ದರ್ಶನ್‌ ನಾಯಕನಾಗಿರುವ ರಾಬರ್ಟ್‌ ಚಿತ್ರದ ಪ್ರಿ-ರಿಲೀಸ್‌ ಫೆ.28ಕ್ಕೆ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಸಿನಿಮಾ ಬಿಡುಗಡೆಗೂ ಮೊದಲಿನ ಸಂಭ್ರಮಾಚರಣೆ ಇದಾಗಿದ್ದು, ಹುಬ್ಬಳ್ಳಿಯ ರೈಲ್ವೇ ಮೈದಾನ ಇದಕ್ಕೆ ಸಾಕ್ಷಿಯಾಗಲಿದೆ.

ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಚಿತ್ರತಂಡದ ಜೊತೆಗೆ ರಾಬರ್ಟ್‌ ಹೀರೋ ದರ್ಶನ್‌, ನಾಯಕಿ ಆಶಾ ಭಟ್‌ ಭಾಗಿಯಾಗುವ ಸಾಧ್ಯತೆ ಇದೆ.

ಪುನೀತ್‌ ಹೊಸ ಚಿತ್ರಕ್ಕೆ ದಿನಕರ್‌ ತೂಗುದೀಪ ನಿರ್ದೇಶನ

ರಾಬರ್ಟ್‌ ಮಾಚ್‌ರ್‍ 11ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. ತರುಣ್‌ ಸುಧೀರ್‌ ನಿರ್ದೇಶನ ಮಾಡಿ, ಉಮಾಪತಿ ನಿರ್ಮಿಸಿರುವ ಚಿತ್ರವಾಗಿದೆ ರಾಬರ್ಟ್‌. ಚಿತ್ರದ ಬಗ್ಗೆ ಇಡೀ ತಂಡ ಮಾತ್ರವಲ್ಲ ದರ್ಶನ್ ಅಭಿಮಾನಿಗಳು ಸಾಕಷ್ಟು ಬರವಸೆ ಹೊಂದಿದ್ದಾರೆ. 

"