀರ ಸಿನಿಮಾಗೆ ಚಾಲನೆ ಸಿಕ್ಕಿ ತಿಂಗಳಾದರೂ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ ಸಿನಿಮಾತಂಡ. ಸದ್ಯ ಸಿನಿಮಾದ ನಾಯಕಿ ವಿಚಾರವಾಗಿ ಬಘೀರಾ ಸಿನಿಮಾ ಸದ್ದು ಮಾಡುತ್ತಿದೆ. ಹೌದು ಬಘೀರ ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದಾರೆ.

rukmini vasanth likely to female lead opposite sri murali in bagheera sgk
Author
First Published Sep 6, 2022, 12:38 PM IST

ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಸೆಟ್ಟೇರಿ ವರ್ಷವೇ ಆಗಿತ್ತು. ಆದರೆ ಇನ್ನು ಸಿನಿಮಾ ಮುಹೂರ್ತಕ್ಕೆ ಸಮಯ ಕೂಡಿ ಬಂದಿರಲಿಲ್ಲ. ಇತ್ತೀಚಿಗಷ್ಟೆ ಬಘೀರ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿಸುವ ಮೂಲಕ ಸಿನಿಮಾಗೆ ಚಾಲನೆ ನೀಡಲಾಗಿತ್ತು. ಅಂದಹಾಗೆ ಶ್ರೀಮುರಳಿ ನಟನೆಯ ಬಘೀರಾ ಸಿನಿಮಾ ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಲ್ಲಿ ಮೂಡಿಬರುತ್ತಿದೆ. ವಿಶೇಷ ಎಂದರೆ ವಿಜಯ್ ಕಿರಗಂದೂರು ಅವರ ನಿರ್ಮಾಣದಲ್ಲಿ ಬರ್ತಿರುವ ಬಘೀರಾ ಚಿತ್ರಕ್ಕೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರಕಥೆ ಬರೆದಿದ್ದಾರೆ. ಇಬ್ಬರ ಕಾಂಬಿನೇಷನ್‌ನ ಸಿನಿಮಾಗಾಗಿ ಅಭಿಮಾನಿಗಳು ಅನೇಕ ವರ್ಷಗಳಿಂದ ಕಾದಿದ್ದರು. ಉಗ್ರಂ ಮೂಲಕ ಧೂಳ್ ಎಬ್ಬಿಸಿದ್ದ ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ಇದೀಗ ಬಘೀರ ಮೂಲಕ ಮತ್ತೆ ಒಂದಾಗಿದ್ದಾರೆ. ಹಾಗಾಗಿ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಅಂದಹಾಗೆ ಸಿನಿಮಾಗೆ ಡಾ.ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಬಘೀರ ಸಿನಿಮಾಗೆ ಚಾಲನೆ ಸಿಕ್ಕಿ ತಿಂಗಳಾದರೂ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ ಸಿನಿಮಾತಂಡ. ಅಂದಹಾಗೆ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿರಲಿಲ್ಲ. ಸದ್ಯ ಸಿನಿಮಾದ ನಾಯಕಿ ವಿಚಾರವಾಗಿ ಬಘೀರಾ ಸಿನಿಮಾ ಸದ್ದು ಮಾಡುತ್ತಿದೆ. ಹೌದು ಬಘೀರ ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದಾರೆ. ಶ್ರೀಮುರಳಿ ಜೊತೆ ನಟಿಸಲು ರಕ್ಷಿತ್ ಶೆಟ್ಟಿ ಸಿನಿಮಾದ ನಾಯಕಿ ಸಿದ್ಧರಾಗಿದ್ದಾರೆ.  ರಕ್ಷಿತ್ ಸಿನಿಮಾ ನಾಯಕಿನಾ ಅಂತ ಅಚ್ಚರಿ ಆಗುತ್ತಿದ್ಯಾ? ಅದು ಮತ್ಯಾರು ಅಲ್ಲ ಸಪ್ತಸಾಗರದಾಚೆ ಎಲ್ಲೂ ಸಿನಿಮಾದ ನಾಯಕಿ ರುಕ್ಮಿಣಿ ವಸಂತ್. ಹೌದು, ಶ್ರೀಮುರಳಿ ಜೊತೆ ಬಘೀರಾ ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡಲು ರುಕ್ಮಿಣಿ ಸಿದ್ಧರಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಮೂಲಕ ರುಕ್ಮಿಣಿ ಹೊಂಬಾಳೆ ಫಿಲ್ಮ್ ಜೊತೆ ಕೆಲಸ ಮಾಡುತ್ತಿದ್ದಾರೆ. 

