Asianet Suvarna News Asianet Suvarna News

Hombale Films ಕಾಂತಾರ 2 ನಿರ್ಮಾಣ ಯೋಜನೆ ಇದೆ ಆದರೆ ಕಾಲಮಿತಿ ಇಲ್ಲ: ವಿಜಯ ಕಿರಗಂದೂರು

ಕೆಜಿಎಫ್ ಚಾಪ್ಟರ್ 1 ಸಿನಿಮಾ 4 ವರ್ಷ ಪೂರೈಸಿದ ಬೆನ್ನಲೆ ಮತ್ತೊಂದು ಬಿಗ್ ಅಪ್ಡೇಟ್ ನೀಡಿದ ವಿಜಯ್ ಕಿರಗಂದೂರು..... 

Kantara 2 will happen says Hombale film founder Vijay Kiragandur vcs
Author
First Published Dec 22, 2022, 9:10 AM IST

2014ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ನಿನ್ನಿಂದಲೆ' ಸಿನಿಮಾ ಮೂಲಕ ಆರಂಭವಾದ ಹೊಂಬಾಳೆ ಫಿಲ್ಮ ನಿರ್ಮಾಣ ಸಂಸ್ಥೆ ಇದೀಗ ವಿಶ್ವಾದ್ಯಂತ ಜನಪ್ರಿಯತೆ ಪಡೆದಿದೆ. ಇದಕ್ಕೆ ಸಾಕ್ಷಿಯೇ ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಕೆಜಿಎಫ್ ಚಾಪ್ಟರ್ 1, ಕೆಜಿಎಫ್ ಚಾಪ್ಟರ್ 2 ಮತ್ತು ಕಾಂತಾರ ಸಿನಿಮಾ. ಹೊಂಬಾಳೆ ಫಿಲ್ಮಂ ಈಗ ಕಾಂತಾರ 2 ನಿರ್ಮಾಣ ಮಾಡೋ ಪ್ಲ್ಯಾನ್ ಮಾಡುತ್ತಿದೆ ಎನ್ನುವ ಸುಳಿವು ಸಿಕ್ಕಿದೆ.... 

ಹೌದು! ಕಾಂತಾರ ಸಿನಿಮಾ ವಿಶ್ವಾದ್ಯಂತ ಹೆಸರು ಮಾಡಿ 500 ಕೋಟಿ ಕಲೆಕ್ಷನ್ ಮಾಡಿದ 2022ರ IMDB 10 ಬೆಸ್ಟ್‌ ಸಿನಿಮಾಗಳ ಸಾಲಿನಲ್ಲಿ 6ನೇ ಸ್ಥಾನ ಪಡೆದಿತ್ತು. ಅಮೇಜಾನ್ ಪ್ರೈಮ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿರುವ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೀಗಾಗಿ ಸಿನಿಮಾ ಮುಂದಿನ ಭಾಗ ನೋಡಬೇಕು ಎಂದು ವೀಕ್ಷಕರು ಡಿಮ್ಯಾಂಡ್ ಮಾಡುತ್ತಿರುವ ಕಾರಣ ಕಾಂತಾರ 2 ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ. ಈಗ ಹೊಂಬಾಳೆ ಸಹಸಂಸ್ಥಾಪರು ಕೂಡ ಸುಳಿವು ಕೊಟ್ಟಿದ್ದಾರೆ. 

Kantara 2 will happen says Hombale film founder Vijay Kiragandur vcs

‘ನಟ ರಿಷಬ್‌ ಶೆಟ್ಟಿನಟಿಸಿ ನಿರ್ದೇಶಿಸಿದ್ದ ಸೂಪರ್‌ ಹಿಟ್‌ ಚಲನಚಿತ್ರ ‘ಕಾಂತಾರ’ದ ಎರಡನೇ ಭಾಗ ‘ಕಾಂತಾರ 2’ ತರಲು ಕಥೆ ಅಭಿವೃದ್ಧಿಪಡಿಸಲಾಗುವುದು. ಚಿತ್ರ ನಿರ್ಮಾಣದ ಯೋಜನೆ ಇದೆ. ಕಾಲಮಿತಿ ಇಲ್ಲ.ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಬ್ಯಾನರ್‌ ಸಂಭ್ರಮದಲ್ಲಿದೆ. ಶೀಘ್ರದಲ್ಲೇ ಚಿತ್ರ ಕಥೆಯ ಪೂರ್ವ ಅಥವಾ ಮುಂದುವರಿದ ಭಾಗದ ಕುರಿತು ಕಥೆ ಸಿದ್ಧಪಡಿಸಲಾಗುವುದು’ ಎಂದು ಸಹಸಂಸ್ಥಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ. 

ಈ ಹಿಂದೆಯೂ ಕಾಂತಾರ 2 ಕುರಿತು ರಿಷಬ್‌ ಮಾತನಾಡಿದ್ದರು. 'ಕಾಂತಾರ 2 ಸಿನಿಮಾ ಮಾಡುವ ಯೋಜನೆ ಇಲ್ಲ ಆದರೆ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ನಾವು ಯಾವ ಮಾಹಿತಿ ನೀಡಿಲ್ಲ ಆದರೆ ಜನರೇ ಕಾಂತಾರ 2 ಕಾಂತಾರ 2 ಎನ್ನುತ್ತಿದ್ದಾರೆ' ಎಂದು ಹೇಳಿದ್ದಾರೆ. ಅಲ್ಲದೆ ಕೆಲವು ದಿನಗಳ ಹಿಂದೆ ದೈವ ಅಪ್ಪಣೆ ಪಡೆಯಲು ಮುಂದಾಗಿದ್ದರು. ಸೆ.30ರಂದು ಬಿಡುಗಡೆಯಾಗಿದ್ದ ಕಾಂತಾರ ಅಪಾರ ಜನಮನ್ನಣೆ ಗಳಿಸಿತ್ತು. ಕೇವಲ 16 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದರೂ ವಿಶ್ವಾದ್ಯಂತ 500 ಕೋಟಿ ಗಳಿಕೆ ಮಾಡಿತ್ತು.

Bagalkote: ಇಳಕಲ್‌ ಸೀರೆಯ ಮೇಲೆ ಕಾಂತಾರ: ಆಸ್ಕರ್ ಅವಾರ್ಡ್‌ಗಾಗಿ ಶುಭ ಹಾರೈಸಿದ ಯುವ ನೇಕಾರ ಮೇಘರಾಜ್

ದೈವ ಅನುಮತಿ ಕೊಟ್ಟಿದೆ:

'ಕಾಂತಾರ' ಭಾಗ 2 ಸಿನಿಮಾ ಮಾಡಲು ದೈವ ಅನುಮತಿಯನ್ನು ನೀಡಿದೆ. ಆದರೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ ಎನ್ನಲಾಗಿದೆ. 'ಕಾಂತಾರ' ಚಿತ್ರತಂಡಕ್ಕೆ ಅಭಯ ನೀಡಿರುವ ಅಣ್ಣಪ್ಪ ಪಂಜುರ್ಲಿ 'ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ. ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ. ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ' ಎಂದು ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ ಎನ್ನಲಾಗಿದೆ. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ದೈವದ ಬಳಿ ರಿಷಬ್ ಶೆಟ್ಟಿ ಕಾಂತಾರಾ ಭಾಗ-2 ನಿರ್ಮಾಣಕ್ಕೆ ಅನುಮತಿ ಕೇಳಿದ್ದಾರೆ.

Follow Us:
Download App:
  • android
  • ios