ನನಗೆ ಮಾತ್ರವಲ್ಲ, ನನ್ನ ಮಗನಿಗೂ ಇದೊಂದು ಮರೆಯಲಾಗದ ಸಂಭ್ರಮ.-ಹೀಗೆ ಹೇಳಿಕೊಂಡಿದ್ದು ನಟ ಕಂ ನಿರ್ದೇಶಕ ರಿಷಬ್‌ ಶೆಟ್ಟಿ.

ತಮ್ಮ ಪುತ್ರ ರಣ್ವಿತ್‌ ಶೆಟ್ಟಿಮೊದಲ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ ರೀತಿಯನ್ನು ಖುಷಿಯಿಂದ ಹೇಳಿಕೊಂಡರು. ಅವರ ಮಾತುಗಳಲ್ಲೇ ಹುಟ್ಟುಹಬ್ಬದ ಆಚರಣೆ ಹೇಗಿತ್ತು ಅನ್ನೋದು ಕೇಳಿ-

‘ ಸಾವಿರಾರು ರುಪಾಯಿ ವೆಚ್ಚ ಮಾಡಿದ್ದರೂ ಇಂಥದ್ದೊಂದು ಸಂಭ್ರಮ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಕುಂದಾಪುರ ಬಳಿಯ ಕೆರಾಡಿ ಗ್ರಾಮ. ನಾನು ಹುಟ್ಟಿದ ಊರು. ಲಾಕ್‌ಡೌನ್‌ ಕಾರಣಕ್ಕೆ ಬೆಂಗಳೂರು ಬಿಟ್ಟು ಬಂದ ಮೇಲೆ ನನ್ನ ಮಗನ ಹುಟ್ಟುಹಬ್ಬಕ್ಕೆ ನನ್ನೂರಿನ ತೋಟವೇ ದೊಡ್ಡ ವೇದಿಕೆ ಆಯ್ತು. ಮನೆಯ ಕೆಲವೇ ಸದಸ್ಯರು, ಅಡಿಕೆ ಹಾಳೆಯ ಟೋಪಿ, ಹಲಸಿನ ಕಾಯಿ, ಪಪ್ಪಾಯಿ, ಎಳನೀರು, ತೆಂಗಿನ ಗರಿಗಳ ಚಪ್ಪರ, ಕಾಡಿನ ಹೂವುಗಳು, ಮಾವಿನ ಗಿಡಗಳ ನೆರಳು, ಸ್ವಚ್ಛ ಗಾಳಿ, ಹಳೆಯ ಪಾತ್ರೆಗಳು.

ಪುತ್ರ ರಣ್ವಿತ್‌ ಮೊದಲ ಬರ್ತಡೇಗೆ ಸ್ಪೆಷಲ್‌ ಗಿಫ್ಟ್‌ ನೀಡಿದ ರಿಷಬ್‌ ಶೆಟ್ಟಿ

View post on Instagram

ಇಷ್ಟೆಲ್ಲವೂ ನನ್ನ ಪುತ್ರನ ಮೊದಲ ಹುಟ್ಟು ಹಬ್ಬದ ಸಂಭ್ರಮವನ್ನು ರಂಗೇರಿಸಿದವು. ಅವನು ಮುಂದೆ ಎಂದಾದರೂ ತನ್ನ ಮೊದಲ ಹುಟ್ಟುಹಬ್ಬ ಹೇಗಾಯಿತು ಎಂದು ಹಿಂತಿರುಗಿ ನೋಡಿದರೆ ಖಂಡಿತ ಬೆರಗಾಗುತ್ತಾನೆ, ಖುಷಿ ಪಡುತ್ತಾನೆ. ಹುಟ್ಟೂರಿನಲ್ಲಿ ನಡೆಯುವ ಪ್ರತಿ ಸಂಭ್ರಮವೂ ನಮಗೆ ಸದಾ ನೆನಪಿರುವುದು ಯಾಕೆ ಎಂಬುದು ನನ್ನ ಮಗನ ಹುಟ್ಟು ಹಬ್ಬ ನೋಡಿದ ಮೇಲೆ ಗೊತ್ತಾಯಿತು.