ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿರುವ ಕಾಂತಾರ ಸಿನಿಮಾ ಇದೀಗ 300 ಕೋಟಿ ಕ್ಲಬ್ ಸೇರಿದೆ. 

ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿರುವ ಕಾಂತಾರ ಸಿನಿಮಾದ ಹವಾ ಇನ್ನು ಕಡಿಮೆಯಾಗಿಲ್ಲ. ಬಾಕ್ಸ್ ಆಫೀಸ್ ನಲ್ಲೂ ಕಾಂತಾರ ಓಟ ಕುಗ್ಗಿಲ್ಲ. ಕೋಟಿ ಕೋಟಿ ಗಳಿಕೆ ಮಾಡಿರುವ ಕಾಂತಾರ ಇದೀಗ 300 ಕೋಟಿ ಕ್ಲಬ್ ಸೇರಿದೆ ಎಂದು ವರದಿಯಾಗಿದೆ. ಇದು ರಿಷಬ್ ಶೆಟ್ಟಿ ಅಂಡ್ ತಂಡಕ್ಕೆ ಸಂತಸ ತಂದಿದೆ. ಎಲ್ಲಿ ನೋಡಿದ್ರೂ ಕಾಂತಾರ ಸಿನಿಮಾದೇ ಹವಾ. ಸ್ಯಾಂಡಲ್ ವುಡ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲೂ ಕಾಂತಾರ ಸಿನಿಮಾಗೆ ಅದ್ಭತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೇಕ್ಷಕರ ಜೊತೆಗೆ ಅನೇಕ ಸ್ಟಾರ್ ಕಲಾವಿದರು ಸಹ ಮೆಚ್ಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಧನುಷ್, ಅನುಷ್ಕಾ ಶೆಟ್ಟಿ, ಕಾರ್ತಿ, ಬಾಲಿವುಡ್ ಸ್ಟಾರ್ ಗಳಾದ ಕಂಗನಾ ರಣಾವತ್, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಕಲಾವಿದರು ಕಾಂತಾರ ನೋಡಿ ಮೆಚ್ಚಿಕೊಂಡಿದ್ದಾರೆ. 

ಇದೀಗ ಕಾಂತಾರ 300 ಕೋಟಿ ಕ್ಲಬ್‌ ಸೇರಿದೆ. ಒಂದೇ ತಿಂಗಳ ಅವಧಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕಾಂತಾರ ಸಾಧನೆ ಮಾಡಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಓವರ್‌ಸೀಸ್‌ ಗಳಿಕೆಯ ಒಟ್ಟು ಮೊತ್ತ 300 ಕೋಟಿ ದಾಟಿದೆ. ಈ ಮೊತ್ತದಲ್ಲಿ ಕನ್ನಡದ ಗಳಿಕೆ ರು.150 ಕೋಟಿಯಾದರೆ ತೆಲುಗಿನಿಂದ ಬಂದದ್ದು .50 ಕೋಟಿ. ಹಿಂದಿ ಅವತರಣಿಕೆಯ ಗಳಿಕೆ 50 ರೂ. ಕೋಟಿ ದಾಟಿದೆ. ತಮಿಳುನಾಡಿನ ಮಂದಿ ಮಳೆಯ ನಡುವೆಯೇ ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದಾರೆ. ಕೇರಳದಲ್ಲೂ ಚಿತ್ರ ಜಯಭೇರಿ ಬಾರಿಸಿದೆ.

Kantara ಹಿಂದಿಗೆ ರಿಮೇಕ್ ಮಾಡುವ ಬಗ್ಗೆ ರಿಷಬ್ ಪ್ರತಿಕ್ರಿಯೆ ವೈರಲ್; ಶೆಟ್ರು ಹೇಳಿದ್ದೇನು?

ತೆಲುಗಿನಲ್ಲಿ ದಾಖಲೆ

ತೆಲುಗು ಭಾಷೆಯೊಂದರಲ್ಲೇ ಚಿತ್ರ 50 ಕೋಟಿ ರೂ. ಸಂಗ್ರಹಿಸಿ ದಾಖಲೆ ಬರೆದಿದೆ. ತೆಲುಗಿಗೆ ಡಬ್‌ ಆಗಿ ಈ ಮೊತ್ತ ಸಂಗ್ರಹಿಸುತ್ತಿರುವ 6ನೇ ಸಿನಿಮಾ ಇದಾಗಿದೆ. ಕನ್ನಡದ 2ನೇ ಸಿನಿಮಾವಾಗಿ ಕಾಂತಾರ ಹೊರಹೊಮ್ಮಿದೆ. ಎಲ್ಲಾ ಭಾಷೆಯಿಂದನೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿಯೂ ಭರ್ಜರಿ ಕಮಾಯಿ ಮಾಡಿದೆ. 

ಹಿಂದಿ ಸಿನಿಮಾಗಳಲ್ಲಿ ನಟಿಸಲು ಸೌತ್ ಸ್ಟಾರ್ಸ್ ಯಾಕೆ ಇಷ್ಟಪಡಲ್ಲ? ಅಭಿಮಾನಿಗಳ ಹೃದಯ ಗೆದ್ದ ರಿಷಬ್ ಉತ್ತರ

ಕಾಂತಾರ ಬಗ್ಗೆ

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ಖ್ಯಾತ ನಟ ಕಿಶೋರ್ ಕುಮಾರ್ ಸಹ ನಟಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯಾಗಿ ಸಪ್ತಮಿ ಗೌಡ ಮಿಂಚಿದ್ದಾರೆ. ಅಚ್ಯುತ್ ಕುಮಾರ್ ಪಾತ್ರ ಎಲ್ಲರ ಹೃದಯ ಗೆದ್ದಿದೆ. ಅನೇಕರಂಗಭೂಮಿ ಕಲಾವಿದರೂ ಕಾಂತಾರ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬಂಡಾವಳ ಹೂಡಿದೆ.