ಅಲ್ಲಿ ಸಾಕಷ್ಟು ಸೂಪರ್ ನ್ಯಾಚುರಲ್ ಪವರ್‌ಗೆ ಸಂಬಂಧಪಟ್ಟು ಏನೇನೋ ನಡೀತಾ ಇತ್ತು. ನಾವ್ಯಾರು ಇದ್ರ ಬಗ್ಗೆ ಎಲ್ಲೂ ಮಾತಾಡಿಲ್ಲ. ಯಾಕಂದ್ರೆ ಅದ್ರ ಬಗ್ಗೆ ಏನಾದ್ರೂ ಮಾತಾಡಿದ್ರೆ ಅದು ಸ್ವತಃ ರಿಷಬ್ ಸರ್ ಆಗಿರ್ಲಿ ಅಂತ..' ಹೀಗೆಂದಿದ್ದಾರೆ ನಟಿ ಸಪ್ತಮಿ ಗೌಡ.

ಕಾಂತಾರ ಚೆಲುವೆ ಸಪ್ತಮಿ ಗೌಡ (Sapthami Gowda) ಅವರು ಕಾಂತಾರ ಸಿನಿಮಾ (Kantara) ಶೂಟಿಂಗ್ ಬಗ್ಗೆ ಮಾತನಾಡಿರುವುದು ಸದ್ಯ ಸಖತ್ ವೈರಲ್ ಆಗುತ್ತಿದೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟಿ ಸಪ್ತಮಿ ಗೌಡ 'ಗುಳಿಗ ಪೋರ್ಶನ್‌ನಲ್ಲಿ ಅಂತೂ ರಿಷಬ್ ಸರ್ (Rishab Shetty) ಎನರ್ಜಿ ಸಖತ್ ಆಗಿತ್ತು. ಅವರು ಅದೆಷ್ಟು ಎನರ್ಜಿಟಿಕ್ ಆಗಿದ್ರು ಅಂದ್ರೆ, ಇವತ್ತು ಬೆಳಿಗ್ಗೆ 6 ಗಂಟೆಗೆ ಶುರುವಾದ ಶೂಟಿಂಗ್ ಮಾರನೇ ದಿನ 6 ಗಂಟೆಯವರೆಗೂ ಕಂಟಿನ್ಯೂ ಆದ್ರೂ ಅವರ ಎನರ್ಜಿಯಲ್ಲಿ ಸ್ವಲ್ಪವೂ ಡ್ರಾಪ್ ಆಗಿರ್ಲಿಲ್ಲ. 

ಕಾಂತಾರ ಸಿನಿಮಾಗೆ ರಿಷಬ್ ಸರ್ ನಟರೂ ಆಗಿ, ಡೈರೆಕ್ಟರ್ ಕೂಡ ಆಗಿದ್ರು. ಜತೆನಲ್ಲಿ ಪ್ರೊಡಕ್ಷನ್ ಕೂಡ ನೋಡ್ಕೊತಾ ಇದ್ರು. ಆದ್ರೂ ಕೂಡ ಅವರು ಇಡೀ ಚಿತ್ರದ ಬಗ್ಗೆ ತುಂಬಾನೇ ಇನ್‌ವಾಲ್ವ್ ಆಗಿದ್ರು. ಶೂಟಿಂಗ್ ಜಾಗದಲ್ಲಿ ಅವ್ರ ಎನರ್ಜಿ ಅದೆಷ್ಟು ಇತ್ತು ಅಂದ್ರೆ ಹೇಳೋಕೂ ಕಷ್ಟಾನೇ. ಬೇರೆ ಎಲ್ಲರ ಎನರ್ಜಿ ಸೇರಿದ್ರೆ ರಿಷಬ್ ಸರ್ ಒಬ್ರ ಎನರ್ಜಿಗೆ ಅದು ಸರಿಹೋಗ್ತಾ ಇತ್ತು. ಗುಳಿಗ (Guliga) ಪೋರ್ಶನ್‌ನಲ್ಲಿ ಅವ್ರ ಎನಿರ್ಜಿ ನೂರು ಪಟ್ಟು ಇತ್ತು. ಸೆಟ್‌ನಲ್ಲಿ ಶೂಟಿಂಗ್ ಟೈಮ್‌ನಲ್ಲಿ ಅದೂ ಇದೂ ಏನೇನೋ ಆಗ್ತಾ ಇತ್ತು. ನಾನಂತೂ ತುಂಬಾನೇ ಹೆದ್ರಕೊಂಡಿದ್ದೆ. 

ಅಲ್ಲಿ ಸಾಕಷ್ಟು ಸೂಪರ್ ನ್ಯಾಚುರಲ್ ಪವರ್‌ಗೆ ಸಂಬಂಧಪಟ್ಟು ಏನೇನೋ ನಡೀತಾ ಇತ್ತು. ನಾವ್ಯಾರು ಇದ್ರ ಬಗ್ಗೆ ಎಲ್ಲೂ ಮಾತಾಡಿಲ್ಲ. ಯಾಕಂದ್ರೆ ಅದ್ರ ಬಗ್ಗೆ ಏನಾದ್ರೂ ಮಾತಾಡಿದ್ರೆ ಅದು ಸ್ವತಃ ರಿಷಬ್ ಸರ್ ಆಗಿರ್ಲಿ ಅಂತ..' ಹೀಗೆಂದಿದ್ದಾರೆ ನಟಿ ಸಪ್ತಮಿ ಗೌಡ. ಹಾಗಿದ್ರೆ ಕಾಂತಾರ ಶೂಟಿಂಗ್ ಬೇರೆ ಸಿನಿಮಾ ಶೂಟಿಂಗ್‌ಗಿಂತ ಭಿನ್ನವಾಗಿತ್ತು ಎನ್ನಬಹುದು. ಆದರೆ, ಆ ಬಗ್ಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿದ್ದು ಕಡಿಮೆಯೇ. ಈಗಂತೂ ಅವರು ಕಾಂತಾರಾ ಸಿನಿಮಾದ ಪ್ರೀಕ್ವೆಲ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಹಳೆಯ ಸಂಗತಿಗಳ ಮಾತಾಡಲು ಸಮಯ ಸಿಗಲಿಕ್ಕಿಲ್ಲ ಎನ್ನಬಹುದು. 

ಒಟ್ಟಿನಲ್ಲಿ, ರಿಷಬ್ ಅವರ ಕಾಂತಾರ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಹೊಸ ಅಲೆಯನ್ನೇ ಸೃಷ್ಟಿಸಿದೆ, 15-16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಬರೋಬ್ಬರಿ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದೆ. ಕಾಂತಾರ ಶೂಟಿಂಗ್‌ ವೇಳೆಯಲ್ಲಿ ನಟ-ನಿರ್ದೇಶಕ ರಿಷಬ್‌ ಅವರ ಎನರ್ಜಿ ಸಾಮಾನ್ಯರಂತೆ ಇರಲಿಲ್ಲ ಎಂದು ಅಲ್ಲಿ ಸ್ಥಳದಲ್ಲಿದ್ದ ಎಲ್ಲರೂ ಹೇಳುತ್ತಿದ್ದಾರೆ. ಹಾಗಿದ್ದರೆ ಆ ಮಾತುಗಳ ಹಿಂದಿನ ಮರ್ಮವೇನು ಎಂಬುದನ್ನು ಸ್ವತಃ ರಿಷಬ್ ಅವರೇ ಹೇಳಬೇಕು.