- ಓಟಿಟಿಗೆ ಬರದಿದ್ದರೆ ವೀರೇಶ್ ಥಿಯೇಟರ್‌ನಲ್ಲಿ 100 ದಿನ: ಕೆ ವಿ ಚಂದ್ರಶೇಖರ್- ಈ ತಿಂಗಳ ಕೊನೆಗೆ ಅನಿವಾರ್ಯವಾಗಿ ಓಟಿಟಿಗೆ ಕಾಂತಾರ: ಕಾರ್ತಿಕ್ ಗೌಡ
ರಿಷಬ್ ಶೆಟ್ಟಿನಟನೆ, ನಿರ್ದೇಶನದ ಕಾಂತಾರ ಸಿನಿಮಾ ಯಶಸ್ವಿ 50ನೇ ದಿನಕ್ಕೆ ಅಡಿ ಇಟ್ಟಿದೆ. ಈಗಲೂ ರಾಜ್ಯಾದ್ಯಂತ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಿಶ್ವಾದ್ಯಂತ 300ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಸಕ್ಸಸ್‌ಫುಲ್ ಆಗಿ ಓಡುತ್ತಿದೆ. ವಿಶ್ವಾದ್ಯಂತ 400 ಕೋಟಿ ಕ್ಲಬ್ ಸೇರುವ ದಿನ ಸನ್ನಿಹಿತವಾಗಿದೆ. ಹಲವು ದಾಖಲೆಗಳ ಸರದಾರ ಕಾಂತಾರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ನಮ್ಮ ರಾಜ್ಯವೊಂದರಲ್ಲೇ 1 ಕೋಟಿಗೂ ಮೀರಿ ಟಿಕೆಟ್ ಮಾರಾಟವಾದ ಮೊದಲ ಕನ್ನಡ ಸಿನಿಮಾ ಎನ್ನುವ ದಾಖಲೆ ಕೂಡ ಕಾಂತಾರ ಹೆಗಲೇರಿದೆ.
ಈ ಬಗ್ಗೆ ಇನ್ನಷ್ಟುವಿವರ ನೀಡುವ ರಾಜ್ಯ ಪ್ರದರ್ಶಕರ ಸಂಘದ ಅಧ್ಯಕ್ಷ ಕೆವಿ ಚಂದ್ರಶೇಖರ್, ‘ಹಿಂದೆ ರಾಜ್‌ಕುಮಾರ್ ಅವರ ಚಿತ್ರಗಳು, ವಿಷ್ಣುವರ್ಧನ್ ಅವರ ಚಿತ್ರಗಳು 50, 100 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಾಣುತ್ತಿದ್ದವು. ಆದರೆ ಆಗ ಥಿಯೇಟರ್‌ಗಳ ಸಂಖ್ಯೆ ಇಷ್ಟಿರಲಿಲ್ಲ. ಇತ್ತೀಚೆಗೆ ಹೆಸರು ಮಾಡಿರುವ ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನಿಮಾ ಸಹ ರಾಜ್ಯದಲ್ಲಿ 50 ದಿನಗಳ ಯಶಸ್ವಿ ಪ್ರದರ್ಶನ ಕಾಣಲಿಲ್ಲ. ಕಾಂತಾರ ಸಿನಿಮಾಗೆ ಈಗಲೂ ಸಾಕಷ್ಟುಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಓಟಿಟಿಗೆ ಬರದಿದ್ದರೆ ಈ ಚಿತ್ರವನ್ನು ನಮ್ಮ ವೀರೇಶ್ ಥಿಯೇಟರ್‌ನಲ್ಲೇ 100 ದಿನ ಪ್ರದರ್ಶಿಸುತ್ತೇವೆ’ ಎನ್ನುತ್ತಾರೆ.
