ತೆಲುಗಿನ ಸ್ಟಾರ್‌ ನಟರ ಅಭಿಮಾನಿಗಳು ‘ರಾಬರ್ಟ್‌’ ಚಿತ್ರದ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ‘ದರ್ಶನ್‌ ಅವರಿಗೆ ಟಾಲಿವುಡ್‌ಗೆ ಸ್ವಾಗತ’ ಎನ್ನುತ್ತಿದ್ದಾರೆ.

ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರಕ್ಕೆ ತೆಲುಗಿನಲ್ಲಿ ಭರ್ಜರಿ ಸ್ವಾಗತ ಸಿಗುತ್ತಿದೆ. ಚಿತ್ರತಂಡ ಗಣರಾಜ್ಯೋತ್ಸವದ ಅಂಗವಾಗಿ ಚಿತ್ರದ ತೆಲುಗು ವರ್ಷನ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ.

ತೆಲುಗಿನ ಸ್ಟಾರ್‌ ನಟರ ಅಭಿಮಾನಿಗಳು ‘ರಾಬರ್ಟ್‌’ ಚಿತ್ರದ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ‘ದರ್ಶನ್‌ ಅವರಿಗೆ ಟಾಲಿವುಡ್‌ಗೆ ಸ್ವಾಗತ’ ಎನ್ನುತ್ತಿದ್ದಾರೆ.

ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಶಾನ್ವಿ ಶ್ರೀವಾಸ್ತವ್..! ರಗಡ್ ಲುಕ್ ಹೇಗಿರ್ಬೋದು..?

ವಿಜಯ್‌ ದೇವರಕೊಂಡ, ನಾನಿ, ಮಹೇಶ್‌ ಬಾಬು, ಅಲ್ಲು ಅರ್ಜುನ್‌, ರವಿತೇಜ ಸೇರಿದಂತೆ ಬಹುತೇಕ ತೆಲುಗು ಚಿತ್ರರಂಗದ ಹೀರೋಗಳ ಅಭಿಮಾನಿಗಳು ‘ರಾಬರ್ಟ್‌’ ಚಿತ್ರದ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹೀಗೆ ಹೀರೋಗಳ ಅಭಿಮಾನಿಗಳಿಂದ ಪೋಸ್ಟರ್‌ ಬಿಡುಗಡೆ ಮಾಡಿಸುವ ಮೂಲಕ ತರುಣ್‌ ಸುಧೀರ್‌ ನಿರ್ದೇಶನದ, ಉಮಾಪತಿ ನಿರ್ಮಾಣದ ‘ರಾಬರ್ಟ್‌’ ಸಿನಿಮಾ ತೆಲುಗಿನಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮಾರ್ಚ್‌ 11ರಂದು ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗುತ್ತಿದೆ.