'ಊಟ ಇಲ್ಲ ಹೋಗು' ಅಂತ ತಳ್ಳಿದಾಗ ಉಪೇಂದ್ರ ಏನ್ ಮಾಡಿದ್ರು, ಬಳಿಕ ಏನಾಯ್ತು?
ಹೀರೋ ಆಗಬೇಕು, ದೊಡ್ಡ ಸ್ಟಾರ್ ಆಗ್ಬೇಕು ಅಂತ ಕನಸು ಕಂಡವರಲ್ಲಿ ನಟ-ನಿರ್ದೇಶಕ ಉಪೇಂದ್ರ ಕೂಡ ಒಬ್ಬರು. ಆದರೆ, ಬಂದ ಶುರುವಿನಲ್ಲಿ ಈ ಸಿನಿಮಾ ಉದ್ಯಮದಲ್ಲಿ ಅವರು ಕೂಡ ಬಹಳಷ್ಟು ಜನರಂತೆ ಇಲ್ಲಿ ಹೀಯಾಳಿಕೆ, ಕಿಂಡಲ್, ಟೀಕೆ ಹಾಗೂ ಅವಮಾನ...
ಸಿನಿಮಾರಂಗದಲ್ಲಿ ತಾವು ಹೀರೋ ಆಗಬೇಕು, ದೊಡ್ಡ ಸ್ಟಾರ್ ಆಗ್ಬೇಕು ಅಂತ ಕನಸು ಕಂಡವರಲ್ಲಿ ಈಗ ರಿಯಲ್ ಸ್ಟಾರ್ ಆಗಿರುವ ನಟ-ನಿರ್ದೇಶಕ ಉಪೇಂದ್ರ (Real Star Upendra) ಕೂಡ ಒಬ್ಬರು. ಆದರೆ, ಬಂದ ಶುರುವಿನಲ್ಲಿ ಈ ಸಿನಿಮಾ ಉದ್ಯಮದಲ್ಲಿ ಅವರು ಕೂಡ ಬಹಳಷ್ಟು ಜನರಂತೆ ಇಲ್ಲಿ ಹೀಯಾಳಿಕೆ, ಕಿಂಡಲ್, ಟೀಕೆ ಹಾಗೂ ಅವಮಾನ ಎಲ್ಲದರಿಂದಲೂ ಭಾದೆ ಪಟ್ಟಿದ್ದಾರೆ. ಹಲವರಂತೆ ನಟ ಉಪೇಂದ್ರ ಕೂಡ ಸಿನಿಮಾ ಇಂಡಸ್ಟ್ರಿಗೆ ಬಂದ ಹೊಸದರಲ್ಲಿ ಸಾಕಷ್ಟು ನೋವುಂಡಿದ್ದಾರೆ.
ಈ ಬಗ್ಗೆ ಒಮ್ಮೆ ಮಾತನಾಡಿರುವ ಉಪೇಂದ್ರ ಅವರು 'ನಾನು ಸಹಾಯಕ ನಿರ್ದೇಶಕನಾಗಿದ್ದ ಸಮಯದಲ್ಲಿ ಬಹಳಷ್ಟು ಬಾರಿ ಅವಮಾನಗಳನ್ನು ಅನುಭವಿಸಿದ್ದೇನೆ. ಶೂಟಿಂಗ್ ಬ್ರೇಕ್ ಮಧ್ಯೆ ಊಟಕ್ಕೆ ಅಂತ ತಟ್ಟೆ ಹಿಡಿದು ನಿಂತಾಗ, ಪ್ರೊಡಕ್ಷನ್ ಪರ್ಸನ್ ಊಟ ಇಲ್ಲ ಹೋಗು ಅಂತ ಪಕ್ಕಕ್ಕೆ ತಳ್ಳಿದ್ದ.. ಅಂದು ನನಗೆ ಊಟವೇ ಇರಲಿಲ್ಲ. ಆದರೆ, ನಾನು ಮುಂದೆ ಬೆಳೆದು ನಟ-ನಿರ್ದೇಶಕ ಆದಾಗ ಅದೇ ವ್ಯಕ್ತಿ ನನ್ನ ಮುಂದೆ ಬಂದು ನಿಂತಿದ್ದ. ಆದರೆ ನಾನು ದ್ವೇಷ ಸಾಧಿಸಲಿಲ್ಲ..' ಎಂದಿದ್ದಾರೆ.
