ಲವ್‌ ಇರುವ ಕಡೆ ನೋವು ಇದ್ದೇ ಇರುತ್ತೆ ಎಂದು ಹೇಳಿಕೊಂಡು ಕಾಲೇಜು ಹುಡುಗರ ಪ್ರೇಮಕತೆ ಹೊತ್ತು ಬರುತ್ತಿರುವ ‘ರೌಡಿ ಬೇಬಿ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.

ರೆಡ್ಡಿ ಕೃಷ್ಣ ನಿರ್ದೇಶನದ ಈ ಚಿತ್ರ ಟೀನೇಜ್‌ ಹುಡುಗರ ಪ್ರೇಮಕತೆ ಹೊಂದಿದೆ. ಈ ಹಿಂದೆ ‘ಮಿ. ಮೊಮ್ಮಗ’, ‘ದಮಯಂತಿ’ ಚಿತ್ರಗಳಲ್ಲಿ ನಟಿಸಿದ್ದ ಎಸ್‌.ಎಸ್‌. ರವಿಗೌಡ ಚಿತ್ರದ ನಾಯಕ. ದಿವ್ಯಾ ರಾವ್‌ ಮತ್ತು ಹೀರ್‌ ಕೌರ್‌ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಪತ್ರಕರ್ತೆಯಾಗಿ ತೆರೆ ಮೇಲೆ ಬರ್ತಿದ್ದಾರೆ ಕೃಷಿ ತಾಪಂಡ..! ಕಿಶೋರ್‌ ಪೊಲೀಸ್‌ ಪಾತ್ರದಲ್ಲಿ

ಸುಂದರವಾದ ಬ್ರಿಡ್ಜ್, ಮರಳುದಂಡೆಯಲ್ಲಿ ನಿಲ್ಲಿಸಿದ ಜಿಪ್ಸಿ, ಭೋರ್ಗರೆವ ಕಡಲ ತೀರದಲ್ಲಿ ಒಂದು ಸುಂದರ ಜೋಡಿ, ಪ್ರೀತಿ, ವಿರಹ, ನೋವು ಎಲ್ಲದರ ಮಿಶ್ರಣ ಎಂಬಂತಿರುವ ಸಿನಿಮಾ ಟೀಸರ್ ವೀಕ್ಷಕರ ಕುತೂಹಲ ಹೆಚ್ಚಿಸುವಂತಿದೆ.

ರಾಜ್‌ ಕೆಂಪೇಗೌಡ, ಅರುಣ್‌ ಬಾಲರಾಜು, ಶ್ರೀನಾಥ್‌ ವಶಿಷ್ಟಇದ್ದಾರೆ. ಚಿತ್ರಕ್ಕೆ ಅರ್ಮಾನ್‌ ಸಂಗೀತ ನೀಡಿದ್ದು, ಸಿಂಪಲ್‌ ಸುನಿ, ಡಾ. ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದಿದ್ದಾರೆ. ವಾರ್‌ ಫäಟ್‌ ಸ್ಟುಡಿಯೋಸ್‌ ಹಾಗೂ ಸುಮುಖ್‌ ಎಂಟರ್‌ಟೈನರ್‌ ಬ್ಯಾನರ್‌ ಅಡಿ ಸಿನಿಮಾ ಮೂಡಿ ಬಂದಿದೆ.