Kantara Collection; ಮುಂದುವರೆದ ರಿಷಬ್ ಶೆಟ್ಟಿ ಅಬ್ಬರ, ಹಿಂದಿಯಲ್ಲಿ ಇದುವರೆಗೂ ಒಟ್ಟು ಗಳಿಸಿದ್ದೆಷ್ಟು?
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಎರಡನೇ ವಾರವೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಎರಡನೇ ವಾರವೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಹೆಚ್ಚಾಗುತ್ತಿದೆ. ಈಗಾಗಲೇ 150 ಕೋಟಿ ದಾಟಿ ಮುನ್ನುಗ್ಗುತ್ತಿರುವ ಕಾಂತಾರ ಹಿಂದಿಯಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಕನ್ನಡದಲ್ಲಿ ರಿಲೀಸ್ ಆಗಿ ವಾರದ ಬಳಿಕ ಕಾಂತಾರ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಿದೆ. ಕನ್ನಡದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಬೇರೆ ಭಾಷೆಗಳಲ್ಲೂ ರಿಲೀಸ್ ಮಾಡುವಂತೆ ಬೇಡಿಕೆ ಹೆಚ್ಚಾಯಿತು. ಬಳಿಕ ದಕ್ಷಿಣ ಭಾರತದ ಎಲ್ಲಾ ಭಾಷೆ ಹಾಗೂ ಹಿಂದಿಯಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಯಿತು.
ಕಾಂತಾರ ಸಿನಿಮಾ ನೋಡಿ ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಸೆಲೆಬ್ರಿಟಿಗಳು ಸಹ ಫಿದಾ ಆಗಿದ್ದಾರೆ. ಹಿಂದಿಯಲ್ಲಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಂದಹಾಗೆ ಸಿನಿಮಾ ರಿಲೀಸ್ ಆಗಿ 9ನೇ ದಿನವೂ ಭರ್ಜರಿ ಕಮಾಯಿ ಮಾಡಿದೆ. ಸದ್ಯ ಹಿಂದಿಯಲ್ಲಿ ಕಾಂತಾರ 19.60 ಕೋಟಿ ರೂಪಾಯಿ ಬಾಚಿಕೊಂಡಿದೆ. ಶುಕ್ರವಾರ ಮತ್ತು ಶನಿವಾರ ಹಿಂದಿಯಲ್ಲಿ ಕಾಂತಾರ ಉತ್ತಮ ಕಲೆಕ್ಷನ್ ಮಾಡಿದೆ. ಮೊದಲ ವಾರಾಂತ್ಯದಲ್ಲಿ ಭರ್ಜರಿಯಾಗಿ ಗಳಿಕೆ ಮಾಡಿದ್ದ ಕಾಂತಾರ ವೀಕ್ ಡೇಸ್ ನಲ್ಲಿ ಮಂದಗತಿಯಲ್ಲಿ ಸಾಗಿತ್ತು. ಆದರೀಗ 2ನೇ ವಾರಾಂತ್ಯಕ್ಕೆ ಮತ್ತೆ ಕಲೆಕ್ಷನ್ ಅಬ್ಬರ ಹೆಚ್ಚಿದೆ. ಶುಕ್ರವಾರ (ಅಕ್ಟೋಬರ್ 21) ಕಾಂತಾರ 2.5 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಶನಿವಾರ (ಅಕ್ಟೋಬರ್ 22) 2.55 ಕೋಟಿ ಗಳಿಕೆ ಮಾಡಿದೆ. ಅಕ್ಟೋಬರ್ 24 ಭಾನುವಾರದ ಕಲೆಕ್ಷನ್ ಮೇಲೆ ಕುತೂಹಲ ಹೆಚ್ಚಾಗಿದೆ.ಇಂದು ಇಂಡೋ-ಪಾಕ್ ಕ್ರಿಕೆಟ್ ಮ್ಯಾಚ್ ಇರುವುದರಿಂದ ಕಲೆಕ್ಷನ್ ಮೇಲೆ ಕೊಂಚ ಹೊಡೆತ ಬೀಳುವ ಸಾದ್ಯತೆ ಇದೆ. ಹಾಗಾಗಿ ಇಂದಿನ ಕಲೆನ್ ಮೇಲೆ ಕುತೂಹಲ ಹೆಚ್ಚಾಗಿದೆ.
ಹಿಂದಿಯ ಕಲೆಕ್ಷನ್ ವಿವರವನ್ನು ಸಿನಿಮಾ ವಿಶ್ಲೇಕ ತರಣ್ ಆದರ್ಶ್ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 2ನೇ ವಾರಾಂತ್ಯಕ್ಕೆ ಹಿಂದಿಯಲ್ಲಿ ಕಾಂತಾರ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಲಿದೆಯ. ಈ ಮೂಲಕ ಒಟ್ಟು ಕಲೆಕ್ಷನ್ 200 ಕೋಟಿ ರೂಪಾಯಿ ದಾಟುತ್ತಾ ಎನ್ನುವ ಕುತೂಹಲ ಚಿತ್ರತಂಡಕ್ಕಿದೆ.
ರಿಷಬ್ ಶೆಟ್ಟಿಯ ಮಾಸ್ಟರ್‌ಪೀಸ್; 'ಕಾಂತಾರ' ನೋಡಿ ಹೊಗಳಿದ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ
ಇನ್ನು ಕಾಂತಾರ ತಮಿಳು ಮತ್ತು ತೆಲುಗಿನಲ್ಲೂ ಭರ್ಜರಿ ಕಮಾಯಿ ಮಾಡಿದೆ. ದಿನದಿಂದ ದಿನಕ್ಕೆ ಕಾಂತಾರ ಕಲೆಕ್ಷನ್ ಹೆಚ್ಚಾಗುತ್ತಲೆ ಇರುವುದು ಸಿನಿಮಾತಂಡದ ಸಂತಸಕ್ಕೆ ಪಾರವೇ ಇಲ್ಲವಾಗಿದೆ. ಕಲೆಕ್ಷನ್ ಜೊತೆಗೆ ಸಿನಿ ಗಣ್ಯರಿಂದನೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಟ್ನಲ್ಲಿ ಕನ್ನಡ ಕಾಂತಾರ ದೇಶದಾದ್ಯಂತ ಸದ್ದು ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಹಿಟ್ ಮೂವಿಗೆ ಹಾತೊರೆಯುತ್ತಿದೆ ಬಾಲಿವುಡ್; ಇತಿಹಾಸ ಸೃಷ್ಟಿಸಿವೆ ಕನ್ನಡ ಚಿತ್ರಗಳು!
ಕಾಂತಾರ ಬಗ್ಗೆ
ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಪಾತ್ರ ಗಮನಾರ್ಹವಾಗಿದೆ. ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ.