ಆಶಾ ಭಟ್ ಅನ್ನೋ ಹೆಸರು ವರ್ಷಗಳ ಕೆಳಗೆ ಭಲೇ ಫೇಮಸ್ ಆಯ್ತು. ನಮ್ಮ ಹೆಮ್ಮೆಯ ಕನ್ನಡತಿ ಸುಪ್ರಾ ನ್ಯಾಶನಲ್ ಅನ್ನೋ ಮಿಸ್ ವರ್ಲ್ಡ್ ಗೆ ಸರಿಸಮವಾದ ಕಿರೀಟ ಮುಡಿಗೇರಿಸಿಕೊಂಡು ವಿಶ್ವದ ಗಮನ ಸೆಳೆದರು. ವಿಶ್ವದೆಲ್ಲೆಡೆಯಿಂದ ಹಾರೈಕೆಗಳ ಸುರಿಮಳೆ. ಕಿರೀಟ ತೊಟ್ಟು ಭಾರತಕ್ಕೆ ಎಂಟ್ರಿಯಾದಾಗ ಇಡೀ ದೇಶವೇ ಸಂಭ್ರಮಿಸಿತ್ತು. ಇನ್ನು ಕನ್ನಡವರು ಕೇಳಬೇಕಾ? ಎಲ್ಲಿ ನೋಡಿದರೂ ಈಕೆಯದೇ ಸುದ್ದಿ.

ಮೂಡಬಿದಿರೆಯ ಆಳ್ವಾಸ್ ನಲ್ಲಿ ಪಿಯುಸಿ ಮಾಡ್ಕೊಂಡು, ಆಮೇಲೆ ಬೆಂಗಳೂರಿನ ಆರ್ ವಿ ಕಾಲೇಜ್ ನಲ್ಲಿ ಇಂಜಿಯನಿರಿಂಗ್ ಮಾಡಿದ ಸಾದಾ ಸೀದ ಹುಡುಗಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ವಿಶ್ವಸುಂದರಿಯಾಗಿ ಹೊರಹೊಮ್ಮಿದ್ದು ಅಂದರೆ ಸಣ್ ಸುದ್ದೀನಾ? ಈ ಭದ್ರಾವತಿಯ ಹುಡುಗಿಗೆ ಆಗ ಭಲೇ ಹೆಸರು ಬಂತು. ಆಮೇಲೆ ಒಂದು ವರ್ಷ ಒಂದಿಷ್ಟು ಸಮಾಜ ಸೇವೆಯ ಚಟುವಟಿಕೆಗಳಲ್ಲಿ ಕಳೆದ ಈಕೆ ಆಮೇಲೆ ಸುದ್ದಿಯಾದದ್ದು ಬಾಲಿವುಡ್ ಸಿನಿಮಾದ ಹೀರೋಯಿನ್ ಆಗೋ ಮೂಲಕ. ಅಲ್ಲಿ ಅಡ್ವೆಂಚರ್ ಆಕ್ಷನ್ ಚಿತ್ರ ಜಂಗ್ಲಿಯಲ್ಲಿ ವಿದ್ಯುತ್ ಜಮ್ವಾಲ್ ಗೆ ಹೀರೋಯಿನ್ ಆದ್ರು.

 

 
 
 
 
 
 
 
 
 
 
 
 
 
 
 

A post shared by Asha Bhat (@asha.bhat)

 

ಆಮೇಲೆ ಸಖತ್ ಸುದ್ದಿಯಾದದ್ದು ನಮ್ ಚಾಲೆಂಜಿಂಗ್ ಸ್ಟಾರ್ ಗೆ ಹೀರೋಯಿನ್ ಆಗೋ ಮೂಲಕ. 'ರಾಬರ್ಟ್' ಮೂವಿಯಲ್ಲಿ ಈಕೆ ದರ್ಶನ್ ಜತೆಗೆ ಡ್ಯುಯೆಟ್ ಹಾಡಲಿದ್ದಾರೆ. ಜೊತೆಗೆ ಬಾಲಿವುಡ್ ನ ಇನ್ನೊಂದು ಚಿತ್ರ ದೋಸ್ತಾನಾ ೨ ನಲ್ಲೂ ಈಕೆ ಅಭಿನಯಿಸುತ್ತಿದ್ದಾರೆ.

ರಾಬರ್ಟ್‌ ರಿಲೀಸ್‌ ಬಗ್ಗೆ ತಿಳಿದಿಲ್ಲ: ಆಶಾ ಭಟ್‌

ಇಷ್ಟೆಲ್ಲ ಬಿಲ್ಡಪ್ ಇರೋ ಹುಡುಗಿ ಈಗ ಶಿರಸಿಯಲ್ಲಿ ಇರೋ ತನ್ನ ಅಜ್ಜಿ ಮನೆಯಲ್ಲಿ ಈಗ ಝಾಂಡಾ ಹೂಡಿದ್ದಾರೆ. ವಿಶ್ವಮಟ್ಟದ ಸುಂದರಿಯಾದ್ರೇನು, ಅಜ್ಜಿ ಮನೆಗೆ ಬಂದ್ರೆ ಮುದ್ದಿನ ಮೊಮ್ಮಗಳೇ ಅಲ್ವಾ? ಅಷ್ಟೆಲ್ಲ ಎತ್ತರಕ್ಕೇರಿದರೂ ಆಶಾ ಅದನ್ನು ತಲೆಗೇರಿಸಿಕೊಂಡ ಹಾಗಿಲ್ಲ. ಅಜ್ಜಿ ಮನೆಯಲ್ಲಿ ಸಾದಾ ಸೀದಾ ಹುಡುಗಿಯಾಗಿ ಎಲ್ಲರ ಜೊತೆಗೆ ಬೆರೆಯುತ್ತಿದ್ದಾರೆ. ಅಷ್ಟೇ ಅಲ್ಲ, ಕೃಷಿಕರಾದ ಅವರ ಕೆಲಸದಲ್ಲಿ ಕೈ ಜೋಡಿಸುತ್ತಿದ್ದಾರೆ. ಅದರಲ್ಲೊಂದು ಅಡಿಕೆ ಸುಲೀತಿರೋ ಚಿತ್ರ ಈಗ ಸಖತ್ ವೈರಲ್ ಆಗ್ತಿದೆ.

