ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಶಕೀಲಾ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಚಿತ್ರವನ್ನು ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದ್ದಾರೆ.
ಕನ್ನಡದ ಜತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ‘ಶಕೀಲಾ’ ಸಿನಿಮಾ ತೆರೆಗೆ ಬರಲಿದೆ. ಇಲ್ಲಿ ಶಕೀಲಾ ಪಾತ್ರದಲ್ಲಿ ಬಾಲಿವುಡ್ ನಟಿ ರಿಚಾ ಚಡ್ಡಾ ನಟಿಸಿದ್ದಾರೆ. ವಿತರಕರು, ನಿರ್ಮಾಪಕರು ಹಾಗೂ ಚಿತ್ರಮಂದಿರಗಳ ಪಾಲಿನ ಬಾಕ್ಸ್ ಅಫೀಸ್ ಕ್ವೀನ್ ಎನಿಸಿಕೊಂಡ ನಟಿಯ ಬಗ್ಗೆ ಮೂಡಿ ಬಂದಿರುವ ಟ್ರೇಲರ್‌ಗೆ ನೋಡುಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
"
ಶಕೀಲಾ ಅವರ ಕುರಿತು ಪ್ರತ್ಯೇಕವಾಗಿ ಹೇಳಬೇಕಿಲ್ಲ. 90ರ ದಶಕದ ಹಾಟ್ ನಟಿ. ನೀಲಿ ಚಿತ್ರಗಳ ತಾರೆ ಎಂದೇ ಗುರುತಿಸಿಕೊಂಡಿದ್ದ ಶಕೀಲಾ ಅವರ ಜೀವನ ಪುಟಗಳನ್ನು ಆಧರಿಸಿ ಇಂದ್ರಜಿತ್ ಲಂಕೇಶ್ ಶಕೀಲಾ ಹೆಸರಿನಲ್ಲೇ ಸಿನಿಮಾ ಮಾಡಿದ್ದಾರೆ. ಆ ಕಾಲದ ಈ ನೀಲಿ ತಾರೆಯ ಬದುಕು, ನಟನಾ ಜಗತ್ತು ಹೇಗಿತ್ತು ಎಂಬುದನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ. ಹಿಂದಿಯ ಪಂಕಜ್ ತ್ರಿಪಾಠಿ ಹಾಗೂ ಮಲಯಾಳಂನ ರಾಜೀವ ಪಿಳ್ಲೈ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಶಕೀಲಾ ಎಂಬ ಹೆಸರು ತಂದಿಟ್ಟ ಫಜೀತಿ!
ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿರುವ ಶಕೀಲಾ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ್ದು, ಡಿಸೆಂಬರ್ 25ಕ್ಕೆ ಎಲ್ಲ ಕುತೂಹಲಗಳಿಗೆ ಉತ್ತರ ದೊರೆಯಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 7, 2020, 9:42 AM IST