Asianet Suvarna News Asianet Suvarna News

ಉಡುಪಿಯಲ್ಲಿ ಕಾಂತರಾ ಸಿನಿಮಾ ಹೋಲುವ ದೈವಸ್ಥಾನದ ಕಥೆ, ಕೋರ್ಟ್‌ಗೆ ಹೋದ ವ್ಯಕ್ತಿ ತಂಬಿಲ ದಿನ ಸಾವು!

ಉಡುಪಿಯಲ್ಲೊಂದು ಕಾಂತರಾ ಸಿನಿಮಾ ಹೋಲುವ ದೈವಸ್ಥಾನದ ಕಥೆ ನಡೆದಿದೆ.  ಕಾಪು ತಾಲೂಕು ಪಡುಹಿತ್ಲು ವಿನಲ್ಲಿ 500 ವರ್ಷಗಳ ಇತಿಹಾಸವಿರುವ ಜಾರಂದಾಯ ದೈವಸ್ಥಾನದಲ್ಲಿ ದೈವಸ್ಥಾನದ ಆಡಳಿತ ವಿಚಾರದಲ್ಲಿ ಎರಡು ಸಮಿತಿಗಳ ನಡುವೆ ಘರ್ಷಣೆ ನಡೆದಿದೆ. ಘರ್ಷಣೆ ಹಿನ್ನೆಲೆ ಕೋರ್ಟಿಗೆ ಹೋದ ವ್ಯಕ್ತಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ.

The story is similar to the movie Kantara A person who goes to court against God is dead in Udupi gow
Author
First Published Jan 7, 2023, 11:29 AM IST

ಉಡುಪಿ (ಜ.7): ಉಡುಪಿಯಲ್ಲೊಂದು ಕಾಂತರಾ ಸಿನಿಮಾ ಹೋಲುವ ದೈವಸ್ಥಾನದ ಕಥೆ ನಡೆದಿದೆ. ಇದು ಆಶ್ಚರ್ಯ ಎನಿಸಿದರೂ ಸತ್ಯ. ಕಾಂತಾರ ಸಿನೆಮಾದಲ್ಲಿ ಜಾಗದ ವಿಷಯಕ್ಕೆ ಕೋರ್ಟಿಗೆ ಹೋದರೆ ನೋಡಿಕೊಳ್ತೇನೆ ಎಂದು ದೈವವು ನುಡಿ ಹೇಳಿತ್ತು. ದೈವದ ನುಡಿ ಬಳಿಕ ಕೋರ್ಟಿಗೆ ಹೋದ ವ್ಯಕ್ತಿ ಕೋರ್ಟ್ ಮೆಟ್ಟಲಲ್ಲಿ ರಕ್ತಕಾರಿ ಸತ್ತಿದ್ದ. ಮಾತ್ರವಲ್ಲ ದೈವ ನರ್ತಕನಿಗೆ ಬೆದರಿಕೆ ಆಮಿಷ ಒಡ್ಡಿದ ಕಥೆಯೂ ಕಾಂತಾರದಲ್ಲಿತ್ತು! ಇದೀಗ ಈ ಎರಡು ಘಟನೆಗಳನ್ನೇ ಹೋಲುವ ಪ್ರಕರಣ  ಪಡುಬಿದ್ರಿಯಲ್ಲಿ ನಡೆದಿದೆ. ಕಾಪು ತಾಲೂಕು ಪಡುಹಿತ್ಲು ಜಾರಂದಾಯ ದೈವಸ್ಥಾನದಲ್ಲಿ ಗಮನ ಸೆಳೆಯುವ ಘಟನೆ ನಡೆದಿದೆ. 500 ವರ್ಷಗಳ ಇತಿಹಾಸವಿರುವ ಜಾರಂದಾಯ ದೈವಸ್ಥಾನದಲ್ಲಿ ದೈವಸ್ಥಾನದ ಆಡಳಿತ ವಿಚಾರದಲ್ಲಿ ಎರಡು ಸಮಿತಿಗಳ ನಡುವೆ ಘರ್ಷಣೆ ನಡೆದಿದೆ. ಘರ್ಷಣೆ ಹಿನ್ನೆಲೆ ಕೋರ್ಟಿಗೆ ಹೋದ ವ್ಯಕ್ತಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ. ಕೋರ್ಟಿನಿಂದ ತಡೆ ಆಜ್ಞೆ ತಂದ ಮರುದಿನವೇ ಜಯ ಪೂಜಾರಿ ಎಂಬುವವರು ನಿಧನರಾಗಿದ್ದಾರೆ. 

