ಆರ್‌ಕೆ

ಕನ್ನಡದ ಚಿತ್ರರಂಗದಲ್ಲಿ ಹಲವಾರು ಪಾತ್ರಗಳ ಮೂಲಕ ತೆರೆ ಮೇಲೆ ಮಿಂಚಿದ ಮೈಕಲ್‌ ಮಧು ಅನಾರೋಗ್ಯದ ಕಾರಣಕ್ಕೆ ನಿಧನರಾಗಿದ್ದಾರೆ. ವಯಸ್ಸು 55, ಸಾಯುವಂತದ್ದಲ್ಲ. ಯಮ ಹೃದಯಘಾತದ ವೇಷ ತೊಟ್ಟು ಬಂದು ಮೈಕಲ್‌ ಅವರ ಕೊನೆಯ ಪಯಣ ಮಾಡಿಸಿ ಬಿಟ್ಟ. ಇನ್ನು ನೆನಪು ಮಾತ್ರ ಎನ್ನುವ ಸತ್ಯ ಹೇಳಿ ಹೋದ ಮೈಕಲ್‌ ಮಧು ಅವರ ಬಗ್ಗೆ ಗೊತ್ತಿಲ್ಲದ ಒಂದಿಷ್ಟುಸಂಗತಿಗಳು ಇಲ್ಲಿವೆ.

ಮೈಕಲ್‌ ಮಧು ಟಾಪ್‌ 10 ಹೆಜ್ಜೆಗಳು

1. ಮೈಕಲ್‌ ಮಧು ಅವರ ಪೂರ್ತಿ ಹೆಸರು ಮಧುಸೂದನ್‌. ಇವರು ಮೈಕಲ್‌ ಜಾಕ್ಸನ್‌ ಅವರಂತೆ ಡ್ಯಾನ್ಸ್‌ ಮಾಡುತ್ತಿದ್ದರಿಂದ ಆಗ ಪತ್ರಕರ್ತ ಬಾಲಕೃಷ್ಣ ಕಾಕತ್ಕರ್‌ ಅವರೇ ಇವರಿಗೆ ಮೈಕಲ್‌ ಎನ್ನುವ ಬಿರುದು ಕೊಟ್ಟರು. ಅಲ್ಲಿಂದ ಮಧುಸೂದನ್‌, ಮೈಕಲ್‌ ಮಧು ಆಗಿಯೇ ಗುರುತಿಸಿಕೊಂಡರು.

'ಮಹಾಪ್ರಭುಗಳೇ ನೀವೇನು ಇಲ್ಲಿ' ವಿಶಿಷ್ಟ ಹಾಸ್ಯ ಕಲಾವಿದ ಮೈಕಲ್ ಮಧು ಇನ್ನಿಲ್ಲ

2. ಮೈಕಲ್‌ ಮಧು ಪ್ರಸಿದ್ಧ ಡಾನ್ಸ್‌ ಮಾಸ್ಟರ್‌ ಆಗಿದ್ದರು. 1983ರಲ್ಲೇ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೃತ್ಯ ಹೇಳಿಕೊಡುವ ಬ್ಯುಸಿಯಾಗಿದ್ದ ಡ್ಯಾನ್ಸರ್‌.

