ಸ.ಹಿ.ಪ್ರಾ.ಪಾ.ಶಾಲೆ ನೋಡಿ ರಿಷಬ್‌ಗೆ 200 ರೂ. ಕಳುಹಿಸಿದ ಸಿನಿ ಪ್ರೇಮಿ!
ರಿಷಬ್ ಶೆಟ್ಟಿ ನಿರ್ದೇಶನದ 'ಸರಕಾರಿ ಹಿರಿಯ ಪಾರ್ಥಮಿಕ ಕಾಲೆ' 2018ರಲ್ಲಿ ಕನ್ನಡಿಗರ ಅಸ್ಮಿತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಚಿತ್ರ. ಇಂಥ ಚಲನಚಿತ್ರವನ್ನು ಇದೀಗ ವೀಕ್ಷಿಸಿದ ಸಿನಿ ಪ್ರೇಮಿಯೊಬ್ಬರು ಅದ್ಭುತ ಚಿತ್ರವೊಂದನ್ನು ವಿಭಿನ್ನವಾಗಿ ಕೊಂಡಾಡಿದ್ದು ಹೀಗೆ...
ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ಆ್ಯಂಡ್ ಆ್ಯಕ್ಟರ್ ಎಂದೇ ಗುರುತಿಸಿಕೊಂಡವರು ರಿಷಬ್ ಶೆಟ್ಟಿ. ಅದರಲ್ಲೂ 2018 ಆಗಸ್ಟ್ 24ರಂದು ತೆರೆ ಕಂಡ ಇವರ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಕಾಲೆ' ಕನ್ನಡ ಚಿತ್ರರಂಗವನ್ನೇ ಉತ್ತುಂಗಕ್ಕೆ ಕೊಂಡೊಯ್ದಿತ್ತು. ಅತ್ಯುತ್ತಮ ಮನೋರಂಜನಾ ಚಿತ್ರವೆಂದು ಕನ್ನಡ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದರೆ, ಅತ್ಯುತ್ತಮ ಮಕ್ಕಳ ಚಿತ್ರವೆಂದೂ ರಾಷ್ಟ್ರ ಪ್ರಶಸ್ತಿಯ ಗರಿಯೂ ಈ ಚಿತ್ರದ ಮುಡಿಗೇರಿದೆ. ಎಲ್ಲವುಕ್ಕಿಂತ ಹೆಚ್ಚಾಗಿ ಕನ್ನಡಿಗ ಚಿತ್ರ ಪ್ರೇಮಿಗಳಿಗೆ ರಸದೌತಣ ನೀಡಿದ ಮಕ್ಕಳ, ಕನ್ನಡಾಭಿಮಾನವನ್ನು ಎತ್ತಿ ಹಿಡಿಯುವ ಚಿತ್ರವಿದು.
ದೆಹಲಿಯಲ್ಲಿ 'ಸ್ವರ್ಣ ಕಮಲ' ಪಡೆದ ರಿಷಬ್ ಶೆಟ್ಟಿ; ಹರಿದು ಬಂತು ಶುಭಾಶಯಗಳು!
ಸುಮಾರು 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ವರ್ಸಟೈಲ್ ನಟ ಅನಂತ್ ನಾಗ್ ಈ ಚಿತ್ರದ ಹೈಲೈಟ್ಸ್. ಸತತ 100ಕ್ಕೂ ಹೆಚ್ಚು ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿಯೂ ಈ ಚಿತ್ರ ಯಶಸ್ವಿಯಾಗಿತ್ತು. ಇದೀಗ ಈ ಚಿತ್ರವನ್ನು Mx playerನಲ್ಲಿ ವೀಕ್ಷಿಸಿದ ಮೈಸೂರಿನ ಪುಸ್ತಕ ಪ್ರಕಾಶಕ ಭರತ್ ರಾಮಸ್ವಾಮಿ ರಿಷಬ್ ಶೆಟ್ಟಿ ಪತ್ರ ಬರೆದು ಟಿಕೆಟ್ ಹಣವನ್ನು ಹಿಂದಿರುಗಿಸಿದ್ದಾರೆ!
ಹೌದು, ಅದ್ಭುತ ಚಿತ್ರವೊಂದನ್ನು ಚಿತ್ರಮಂದಿರಕ್ಕೆ ಹೋಗದೇ ನೋಡಿದ್ದಕ್ಕೆ ಬೇಸರವಿದೆ. ಅದರ ಹಣವನ್ನು ಕಳುಹಿಸುತ್ತಿದ್ದೇನೆಂದು 200 ರೂ. ಜೊತೆಗೆ ರಿಷಬ್ ಕೆಲಸಕ್ಕೆ ಬೇಷ್ ಎಂದಿದ್ಹಾರೆ.
ಪುಟ್ಟಣ್ಣ ಕಣಗಾಲ್ ಕುಟುಂಬದಿಂದ ರಿಷಬ್ ಶೆಟ್ರಿಗೆ ಸ್ಪೆಷಲ್ ಗಿಫ್ಟ್!
ಭರತ್ ರಾಮಸ್ವಾಮಿ ಜನವರಿ 12ರಂದು 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ವೀಕ್ಷಿಸಿದ್ದಾರೆ. ಸಿನಿಮಾ ರಸಿಕರಾದ ಭರತ್ ರಿಷಬ್ ಶೆಟ್ಟಿ ನಿರೂಪಣಾ ಶೈಲಿ ಮತ್ತು ಸಿನಿ ಪ್ಲೇಗೆ ಫಿದಾ ಆಗಿದ್ದಾರೆ. ಇಂತಹ ಅದ್ಭುತವಾದ ಚಿತ್ರವನ್ನು ತಡವಾಗಿ ನೋಡಿದೇ ತಪ್ಪು, ಅದರಲ್ಲೂ ಚಿತ್ರ ಮಂದಿರದಲ್ಲಿ ನೋಡದ ಕಾರಣ ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ ಎಂದೂ ಹೇಳಿ, ಚಿತ್ರವನ್ನು ಕೊಂಡಾಡಿದ್ದಾರೆ.