ಇವರ ನಟನೆ, ನಿರ್ದೇಶನ ಹಾಗೂ ನಿರ್ಮಾಣದ ಚಿತ್ರದ ಹೆಸರು ‘ರಿವೈಂಡ್‌’. ಇತ್ತೀಚೆಗಷ್ಟೆಚಿತ್ರದ ಟೀಸರ್‌ ಬಿಡುಗಡೆ ಮಾಡಲಾಯಿತು. ಈ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು.

ಇದೇ ಹೆಸರಿನಲ್ಲಿ ತಮಿಳಿನಲ್ಲಿ ಒಂದು ಸಿನಿಮಾ ಸೆಟ್ಟೇರಿದ್ದು, ಇದರಲ್ಲಿ ಸಿಲಂಬರಸನ್‌ ನಾಯಕನಾಗಿ ನಟಿಸಿದ್ದಾರೆ. ಈಗ ತೇಜ್‌ ಅವರ ಸಿನಿಮಾ ಕೂಡ ತಮಿಳಿನಲ್ಲೂ ಬಿಡುಗಡೆ ಆಗುತ್ತಿದೆ. ಹೀಗಾಗಿ ಶೀರ್ಷಿಕೆ ಗೊಂದಲ ಕಾರಣಕ್ಕೆ ಚಿತ್ರದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ ಎಂದು ಮೊದಲೇ ಮಾಹಿತಿ ನೀಡಿದರು ನಾಯಕ ಕಂ ನಿರ್ದೇಶಕ ತೇಜ್‌.

ಮೇಘನಾ ರಾಜ್‌ ಸೀಮಂತದಲ್ಲಿದ್ದ ಆ ಸ್ಟಾರ್ ನಟ ಯಾರು ಗೊತ್ತಾ? 

‘ಇದೊಂದು ವಿಜ್ಞಾನ ಆಧಾರಿತ ಸಿನಿಮಾ. ತಾಂತ್ರಿಕವಾಗಿ ತುಂಬಾ ಚೆನ್ನಾಗಿದೆ. ನನ್ನ ನಿರೀಕ್ಷೆಗೂ ಮೀರಿ ಚಿತ್ರ ಮೂಡಿ ಬಂದಿದೆ. ಮನುಷ್ಯನ ಮೈಂಡ್‌ ಹಾಗೂ ಆಲೋಚನೆಗಳ ಮೇಲೆ ಮೂಡಿ ಬಂದಿರುವ ಕತೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ. ಕನ್ನಡದ ಮಟ್ಟಿಗೆ ಇದೊಂದು ಭಿನ್ನತೆಯಿಂದ ಕೂಡಿದ ಸಿನಿಮಾ’ ಎನ್ನುತ್ತಾರೆ ತೇಜ್‌. ಚಂದನ ಚಿತ್ರದ ನಾಯಕಿ. ಸುಂದರ್‌ ರಾಜ್‌, ಧರ್ಮ, ಸಂದೀಪ್‌ ಮಲಾನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.