Kantara ಹಿಂದಿಗೆ ರಿಮೇಕ್ ಮಾಡುವ ಬಗ್ಗೆ ರಿಷಬ್ ಪ್ರತಿಕ್ರಿಯೆ ವೈರಲ್; ಶೆಟ್ರು ಹೇಳಿದ್ದೇನು?

ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಹಿಂದಿಗೆ ರಿಮೇಕ್ ಮಾಡುವ ಬಗ್ಗೆ ಎದುರಾದ ಪ್ರಶ್ನೆಗೆ ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ.

Rishab Shetty says Kantara should not be remade in Hindi sgk

ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿರುವ ಕಾಂತಾರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಪ್ರೇಕ್ಷಕರ ಜೊತೆಗೆ ಬೇರೆ ಬೇರೆ ಭಾಷೆಯ ಸಿನಿ ಪ್ರೇಕ್ಷಕರು ಹಾಗೂ ಸೆಲೆಬ್ರಿಟಿಗಳು ಸಿನಿಮಾ ನೋಡಿ ಹಾಡಿ ಹೊಗಳುತ್ತಿದ್ದಾರೆ. ದೇಶ- ವಿದೇಶಗಳಿಂದ ಕಾಂತಾರ ಚಿತ್ರಕ್ಕೆ ಮಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ಪ್ರಭಾಸ್, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಕಾಂತಾರ ನೋಡಿ ಫಿದಾ ಆಗಿದ್ದಾರೆ. ರಿಷಬ್ ಅಭಿನಯಕ್ಕೆ ಮನಸೋತಿದ್ದಾರೆ. ಕಾಂತಾರ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ.  ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌ನಲ್ಲೂ ಕನ್ನಡ ಸಿನಿಮಾದ ಹವಾ ಜೋರಾಗಿದೆ. ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಕಾಂತಾರ ಓಟ ಜೋರಾಗಿದೆ. ಸಿನಿಮಾ ಸಕ್ಸಸ್‌ನ ಸಂತಸದಲ್ಲಿರುವ ರಿಷಬ್ ಶೆಟ್ಟಿ ಅನೇಕ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ.

ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಕಾಂತಾರಾ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಿರುವ ಬಗ್ಗೆ ಎದುರಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ರಿಷಬ್ ಶೆಟ್ಟಿ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ರಿಷಬ್ ಹೇಳಿದ್ದೇನು ಅಂತೀರಾ?,  ಹಿಂದಿಗೆ ರಿಮೇಕ್ ಮಾಡಲ್ಲ, ರಿಮೇಕ್ ಬಗ್ಗೆ ತನಗೆ ಆಸಕ್ತಿಇಲ್ಲ ಎಂದು ಕಾಂತಾರ ಶಿವ ಹೇಳಿದ್ದಾರೆ. 

Rishab Shetty ರಜಿನಿಕಾಂತ್‌ ಭೇಟಿ ಮಾಡಿದ ಆಶೀರ್ವಾದ ಪಡೆದ ಕಾಂತಾರ ಶಿವ!

'ಅಂಥ ಪಾತ್ರವನ್ನು ನಿರ್ವಹಿಸಲು ಮೂಲ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ನಂಬಿಕೆ ಇರಬೇಕು. ಹಿಂದಿಯಲ್ಲಿ ನಾನು ಇಷ್ಟಡುವ ಅನೇಕ ಸ್ಟಾರ್ ಕಲಾವಿದರಿದ್ದಾರೆ. ಆದರೆ ನನಗೆ ರಿಮೇಕ್‌ಗಳಲ್ಲಿ ಆಸಕ್ತಿ ಇಲ್ಲ' ಎಂದು ಹೇಳಿದ್ದಾರೆ. ರಿಷಬ್ ಶೆಟ್ಟಿ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಿಷಬ್ ಹೇಳಿಕೆಯನ್ನು ನೆಟ್ಟಿಗರು, ಹಿಂದಿಯವರಿಗೆ ಶಿವನ ಪಾತ್ರ ಮಾಡಲು ಸಾಧ್ಯವಿಲ್ಲ, ಕಾಂತಾರ ರಿಮೇಕ್ ನಿಂದ ದೂರ ಇರಿ ಅಂತ ಹೇಳುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.    

ಇನ್ನು ಕಾಂತಾರ ಆಸ್ಕರ್‌ ಅಂಗಳಕ್ಕೆ ಕಳುಹಿಸುವಂತೆ ನೆಟ್ಟಿಗರ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ರಿಷಬ್ ಶೆಟ್ಟಿ, ಈ ಬಗ್ಗೆ ಯಾವುದೇ ಕಾಮೆಂಟ್ ಮಾಡಲ್ಲ ಎಂದರು. ಈ ಬಗ್ಗೆ ಸಾವಿರಗಟ್ಟಲೆ ಟ್ವೀಟ್ ನೋಡಿದೆ. ಖುಷಿ ಕೊಡುತ್ತದೆ. ಆದರೆ ಈ ಬಗ್ಗೆ ಕಾಮೆಂಟ್ ಮಾಡಲ್ಲ. ನಾನು ಸಕ್ಸಸ್ ಗಾಗಿ ಕೆಲಸ ಮಾಡಲ್ಲ, ಕೆಲಸಕ್ಕಾಗಿ ಮಾಡುತ್ತೇನೆ' ಎಂದು ಹೇಳಿದರು. 

Kantara ನಿಲ್ಲದ ಓಟ; ಕೆಜಿಎಫ್ ಗಳಿಕೆಯ ದಾಖಲೆ ಮುರಿದ ರಿಷಬ್‌ಶೆಟ್ಟಿ ಚಿತ್ರ!

ಕಾಂತಾರ ಸಿನಿಮಾ ಹಿಂದಿಯಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. ಈಗಾಗಲೇ ಹಿಂದಿಯಲ್ಲಿ ಕಾಂತಾರ 50 ಕೋಟಿ ಕಲಕ್ಷನ್ ಮಾಡಿದೆ. 3 ವಾರಕ್ಕೆ 50 ಕೋಟಿ ಬಾಚಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ಇನ್ನು ತಮಿಳು ಮತ್ತು ತೆಲುಗಿನಲ್ಲೂ ಭರ್ಜರಿ ಕಮಾಯಿ ಮಾಡಿದೆ. 

Latest Videos
Follow Us:
Download App:
  • android
  • ios