Asianet Suvarna News Asianet Suvarna News

ಬೆಳಕು...ಆದರೆ ಇದು ಬೆಳಕಲ್ಲ...; 100 ದಿನ ಪೂರೈಸಿದ 'ಕಾಂತಾರ'ಗೆ ರಿಷಬ್ ಶೆಟ್ಟಿ ವಿಶೇಷ ಪೋಸ್ಟ್

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ 100 ದಿನ ಪೂರೈಸಿದೆ. 

 

rishab Shetty starrer Kantara film completes 100 days sgk
Author
First Published Jan 7, 2023, 2:22 PM IST

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ರಿಲೀಸ್ ಆಗಿ 100 ದಿನಗಳನ್ನು ಪೂರೈಸಿದೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದೊಡ್ಡ ಮಟ್ಟದ ಸಕ್ಸಸ್ ಕಂಡಿರುವ ಕಾಂತಾರ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ಕಾಂತಾರ ಅನೇಕ ದಾಖಲೆಗಳನ್ನು ಬರೆದಿದೆ. ಕೆಜಿಎಫ್ ಬಳಿಕ ಹೊಂಬಾಳೆ ಪ್ರೊಡಕ್ಷನ್ ನಲ್ಲಿ ಬಂದ ಬಹು ದೊಡ್ಡ ಸಕ್ಸಸ್‌ನ ಸಿನಿಮಾ. 

ಕಾಂತಾರ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಕನ್ನಡದಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಿದ್ದಂತೆ ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಬೇರೆ ಭಾಷೆಯಿಂದನೂ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಬಾಲಿವುಡ್ ನಲ್ಲಿ ಕಾಂತಾರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಲೆಕ್ಷನ್ ಮಾಡಿದೆ. ಅಂದಹಾಗೆ ಕಾಂತಾರ ಸಿನಿಮಾ ಸೆಪ್ಟಂಬರ್ 30 2022ನಲ್ಲಿ ರಿಲೀಸ್ ಆಗಿದೆ. ಬಳಿಕ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಿದೆ.

ಸದ್ಯ 100 ದಿನಗಳನ್ನು ಪೂರೈಸಿದ ಕಾಂತಾರ ಸಿನಿಮಾದ ಬಗ್ಗೆ ರಿಷಬ್ ಶೆಟ್ಟಿ ವಿಶೇಷವಾಗಿ ಬರೆದುಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿಗಳಿಸಿರುವ ರಿಷಬ್ ಕಾಂತಾರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 'ಬೆಳಕು.. ಆದರೆ ಇದು ಬೆಳಕಲ್ಲ 100 ದಿನದ ದರ್ಶನ' ಎಂದು ಹೇಳಿದ್ದಾರೆ. ಡಿವೈನ್ ಬ್ಲಾಕ್ ಬಸ್ಟರ್ 100 ದಿನಗಳ ಆಚರಣೆ' ಎಂದು ಹೇಳಿದ್ದಾರೆ. 

ಉಡುಪಿಯಲ್ಲಿ ಕಾಂತರಾ ಸಿನಿಮಾ ಹೋಲುವ ದೈವಸ್ಥಾನದ ಕಥೆ, ಕೋರ್ಟ್‌ಗೆ ಹೋದ ವ್ಯಕ್ತಿ ತಂಬಿಲ ದಿನ ಸಾವು!

ಕಾಂತಾರ ಸಿನಿಮಾ ಕರಾವಳಿ ಭಾಗದ ಆಚಾರ ವಿಚಾರಗಳ ಬಗ್ಗೆ ಇದ್ದ ಸಿನಿಮಾವಾಗಿದೆ. ಅದರಲ್ಲೂ ದೈವ, ಭೂತಕಾಲ ಆರಾಧನೆಯ ಬಗ್ಗೆ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡರೆ ನಾಯಕಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಕಿಶೋರ್ ಪೊಲೀಸ್ ಆಫೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಅಚ್ಯುತ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮಾವ ಪೊಲೀಸ್ ಕಂಡ್ರೋ, ಹುಷಾರಾಗಿರ್ರೋ; ಅಪ್ಪನ ಫೋಟೋ ಹಂಚಿಕೊಂಡ ಸಪ್ತಮಿಗೆ ಫ್ಯಾನ್ಸ್ ಕಾಮೆಂಟ್ ವೈರಲ್

ಅಂದಹಾಗೆ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಕಾಂತಾರ ಸಿನಿಮಾ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗಿದೆ. ಒಟಿಟಿಯಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಕ್ಸಸ್ ಜೊತೆಗೆ ಕಾಂತಾರ ಒಂದಿಷ್ಟು ವಿವಾದಗಳ ಮೂಲಕವೂ ಸದ್ದು ಮಾಡಿತ್ತು. ಆದರೆ ವಿವಾದಗಳಿಗೂ ಮೀರಿ ಕಾಂತಾರ ಸಿನಿಮಾ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವುದು ವಿಶೇಷ.ಕಾಂತಾರ ಸಿನಿಮಾವನ್ನು ಪ್ರೇಕ್ಷಕರ ಜೊತೆಗೆ ಬೇರೆ ಬೇರೆ ಭಾಷೆಯ ಸಿನಿಮಾ ಗಣ್ಯರು ಸಹ ಮೆಚ್ಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಪ್ರಭಾಸ್, ಧನುಷ್, ಕಾರ್ತಿ, ನಾನಿ, ಅಲ್ಲು ಅರ್ಜುನ್, ಸುನಿಲ್ ಶೆಟ್ಟಿ, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. 

Follow Us:
Download App:
  • android
  • ios