ನಟಿ ಹಾಗೂ ನಿರ್ಮಾಪಕಿ ಆಗಿರುವ ರಾಧಿಕಾ ಕುಮಾರಸ್ವಾಮಿ ವಂಚಕ ಯುವರಾಜ್‌ ಸ್ವಾಮೀಜಿ ವಿಚಾರದಿಂದ ಒಂದಾದ ಮೇಲೊಂದು ಸಂಕಷ್ಟ ಎದುರಾಗುತ್ತಿದೆ. ತಮ್ಮ ಮೇಲಿದ್ದ ಆರೋಪದ ಬಗ್ಗೆ ಸ್ಪಷ್ಟನೆ ನೀಡಲು ಮಾಡಿದ ಪ್ರೆಸ್‌ಮೀಟೇ ರಾಧಿಕಾಗೆ ಮುಳುವಾಯಿತು ಎಂದು ಹೇಳಲಾಗುತ್ತಿದೆ. ವಿಚಾರಣೆಗ ಹಾಜರು ಆಗಿರುವ ರಾಧಿಕಾ ಅಧಿಕಾರಿಗಳು ಹೇಳಿದ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ ಮೊಬೈಲ್ ಸೀಜ್ ಮಾಡಲಿದ್ದಾರೆ. 

ಪ್ರಭಾವಿ ರಾಜಕಾರಣಿ ಜತೆ ರಾಧಿಕಾ ಕುಮಾರಸ್ವಾಮಿ ನಂಟು...? 

ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಹಿಡಿದು ಯುವರಾಜ್‌ ಬಂಧನವರೆಗೂ ಸಿಸಿಬಿ ಅಧಿಕಾರಿಗಳು ರಾಧಿಕಾರಿಗೆ ಕೇಳ ಬಹುದಾದ ಪ್ರಶ್ನೆಗಳನ್ನು ಸಿದ್ಧ ಪಡಿಸಿಕೊಂಡಿದ್ದಾರೆ. ವಾಟ್ಸಪ್‌ ಮೂಲಕ ನೋಟಿಸ್ ಪಡೆದಿರುವ ರಾಧಿಕಾ ನಿನ್ನೆ ರಾತ್ರಿಯೇ ವಕೀಲರನ್ನು ಸಂಪರ್ಕಿಸಿ ವಿಚಾರಣೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ವಿಚಾರಣೆಯಲ್ಲಿ ಪ್ರಮುಖವಾಗಿ ಯುವರಾಜ್ ಹಾಗೂ ರಾಧಿಕಾ ನಡುವಿನ ಸಂಬಂಧದ ಕುರಿತಾಗಿ ವಿಚಾರಣೆ ಮಾಡಲಾಗುತ್ತದೆ ಎಂದಿದ್ದಾರೆ. ಇದರ ಜೊತೆಗೆ ರಾಧಿಕಾ ಕುಮಾರಸ್ವಾಮಿ ಮೊಬೈಲ್ ವಶಕ್ಕೆ ಪಡೆದು ಅವರಿಬ್ಬರ ನಡುವೆ ನಡೆದಿರುವ ಮೆಸೇಜ್, ಕಾಲ್ ಡೀಟೆಲ್ಸ್, ಆಡಿಯೋ‌ ಕ್ಲಿಪ್ ಮಾಹಿತಿ ಪಡೆಯಲಿದ್ದಾರೆ.  ಮೊಬೈಲ್‌ ಪರಿಶೀಲನೆ ನಂತರವೂ ಯಾವ ಸೂಕ್ತ ದಾಖಲೆ ಸಿಗದಿದ್ದರೆ,  ಮೊಬೈಲ್  ಸೀಜ್ ಆಗೋ ಸಾಧ್ಯತೆ ಇದೆ ಎಂದಿದ್ದಾರೆ.