Rishab Shetty ಮಂಗಳೂರಿನಲ್ಲಿ ಥಿಯೇಟರ್ ಸಿಕ್ಕಿರಲಿಲ್ಲ; ಸಹಾಯ ಮಾಡಿದ ಆರ್‌ಜೆಗೆ ರಿಟರ್ನ್ ಶೋ ಕೊಟ್ಟ ಶೆಟ್ರು
ಹೊಂಬಾಳೆ ಫಿಲಂಸ್ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಕಾರ್ತಿಕ್ ಗೌಡ ಕಾಂತಾರದ ಯಶಸ್ಸಿಗೆ ಸಂತಸ ವ್ಯಕ್ತಪಡಿಸುತ್ತಲೇ, ‘ಈಗ ವಿಶ್ವಾದ್ಯಂತ 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಕಾಂತಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತಿಂಗಳಾಂತ್ಯಕ್ಕೆ ಅನಿವಾರ್ಯವಾಗಿ ಓಟಿಟಿಗೆ ಬರುತ್ತಿದ್ದೇವೆ. ಹಾಗೆ ನೋಡಿದರೆ ಆರು ವಾರಕ್ಕೆ ಓಟಿಟಿಗೆ ಬರಬೇಕಿತ್ತು. ಆದರೆ ಸಿನಿಮಾ ಥಿಯೇಟರ್‌ಗಳಲ್ಲಿ ಅಷ್ಟುಚೆನ್ನಾಗಿ ಓಡುತ್ತಿದ್ದ ಕಾರಣ ಅಮೆಜಾನ್ ಪ್ರೈಮ್ ಬಳಗಕ್ಕೆ ಕೊಂಚ ಒತ್ತಡ ಹಾಕಿ ಓಟಿಟಿ ರಿಲೀಸ್ ಅನ್ನು 2 ವಾರ ಮುಂದೆ ಹಾಕಿದೆವು. ಆದರೆ ಈಗ ಅನಿವಾರ್ಯವಾಗಿ ಬರಲೇಬೇಕಾಗಿದೆ. ಓಟಿಟಿ ಸಂಬಂಧಿತ ಮಾತುಕತೆಗಳೆಲ್ಲ ಮೊದಲೇ ನಡೆದಿರುವ ಕಾರಣ ಇದು ಅನಿವಾರ್ಯ’ ಎನ್ನುತ್ತಾರೆ. ಗಳಿಕೆಯ ಬಗ್ಗೆ ವಿವರ ನೀಡಲು ಕಾರ್ತಿಕ್ ನಿರಾಕರಿಸಿದ್ದಾರೆ.
ಚಿತ್ರ ಈಗಾಗಲೇ ದಾಖಲೆಯ ಗಳಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಹಿಂದಿಯಲ್ಲೇ ಸುಮಾರು 80 ಕೋಟಿ ರು.ಗಳಷ್ಟುಕಲೆಕ್ಷನ್ ದಾಖಲಿಸಿದೆ. ರಾಜ್ಯದಲ್ಲಿ ಅಂದಾಜು 200 ಕೋಟಿ ರು.ಗಳಿಗೂ ಅಧಿಕ ಗಳಿಕೆ ಮಾಡಿದೆ. ತಮಿಳು, ತೆಲುಗು, ಮಲಯಾಳಂನಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತುಳುವಿನಲ್ಲೂ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
Siddhashree National Award: ನಟ ರಿಷಬ್ ಶೆಟ್ಟಿಗೆ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ
ಮರಳುಶಿಲ್ಪವೆಂದರೆ ತಾಳ್ಮೆಯ ಸಾಗರ
ಕರಾವಳಿ ಭಾಗದ ಸಮುದ್ರ ತೀರದಲ್ಲಿ ರಚಿಸುವ ಮರಳು ಶಿಲ್ಪಗಳೆಂದರೆ ವಿಶೇಷ ಆಕರ್ಷಣೆ ಇದೆ. ಈ ಮರಳು ಶಿಲ್ಪಗಳನ್ನು ರಚಿಸುವುದು ಸುಲಭದ ಕೆಲಸವಲ್ಲ. ದಿನವಿಡೀ ಶ್ರಮಪಟ್ಟು, ಹಲವು ಗಂಟೆಗಳ ಪರಿಶ್ರಮದ ಅಗತ್ಯವಿದೆ. ಜಾರುವ ಗುಣದ ಮರಳಿನ ಕಣಗಳನ್ಬು ಜೋಡಿಸಿ ಕಲಾಕೃತಿ ಮೂಡಿಸುವುದೇ ಒಂದು ಸಾಹಸ. ಸ್ಯಾಂಡ್ ಹಾರ್ಟ್ ಹೆಸರಲ್ಲಿ ತಂಡ ಕಟ್ಟಿಕೊಂಡಿರುವ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು, ರವಿ ಹಿರೇಬೆಟ್ಡು ಮರಳುಶಿಲ್ಪ ರಚನೆಯಲ್ಲಿ ಸಿದ್ದಹಸ್ತರು. ಇಷ್ಟೊಂದು ಕಷ್ಟ ಪಟ್ಟು ತಯಾರಿಸಿದ ಈ ಮರಳು ಶಿಲ್ಪವನ್ನು ಕೆಲವೇ ನಿಮಿಷಗಳ ಕಾಲ ಮಾತ್ರ ನೋಡಬಹುದು. ನಂತರ ಈ ಕಲಾಕೃತಿ ಮರಳುಪಾಲಾಗುತ್ತೆ.