3. ಇವರಿಗೆ ಸಿನಿಮಾಗಳಲ್ಲಿ ನಟನಾಗಬೇಕು ಎನ್ನುವ ಆಸೆ ಇರಲಿಲ್ಲ. ಆದರೆ, ಯಾವುದೋ ಡಾನ್ಸ್‌ ಕಾರ್ಯಕ್ರಮದಲ್ಲಿ ರಾಜಕಾರಣಿ ಬಂಗಾರಪ್ಪು ಅವರು ಮಧು ಅವರನ್ನು ನೋಡಿ, ತಮ್ಮ ಪುತ್ರ ಕುಮಾರ್‌ ಬಂಗಾರಪ್ಪ ಅವರನ್ನು ಭೇಟಿ ಮಾಡುವಂತೆ ಹೇಳಿದರು. ಆಗ ಅವರು ಕಾಶಿನಾಥ್‌ ನಟನೆಯಲ್ಲಿ ಬಂಗಾರಿ ಸಿಂಗಾರಿ ಚಿತ್ರ ಮಾಡುತ್ತಿದ್ದರು. ಸಿಆರ್‌ ಸಿಂಹ ಅವರು ಮೈಕಲ್‌ ಅವರನ್ನು ನೋಡಿದ ಕೂಡಲೇ ಆಡಿಷನ್‌ ಕೂಡ ಮಾಡದೆ ಬಂಗಾರಿ ಸಿಂಗಾರಿ ಚಿತ್ರದಲ್ಲಿ ವಿಲನ್‌ ಪಾತ್ರ ಕೊಟ್ಟರು. ಇದು ಮೈಕಲ್‌ ಮಧು ಅವರ ಮೊದಲ ಸಿನಿಮಾ.

4. ಉಪೇಂದ್ರ ಅವರೇ ಬರೆದಿದ್ದ, ಕಾಶಿನಾಥ್‌ ಅವರ ನಟನೆಯ ಲವ್‌ ಟ್ರೈನಿಂಗ್‌ ಚಿತ್ರದಲ್ಲಿ ಮೈಕಲ್‌ ಮಧು ಒಂದು ಪಾತ್ರ ಮಾಡಿದರು. ಈ ಪಾತ್ರಕ್ಕೆ ಮೈಕಲ್‌ ಅವರೇ ಬೇಕು ಅಂತ ಕರೆಸಿಕೊಂಡಿದ್ದು ಉಪೇಂದ್ರ. ಈ ಸಿನಿಮಾ ಮೈಕಲ್‌ ಅವರಿಗೆ ಒಳ್ಳೆಯ ಹೆಸರು ಕೊಡುವ ಜತೆಗೆ ಅವರ ನಟನೆಯ ಪಯಣದಲ್ಲಿ ಬಂಗಾರದ ದಿನಗಳನ್ನು ಕಾಣುವಂತಾಯಿತು.

5. ಉಪೇಂದ್ರ ಹಾಗೂ ಮೈಕಲ್‌ ಮಧು ಒಂದೇ ಏರಿಯಾದಲ್ಲಿದ್ದವರು. ಇಬ್ಬರು ಫ್ಯಾಮಿಲಿ ಸ್ನೇಹಿತರು. ಮುಂದೆ ಉಪ್ಪಿ ಅವರೇ ಅಜಗಜಾಂತರ ಚಿತ್ರಕ್ಕೆ ಅಸೋಸಿಯೇಟ್‌ ಆಗಿ ಕೆಲಸ ಮಾಡುವಾಗ ಈ ಚಿತ್ರದಲ್ಲಿ ಬರುವ ಮದುವೆ ಗಂಡಿನ ಪಾತ್ರಕ್ಕೆ ಮೈಕಲ್‌ ಅವರೇ ಬೇಕು ಎಂದಿದ್ದು ಉಪ್ಪಿ. ಆದರೆ, ಡ್ಯಾನ್ಸ್‌ ನಲ್ಲಿ ಬ್ಯುಸಿ ಇದ್ದ ಮೈಕಲ್‌, ಆ ಪಾತ್ರಕ್ಕೆ ಕೈ ಕೊಟ್ಟಾಗ, ಅನಿವಾರ್ಯವಾಗಿ ಉಪೇಂದ್ರ ಅವರು ಈ ಚಿತ್ರದಲ್ಲಿ ಮದುವೆ ಗಂಡಿನ ಪಾತ್ರ ಮಾಡಬೇಕಾಯಿತು.

6. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಮೈಕಲ್‌ ಅವರಿಗೆ ಇದ್ದ ಒಂದೇ ಒಂದು ಆಸೆ ಎಂದರೆ ಡಾ ರಾಜ್‌ ಕುಮಾರ್‌ ಅವರ ಚಿತ್ರದಲ್ಲಿ ಒಂದು ಪಾತ್ರ ಮಾಡಬೇಕು ಎಂಬುದು. ರಾಜ್‌ ಅವರ ಹೆಸರು ಹೇಳುವುದಕ್ಕೂ ಭಯ ಪಡುತ್ತಿದ್ದರು, ರಾಜ್‌ ಹೆಸರು ಬಂದಾಗ ದೊಡ್ಡವರು, ಅಣ್ಣಾವ್ರು ಅಂತಲೇ ಕರೆಯುತ್ತಿದ್ದ ರಾಜ್‌ ಅವರ ಮಹಾನ್‌ ಆರಾಧಕ ಮೈಕಲ್‌ ಮಧು.

7. ತಾನು ಚಿತ್ರಕ್ಕೆ ಕೊರಿಯೋಗ್ರಾಫರ್‌ ಆಗಬೇಕೆಂಬ ಆಸೆ ಈಡೇರಿದ್ದು ಸಿಲ್‌್ಕ ಸ್ಮಿತಾ ಚಿತ್ರಕ್ಕೆ. ಸಾಯಿ ಪ್ರಕಾಶ್‌ ನಿರ್ದೇಶನದ ಈ ಚಿತ್ರದಲ್ಲಿ ಮೈಕಲ್‌ ಅವರನ್ನು ಆರಂಭದಲ್ಲಿ ತಿರಸ್ಕಾರದಿಂದ ನೋಡಿ, ನಂತರ ಅವರು ಮಾಡಿದ ಡ್ಯಾನ್ಸ್‌ಗೆ ಫಿದಾ ಆಗಿ ನೀವು ಚೆನ್ನೈಗೆ ಬನ್ನಿ, ನಮ್ಮ ಮನೆಯಲ್ಲಿ ಉಳಿದುಕೊಳ್ಳಿ. ಅಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತವೆ ಎಂದು ಮೈಕಲ್‌ ಮಧು ಅವರಿಗೆ ಅಫರ್‌ ಕೊಟ್ಟಿದ್ದು ಸ್ವತಃ ನಟಿ ಸಿಲ್‌್ಕ ಸ್ಮಿತಾ ಅವರು.

8. ಮೈಕಲ್‌ ಮಧು ಎಲ್ಲೇ ಸಾರ್ವಜನಿಕ ಕಾರ್ಯಮ ನೀಡಲು ಹೋದರು, ಸೂರ್ಯವಂಶ, ಯಜಮಾನ ಚಿತ್ರಗಳಲ್ಲಿನ ಅವರ ಕನ್‌ಸ್ಯೂಜ್‌ ಡೈಲಾಗ್‌ ಹೇಳುವಂತೆ ಜನ ಒತ್ತಾಯ ಮಾಡುತ್ತಿದ್ದರು. ಆ ಮಟ್ಟಿಗೆ ಅವರ ಡೈಲಾಗ್‌ ಫೇಮಸ್‌ ಈಗಿತ್ತು.

ಬಬ್ರುವಾಹನ ಛಾಯಾಗ್ರಾಹಕ ಎಸ್ .ವಿ ಶ್ರೀಕಾಂತ್ ನಿಧನ

9. ಡಾ. ರಾಜ್‌ಕುಮಾರ್‌ ಅವರ ಹೊರತಾಗಿ ಕನ್ನಡದ ಎಲ್ಲ ಸ್ಟಾರ್‌ಗಳ ಜತೆ ನಟನೆ ಮಾಡಿರುವ ಅಪರೂಪದ ಪೋಷಕ ಕಲಾವಿದ.

10. ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆ ಆಗಿ ಇತ್ತೀಚೆಗೆ ಹಾಸ್ಯ ಕಾರ್ಯಕ್ರಮಗಳನ್ನು ಮಾಡಿಕೊಡುತ್ತಿದ್ದರು. ಆ ಮೂಲಕ ಜೀವನ ನಡೆಸುತ್ತಿದ್ದರು.