ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಸ್ಮಾರಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. 

ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಿರುವ ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ (ಮಾರ್ಚ್ 28) ಅನಾವರಣಗೊಳಿಸಿದರು. ಕಂಠೀರವ ಸ್ಟುಡಿಯೋದಲ್ಲಿ 1 ಎಕರೆ 37 ಗುಂಟೆ ಜಾಗದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ವಿಶೇಷ ವಿನ್ಯಾಸದಲ್ಲಿ ಅಂಬಿ ಸ್ಮಾರಕ ನಿರ್ಮಾಣವಾಗಿದೆ. ಸ್ಮಾರಕ ಬಳಿ ಅಂಬಿ ಬೃಹತ್ ಪುತ್ಥಳಿ ಕೂಡ ಉದ್ಘಾಟನೆ ಆಗಿದೆ. 32 ಅಡಿ ಎತ್ತರದ 3ಟನ್ ತೂಕದ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗಿದೆ. 

1 ಎಕರೆ 37 ಗುಂಟೆ ಎಕರೆ ಜಾಗದಲ್ಲಿ ಅಂಬರೀಶ್ ಅವವರ ಸ್ಮಾರಕ ಜೊತೆಗೆ ಅಂಪಿಥಿಯೇಟರ್, ಮ್ಯೂಸಿಯಂ ನಿರ್ಮಾಣ ಮಾಡಲು ತಯಾರಿ ನಡೆಯುತ್ತಿದೆ. ಮೈಸೂರು ಪೇಟ, ಪಂಚೆ, ಜುಬ್ಬಾ, ಶಲ್ಯ ಲುಕ್ ನಲ್ಲಿ ಅಂಬಿ ಸ್ಮಾರಕ ನಿರ್ಮಾಣವಾಗಿದೆ. ಸಮಾಧಿ ಸ್ಥಳದಕ್ಕೆ 43 ಅಡಿ ಎತ್ತರದ ನಮಸ್ತೆ ಆಕಾರದ ರಚನೆ ವಿಶೇಷವಾಗಿದೆ. ಸಮಾಧಿ ನಾಲ್ಕು ಕಡೆಯಿಂದ A ಎಂಬುದನ್ನು ತೋರಿಸುವಂತಿದೆ. ಸ್ಮಾರಕ ಅನಾವರಣ ವೇಳೆ ಸಿಎಂ ಬೊಮ್ಮಾಯಿ ಜೊತೆ ಸುಮಲತಾ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಸದಾನಂದ ಗೌಡ ಸೇರಿದಂತೆ ಅನೇಕರು ಹಾಜರಿದ್ದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. 12 ಕೋಟಿ ರೂಪಾಯಿ ಅನುದಾನದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣಗೊಂಡಿದೆ. ಸ್ಮಾರಕ ಅನಾವರಣ ಆಗುತ್ತಿದ್ದಂತೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡಿ ಅಂಬರೀಶ್ ಸ್ಮಾರಕದ ದರ್ಶನ ಪಡೆಯುತ್ತಿದ್ದಾರೆ. 

ಸ್ಮಾರಕ ಅನಾವರಣ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶೀಘ್ರದಲ್ಲಿಯೇ ಮ್ಯೂಸಿಯಂ ಕೂಡ ಪೂರ್ತಿಯಾಗಲಿದೆ. ಅಂಬರೀಶ್ ಅಂದರೆ ಒಂದು ಶಕ್ತಿ. ಅವರ ವ್ಯಕ್ತಿತ್ವದಲ್ಲೇ ಆ ಶಕ್ತಿ ಇತ್ತು. ಅಂಬರೀಶ್ ಎಲ್ಲಿಯೇ ಹೋದರೂ ಸಂತೋಷ ಇರುತ್ತಿತ್ತು. ಗಂಭೀರ ಚರ್ಚೆ ಸಮಯದಲ್ಲೂ ಅಂಬರೀಶ್ ಬಂದರೆ ಸಮಸ್ಯೆಗೆ ಪರಿಹಾರ ಸಿಗುತ್ತೆ ಅನ್ನೋ ಸಂತೋಷ ಇರುತ್ತಿತ್ತು ಎಂದು ಹೇಳಿದರು. ಬಳಿಕ ಸುಮಲತಾ ಅಂಬರೀಶ್ ಮಾತನಾಡಿ, ಮಂಡ್ಯದಲ್ಲಿ ಅಂಬರೀಷ್​ ಮಾಡಿದ ಕೆಲಸಗಳ ಬಗ್ಗೆ ನೆನಪಿಸಿಕೊಂಡರು. ಮಾತನಾಡುವಾಗ ಸುಮಲತಾ ಭಾವುಕರಾದರು, ವೇದಿಕೆಯಲ್ಲೇ ಕಣ್ಣೀರು ಹಾಕಿದರು. 