ಬರೀ ಫೋಟೋಗೆ ಫೋಸ್ ಕೊಟ್ಟಿದ್ದು ಮಾತ್ರವಲ್ಲ, ತನ್ನೂರಿನ ಮೇಲಿರುವ ಈಕೆಯ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಜೊತೆಗೆ 'ಅಜ್ಜಿಮನೇಲಿ ಅಡಿಕೆ ಸುಲಿಯೋ ಮಜಾನೇ ಬೇರೆ' ಅಂತ ಅಚ್ಚಗನ್ನಡದಲ್ಲಿ ಈಕೆ ಬರ್ಕೊಂಡಿರೋದು ಕನ್ನಡಿಗರಲ್ಲಿ ಈಕೆಯ ಬಗ್ಗೆ ವಿಶೇಷ ಪ್ರೀತಿ ಮೂಡೋ ಹಾಗೆ ಮಾಡಿದೆ. ಆದರೆ ಮಲೆನಾಡಿನ ಕೆಲವ್ರು ಮಾತ್ರ, ಈಕೆಗೆ ಅಡಿಕೆ ಸುಲಿಯೋದಕ್ಕೇ ಬರಲ್ಲ. ಬರೀ ನಾಟ್ಕ ಆಡ್ತಿದ್ದಾಳೆ ಅಂತ ಕಾಲೆಳೆದಿದ್ದಾರೆ. ಅವರ ಮಾತು ಸುಳ್ಳೇನಲ್ಲ, ಆಶಾ ಭಟ್ ಅಪ್ ಲೋಡ್ ಮಾಡಿರೋ ವೀಡಿಯೋ ನೋಡಿದ್ರೆ ಈಕೆಗೆ ಅಡಿಕೆ ಸುಲಿಯೋಕೆ ಬರಲ್ಲ ಅನ್ನೋದು ಗೊತ್ತಾಗುತ್ತೆ. ಆದರೂ ಮಲೆನಾಡ ಜನರ ಜೊತೆಗೆ ಕಲೆತು ಅವರ ಕೆಲಸಕ್ಕೆ ತನ್ನದೇ ರೀತಿಯಲ್ಲಿ ಸಾಥ್ ನೀಡಿರೋ ರಾಬರ್ಟ್ ಬೆಡಗಿಯ ಸರಳತನಕ್ಕೆ ಶಹಭಾಸ್ ಅನ್ನಲೇ ಬೇಕು.

ರಾಬರ್ಟ್ ರಾಣಿ ಆಶಾಭಟ್‌ಗೆ ಶುರುವಾಗಿದೆ ಹೊಸ ಚಿಂತೆ!

ಹಾಗೆ ನೋಡಿದ್ರೆ ಆಶಾ ಭಟ್ ಊರು ಭದ್ರಾವತಿ. ಈಕೆ ಈಗ ಇರೋದು ಮುಂಬೈಯಲ್ಲಿ. ಆದರೂ ಶೂಟಿಂಗ್, ಮಾಡೆಲಿಂಗ್ ಇತ್ಯಾದಿಗಳನ್ನು ಪಕ್ಕಕ್ಕಿಟ್ಟು ಅಜ್ಜಿಮನೆಗೆ ಬಂದು ಹಾಯಾಗಿ ಒಂದಿಷ್ಟು ದಿನ ಇದ್ದುಹೋಗೋದು ಮತ್ತೆ ಬಾಲ್ಯಕ್ಕೆ ಬಂದ ಹಾಗಾಗಿದೆ ಅನ್ನೋದು ಈಕೆಯ ಅನಿಸಿಕೆ. ಅಜ್ಜಿಮನೆಯ ಗದ್ದೆ, ತೋಟಗಳಲ್ಲೂ ಆಶಾ ಖುಷಿಯಿಂದ ತಿರುಗಾಡಿದ್ದಾರೆ. ಪಕ್ಕಾ ಮಲೆನಾಡಿನ ಹವೆ, ವಾತಾವರಣದಲ್ಲಿ ಒಂದಾಗಿದ್ದಾರೆ. ಒಬ್ಬ ಸ್ಟಾರ್ ನಟಿಯ ಈ ಸಿಂಪ್ಲಿಸಿಟಿಗೆ ಅಭಿಮಾನಗಳು ಮಾರುಹೋಗಿದ್ದು ಸುಳ್ಳಲ್ಲ. ಆಶಾ ಎತ್ತರೆತ್ತರಕ್ಕೆ ಹೋಗಲಿ ಅನ್ನೋ ಶುಭ ಹಾರೈಕೆಯನ್ನೂ ಕನ್ನಡಿಗರು ಮಾಡಿದ್ದಾರೆ.

ದರ್ಶನ್ ಬಗ್ಗೆ ಆ ನಟಿ ಹಾಗೆ ಹೇಳಿದ್ಯಾಕೆ? ಏನಿದು ಮ್ಯಾಟ್ರು?