 ಬಂಟ ಸೇವಾ ಸಮಿತಿ ಪಡುಹಿತ್ಲು ಜಾರಂದಾಯ ದೈವಸ್ಥಾನವನ್ನು ನೋಡಿಕೊಳ್ಳುತ್ತಿತ್ತು. ಸೇವಾ ಸಮಿತಿ ಸದಸ್ಯರು ಬದಲಾದ ನಂತರ  ಘರ್ಷಣೆ ಆರಂಭವಾಗಿತ್ತು. ಅಧಿಕಾರ ಕಳೆದುಕೊಂಡ ನಂತರ ಪ್ರಕಾಶ ಶೆಟ್ಟಿ ಎಂಬವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಧಿಕಾರ ಕಳೆದುಕೊಂಡ ನಂತರ ಪ್ರಕಾಶ್ ಶೆಟ್ಟಿ ಪ್ರತ್ಯೇಕ ಟ್ರಸ್ಟ್ ರಚಿಸಿದ್ದರು.

ದೈವಸ್ಥಾನದ ಗುರಿಕಾರರಾದ ಜಯ ಪೂಜಾರಿ ಅವರನ್ನು ಅಧ್ಯಕ್ಷರಾಗಿ ಟ್ರಸ್ಟ್ ನೇಮಸಿತ್ತು. ದೈವಸ್ಥಾನದ ಮೇಲೆ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದ್ದಾಗಿ ಪ್ರತಿವಾದಿಗಳು ಆರೋಪ ಮಾಡಿದ ಹಿನ್ನೆಲೆ ಘರ್ಷಣೆ ನಡೆದು  ಪ್ರಕಾಶ ಶೆಟ್ಟಿ ಮತ್ತು ಅಧ್ಯಕ್ಷ ಜಯ ಪೂಜಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 

ಆದರೆ ಜಯ ಪೂಜಾರಿ ಡಿಸೆಂಬರ್ 24ರಂದು ಹಟಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದು, ಭೂತಗಳಿಗೆ ತಂಬಿಲ ಸೇವೆ ನಡೆಯುವ ಸಂದರ್ಭದಲ್ಲಿ ಎಲ್ಲರೆದರೇ ಬಿದ್ದು ಸಾವನ್ನಪ್ಪಿದ್ದಾರೆ. ಹೀಗಾಗಿ ನ್ಯಾಯಾಲಯ ಮೆಟ್ಟಿಲೇರಿದರೆ ನೋಡಿಕೊಳ್ಳುತ್ತೇನೆ ಎಂಬ ಕಾಂತಾರ ದೈವದ ಹೇಳಿಕೆ ಜನ  ನೆನಪಿಸಿಕೊಂಡಿದ್ದಾರೆ.

ಟ್ವಿಟರ್ ಸಸ್ಪೆಂಡ್ ಆದದ್ದು ದೈವದ ಬಗ್ಗೆ ಬರೆದ ಪೋಸ್ಟ್‌ನಿಂದಲ್ಲ; ಊಹಾಪೋಹಗಳಿಗೆ ನಟ ಕಿಶೋರ್ ಬ್ರೇಕ್

ಇದೀಗ ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವುಗೊಳಿದಲಾಗಿದೆ. ಘರ್ಷಣೆ ಹಿನ್ನೆಲೆಯಲ್ಲಿ ದೈವ ನರ್ತಕರಿಗೂ  ಪ್ರಕಾಶ್ ಶೆಟ್ಟಿ ಮತ್ತು ತಂಡ ಕಿರುಕುಳ ನೀಡಿತ್ತು ಎಂದು ಟ್ರಸ್ಟ್ ಸದಸ್ಯರ ವಿರುದ್ಧ ಪ್ರತಿವಾದಿಗಳು ಆರೋಪ ಮಾಡಿದ್ದಾರೆ.

ದೈವ, ದೆವ್ವ ನಮ್ಮ ನಂಬಿಕೆಯಷ್ಟೇ, ಅವಮಾನಿಸುವ ಅವಶ್ಯಕತೆ ಇಲ್ಲ; ಕಾಂತಾರ ವೈರಲ್ ವಿಡಿಯೋಗೆ ಕಿಶೋರ್ ರಿಯಾಕ್ಷನ್

ತಮ್ಮ ಪರವಾಗಿ ದೈವ ನುಡಿ ನೀಡಬೇಕೆಂದು ಪ್ರಕಾಶ್ ಶೆಟ್ಟಿ ಮತ್ತು ತಂಡ  ಒತ್ತಡ ಹೇರಿದ್ದಾಗಿ ಆರೋಪ ಕೇಳಿಬಂದಿದೆ. ಆದರೆ ಹಳೆ ಸಮಿತಿಯ ಜೊತೆಗೆ ನಿಂತ ದೈವ ನರ್ತಕ ಭಾಸ್ಕರ ಬಂಗೇರ. ಕಾಂತರಾ ಸಿನಿಮಾದಲ್ಲೂ ದೈವ ನರ್ತಕ ಗುರುವನಿಗೆ ಬೆದರಿಕೆಯೊಡ್ಡಿ ಕೊಲ್ಲಲಾಗಿತ್ತು. ಈ ಕಾಕತಾಳಿಯ ಘಟನೆಗೆ ಕಾಂತಾರ ಸಿನಿಮಾ ಕಥೆ ಹೋಲಿಸಿ ಜನ ಮಾತನಾಡುತ್ತಿದ್ದಾರೆ.

Follow Us:
Download App:
  • android
  • ios