ಅಷ್ಟಕ್ಕೂ ರಾಧಿಕಾ ಖಾತೆಗೆ ಅಷ್ಟೊಂದು ಹಣ ಬಂದಿದ್ದು ಎಲ್ಲಿಂದ? 

ರಾಧಿಕಾ ಹೇಳಿಕೆ:
ಸಿನಿಮಾ ನಿರ್ಮಿಸುವ ಸಲುವಾಗಿ ಯುವರಾಜ್‌ನಿಂದ 75 ಲಕ್ಷ ಪಡೆದುಕೊಂಡಿರುವ ವಿಚಾರದ ಬಗ್ಗೆ ರಾಧಿಕಾ ಮಾಹಿತಿ ನೀಡಿದ ನಂತರವೇ ಅಧಿಕಾರಿಗಳು ವಿಚಾರಣೆಗೆ ನೋಟಿಸ್‌ ನೀಡಿದ್ದರು.  ಹಣಕಾಸು ವ್ಯವಹಾರ ಒಪ್ಪಿಕೊಂಡ ಕಾರಣ ಸೂಕ್ತ ದಾಖಲೆಗಳನ್ನು ಒದಗಿಸಿ ವಿಚಾರಣೆಗೆ ಹಾಜರು ಆಗುವಂತೆ ಹೇಳಲಾಗಿತ್ತು.

"

ರಾಧಿಕಾಗೆ ಆಗಿದ್ಯಾ ಮದ್ವೆ? 
ರಾಧಿಕಾ ವಿಚಾರಣೆ ನಡೆಸಲು ಸಿಸಿಬಿ ಕೆಲವು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿವೆ. ಅವುಗಳಲ್ಲಿ ಕೆಳಗಿನವು ಕೆಲವು..
- ಮ್ಮ ಹೆಸರಿನ‌ ಗುರುತಿನ ಚೀಟಿ ನೀಡಿ..? ಆಧಾರ್ ಕಾರ್ಡ್ ಏನಾದ್ರೂ ತಂದಿದ್ದೀರಾ..?
- ನೀವು ಬೆಂಗಳೂರಲ್ಲಿ ಎಲ್ಲಿ ವಾಸವಾಗಿದ್ದೀರಿ..? 
- ನಿಮ್ಮ‌ಆದಾಯದ ಮೂಲವೇನು? ಏನು ಕೆಲಸ ಮಾಡಿಕೊಂಡಿದ್ದೀರಿ?
- ನೀವು ವಿವಾಹಿತರೇ..? ಅವಿವಾಹಿತರೇ..?
- ಸಿನಿಮಾ ಕ್ಷೇತ್ರದಲ್ಲಿ ಎಷ್ಟು ವರ್ಷದಿಂದ ಇದ್ದೀರಿ..?
- ಒಂದು ಸಿನಿಮಾಗೆ ಎಷ್ಟು ಸಂಭಾವನೆ..?
- ಯುವರಾಜ್ ಪರಿಚಯ, ಹಣ ನೀಡಿದ್ದರು ಎಂದು ಮಾಧ್ಯಮಗಳ ಮುಂದೆ ಹೇಳಿದ್ದೀರಿ. ಎಷ್ಟು ವರ್ಷದಿಂದ ಯುವರಾಜ್ ಪರಿಚಯ?
- ಆತನೊಂದು ವ್ಯವಹಾರಿಕ ಸಂಬಂಧ ಏನು?
- ಕೇವಲ ಸಿನಿಮಾ ವ್ಯವಹಾರ  ಮಾತ್ರ ಇತ್ತಾ..?

ಸಿಆರ್ ಪಿಸಿ 91 ಅಡಿಯಲ್ಲಿ ನೋಟಿಸ್ ಪಡೆದಿರುವ ರಾಧಿಕಾ ಭವಿಷ್ಯಾ ಇಂದು ವಿಚಾರಣೆ ಬಳಿಕ ನಿರ್ಧಾರವಾಗುತ್ತದೆ.