ನಟ ಶಿವರಾಜ್‌ಕುಮಾರ್ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಜತೆಯಾಗುತ್ತಿದ್ದಾರೆ. ಇವರಿಬ್ಬರನ್ನು ಜತೆಗೂಡಿಸುತ್ತಿರುವುದು ನಿರ್ಮಾಪಕರಾದ ಜಯಣ್ಣ ಹಾಗೂ ಭೋಗೇಂದ್ರ.
ಮೊದಲ ಬಾರಿಗೆ ಶಿವರಾಜ್‌ಕುಮಾರ್ ಚಿತ್ರಕ್ಕೆ ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕತೆ ಕೇಳಿಯೇ ಇಷ್ಟವಾಗಿ ಜಯಣ್ಣ ಅವರು ಈ ಚಿತ್ರವನ್ನು ನಿರ್ಮಿಸಲು ಮುಂದೆ ಬಂದಿದ್ದಾರೆ.
ಜು.12ಕ್ಕೆ ಶಿವಣ್ಣ ಹುಟ್ಟುಹಬ್ಬ ಸಂದರ್ಭದಲ್ಲಿ ಹೊಸ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ‘ನಮ್ಮ ಸಂಸ್ಥೆಯಲ್ಲಿ ಮತ್ತೊಮ್ಮೆ ಶಿವರಾಜ್ ಕುಮಾರ್ ನಟನೆಯ ಚಿತ್ರವನ್ನು ನಿರ್ಮಿಸುತ್ತಿದ್ದೇವೆ. ರಿಷಬ್ ಶೆಟ್ಟಿ ಹೇಳಿದ ಕತೆ ತುಂಬಾ ಚೆನ್ನಾಗಿತ್ತು. ಶಿವಣ್ಣ ಅವರಿಗೂ ಕತೆ ಇಷ್ಟವಾಗಿದೆ. ಹೊಸ ರೀತಿಯ ಕಾಂಬಿನೇಶನ್ ಸಿನಿಮಾ ಇದಾಗಲಿದೆ. ಅದೇ ಉತ್ಸಾಹದಲ್ಲಿ ಹೊಸ ಚಿತ್ರಕ್ಕೆ ಚಾಲನೆ ಕೊಟ್ಟಿದ್ದೇವೆ. ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಮಾಡುವ ಪ್ಲಾನ್ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ಜಯಣ್ಣ. ಸದ್ಯ ಜಯಣ್ಣ ಫಿಲಮ್‌ಸ್ ಮೂಲಕ ‘ಭಜರಂಗಿ 2’ ಚಿತ್ರ ಬರುತ್ತಿದ್ದು, ಇದರ ವಿಶೇಷ ಟೀಸರ್ ಕೂಡ ಹುಟ್ಟು ಹಬ್ಬದ ಅಂಗವಾಗಿ ಬಿಡುಗಡೆ ಆಗುತ್ತಿದೆ.
ನನ್ನನ್ನು ಹೊಸದಾಗಿ ತೋರಿಸುವ ಚಿತ್ರಗಳಿಗೆ ಸ್ವಾಗತ: ಶಿವರಾಜ್‌ಕುಮಾರ್
ನನ್ನ ಮತ್ತು ಶಿವಣ್ಣ ಕಾಂಬಿನೇಷನ್ ಸಿನಿಮಾ ಮುಂದಿನ ವರ್ಷ ಆರಂಭವಾಗಲಿದೆ. ಬೇರೆ ರೀತಿಯ ಕತೆ ಮಾಡಿಕೊಂಡಿದ್ದೇನೆ. ಈಗಲೇ ಹೇಳಿದರೆ ತುಂಬಾ ಬೇಗ ಹೇಳಿದಂತೆ ಆಗುತ್ತದೆ. ಒಂದು ಒಳ್ಳೆಯ ಸಿನಿಮಾ ಆಗಲಿದೆ ಎನ್ನುವ ನಂಬಿಕೆ ಇದೆ. ಈ ಸಿನಿಮಾಗೂ ಮೊದಲೇ ನಾನು ಮತ್ತೊಂದು ಚಿತ್ರ ಮಾಡಲಿದ್ದೇನೆ.-ರಿಷಬ್ ಶೆಟ್ಟಿ, ನಿರ್ದೇಶಕ