rukmini vasanth likely to female lead opposite sri murali in bagheera sgk

ಅಂದಹಾಗೆಈ ಬಗ್ಗೆ ಹೊಂಬಾಳೆ ಫಿಲ್ಮ್ ಇನ್ನು ಅಧಿಕೃತ ಮಾಹಿತಿ ರಿವೀಲ್ ಮಾಡಿಲ್ಲ. ಸಧ್ಯದಲ್ಲೇ ಈ ಬಗ್ಗೆ ಮಾಹಾತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ. ರುಕ್ಮಿಣಿ ವಸಂತ್ ಅವರ ಬಗ್ಗೆ ಹೇಳುವುದಾದರೆ ಬೀ‌ರ್‌ಬಲ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 2018ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಬಳಿಕ ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಗೋಲ್ಡನ್ ಸ್ಟಾರ್ ನಟನೆಯ ಬಾನದಾರಿಯಲ್ಲಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಎಲ್ಲಾ ಸಿನಿಮಾಗಳ ಜೊತೆಗೀಗ ಶ್ರೀಮುರಳಿ ಜೊತೆ ಬಘೀರಾ ಸಿನಿಮಾಗೆ ಆಯ್ಕೆಯಾಗಿದ್ದಾರೆ. 

ಬಘೀರಾ ಮುಹೂರ್ತ; KGF ನಿರ್ದೇಶಕ ಪ್ರಶಾಂತ್ ನೀಲ್ ಕಥೆಗೆ ಶ್ರೀಮುರಳಿ ಹೀರೋ

ಬಘೀರ ಸಿನಿಮಾದ ಬಗ್ಗೆ ಹೇಳುವುದಾದರೆ ಈಗಾಗಲೇ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸಿನಿಮಾ ಅನೌನ್ಸ್ ಮಾಡುವ ಸಮಯದಲ್ಲಿ ಬಘೀರನ ಲುಕ್ ರಿವೀಲ್ ಆಗಿತ್ತು. ಪೋಸ್ಟರ್ ಶೇರ್ ಮಾಡಿ ಸಿನಿಮಾತಂಡ 'ಇಡೀ ಸಮಾಜವೇ ಅರಣ್ಯವಾದಾಗ ಒಬ್ಬನೇ ಒಬ್ಬ ಮಾತ್ರ ನ್ಯಾಯಕ್ಕಾಗಿ ಹೋರಾಡುತ್ತಾನೆ' ಎಂದು ಕ್ಯಾಪ್ಷನ್ ನೀಡಲಾಗಿತ್ತು. ಲುಕ್ ನೋಡಿದ್ರೆ ಶ್ರೀಮುರಳಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಹೆಚ್ಚಿನ ಮಾಹಿತಿ ರಿವೀಲ್ ಮಾಡದ ಸಿನಿಮಾತಂಡ ಸದ್ಯದಲ್ಲೇ ಬಘೀರನ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ರಿವೀಲ್ ಮಾಡುವ ಸಾಧ್ಯತೆ ಇದೆ. 

ಹ್ಯಾಪಿ ಬರ್ತ್ ಡೇ ರಕ್ಸ್ ಎಂದ ರುಕ್ಮಿಣಿ; ಈ ಜೋಡಿ ಎಷ್ಟು ಚಂದ ಅಲ್ವಾ ಅಂದ್ರು ಫ್ಯಾನ್ಸ್!

ಹೊಂಬಾಳೆ ಫಿಲ್ಮ್ಸ್ ಬಗ್ಗೆ ಹೇಳುವುದಾದರೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದೆ. ಈಗಾಗಲೇ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸಲಾರ್ ಸಿನಿಮಾ ಸಿದ್ಧವಾಗುತ್ತಿದೆ. ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಟ್ರೈಲರ್ ರಿಲೀಸ್ ಆಗಿತ್ತು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜಗ್ಗೇಶ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ ರಾಘವೇಂದ್ರ ಸ್ಟೋರ್ಸ್, ಯುವರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಅವರ ಹೊಸ ಸಿನಿಮಾ ಹಾಗೂ ಸೂರರೈ ಪೊಟ್ರು ಸಿನಿಮಾ ಖ್ಯಾತಿಯ ಸುಧಾ ಕೊಂಗಾರ ಅವರ ಜೊತೆ, ಪೃಥ್ವಿರಾಜ್ ಸುಕುಮಾರ್, ರಕ್ಷಿತ್ ಶೆಟ್ಟಿ ಹಾಗೆ ಅನೇಕ ಸಿನಿಮಾಗಳಿವೆ. 

Follow Us:
Download App:
  • android
  • ios