ನನಗೆ ಆದೇಶ ಮಾಡೋ ಅಧಿಕಾರ ಅಂಬರೀಶ್‌ಗಷ್ಟೇ: ಸಂಸದೆ ಸುಮಲತಾ

ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು 

ಬೆಂಗಳೂರಿನ ಹೃದಯಭಾಗದಲ್ಲಿ ಇರುವ ರೇಸ್​ ಕೋರ್ಸ್​ ರಸ್ತೆಗೆ ರೆಬೆಲ್​ ಸ್ಟಾರ್​ ಅಂಬರೀಷ್​ ಅವರ ಹೆಸರಿಡಲಾಗಿದೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಸ್ಮಾರಕ ಅನಾವರಣ ದಿನವೇ (ಮಾರ್ಚ್​ 27) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ರೆಬೆಲ್​ ಸ್ಟಾರ್ ಡಾ. ಎಮ್​.ಎಚ್​. ಅಂಬರೀಷ್​ ರಸ್ತೆ’ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮಕ್ಕೆ ಅಂಬಿ ಕುಟುಂಬದ ಸದಸ್ಯರು ಸೇರಿದಂತೆ ಕನ್ನಡ ಚಿತ್ರರಂಗ ಅನೇಕ ಗಣ್ಯರು ಸಾಕ್ಷಿಯಾಗಿದ್ದಾರೆ. 

ಸುಮಲತಾ ಬೆಂಬಲದಿಂದ ಮಂಡ್ಯದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ: ಸಿಎಂ ಬೊಮ್ಮಾಯಿ

ರಸ್ತೆ ಉದ್ಘಾಟನೆ ಮಾಡಿ ಮಾತನಾಡಿದ ಬೊಮ್ಮಾಯಿ, ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಅವರ ಹೆಸರು ಯಾಕೆ ಸೂಕ್ತ ಎಂಬುದನ್ನು ಬಸವರಾಜ ಬೊಮ್ಮಾಯಿ ವಿವರಿಸಿದ್ದಾರೆ. ‘ಅಂಬರೀಷ್​ ಅವರದ್ದು ನೇರ ನಡೆ-ನುಡಿಯ ವ್ಯಕ್ತಿತ್ವ ಆಗಿತ್ತು. ಅವರ ನೆನಪಿಗಾಗಿ ಇಂದು ರೇಸ್​ ಕೋರ್ಸ್​ ರಸ್ತೆಗೆ ಅವರ ಹೆಸರು ಇಡಲಾಗಿದೆ. ಇದು ನನಗೆ ಅತ್ಯಂತ ಸಂತೋಷ ತಂದಿದೆ. ಇಲ್ಲಿ ಫಿಲ್ಮ್​ ಚೇಂಬರ್​ ಇದೆ. ಹತ್ತಿರದಲ್ಲೇ ಗಾಂಧಿ ನಗರ ಇದೆ. ಇದು ಅಂಬರೀಷ್​ ಅವರ ಕಾರ್ಯಕ್ಷೇತ್ರವಾಗಿದ್ದ ಜಾಗ. ಹಾಗಾಗಿ ಅವರ ಹೆಸರು ಅತ್ಯಂತ ಸೂಕ್ತ. ಅವರ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಈ ಹೆಸರು ಇಟ್ಟಿದ್ದೇವೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.