ಸಮಂತಾಗೆ ಕಾಳು ಹಾಕ್ತಿದಾರಾ ಅರ್ಜುನ್ ಕಪೂರ್; ಸಿಂಗಲ್ಲಾಗಿರೋ ಇಬ್ರೂ ಮಿಂಗಲ್ ಆಗ್ತಾರಾ?
ಹೇಳುತ್ತಾ ಹೋದರೆ ಅದೇ ಒಂದು ಸಿನಿಮಾ ಆಗುವಷ್ಟು ಕಥೆಗಳು ಉಪೇಂದ್ರ ಸೇರಿದಂತೆ ಎಲ್ಲಾ ಸಿನಿಮಾತಾರೆಗಳ ಬದುಕಿನಲ್ಲಿ ಆಗಿವೆ. ಆದರೆ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮುನ್ನುಗ್ಗಿದವರು ಮಾತ್ರ ಉಪೇಂದ್ರ ಅವರು ಸಾಧಿಸಿದಂತೆ ಬೆಳೆದು ನಿಂತಿದ್ದಾರೆ. ಕೇವಲ ಕನ್ನಡ ಅಲ್ಲ, ಪಕ್ಕದ ಸಿನಿಮಾ ಉದ್ಯಮದಲ್ಲೂ ಉಪೇಂದ್ರ ಅವರು ಹೆಸರು ಭಾರೀ ಖ್ಯಾತಿ ಪಡೆದಿದೆ. ಇಂದು ಉಪೇಂದ್ರ ಅವರು ನಟ ಹಾಗೂ ನಿರ್ದೇಶಕರಾಗಿ ಆಗಸದೆತ್ತರಕ್ಕೆ ಬೆಳೆದಿದ್ದಾರೆ.
ಉಪೇಂದ್ರ ಅವರು ನಿರ್ದೇಶಕರಾಗಿ ಮಾಡಿದ ಓಂ ಸಿನಿಮಾ 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್'ಗೆ ಸೇರಿದೆ. ಅವರ ನಟನೆ ಹಾಗು ನಿರ್ದೇಶನದ ಎ, ಉಪೇಂದ್ರ ಸೇರಿದಂತೆ ಹಲವು ಚಿತ್ರಗಳು ಹೊಸ ದಾಖಲೆ ಬರೆದಿವೆ. ಮುಂಬರುವ ಉಪೆಂದ್ರರ ನಟನೆ ಹಾಗೂ ನಿರ್ದೇಶನದ 'ಯು/ಐ' ಚಿತ್ರವು ಭಾರೀ ನಿರೀಕ್ಷೆ ಹುಟ್ಟಿಸಿದ್ದು, 20 ಡಿಸೆಂಬರ್ 2024 ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರವು ಸೂಪರ್ ಹಿಟ್ ಆಗುವ ಎಲ್ಲಾ ನಿರೀಕ್ಷೆಯಿದೆ.
ಅತಿಲೋಕ ಸುಂದರಿ ಜೊತೆ ಚಿರಂಜೀವಿ ಡಾನ್ಸ್ ಮಾಡುವಾಗ ಡಾಕ್ಟರ್-ನರ್ಸ್ ಅಲ್ಲಿದ್ರು ಯಾಕೆ?
ಉಪೇಂದ್ರ ಅವರು ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾ ಉದ್ಯಮದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಎಸ್‌ಎಸ್ ರಾಜಮೌಳಿ ಅವರಂಥಹ ಸ್ಟಾರ್ ನಿರ್ದೇಶಕರುಗಳು ಕೂಡ ಉಪೇಂದ್ರ ನಿರ್ದೇಶನದ ಚಿತ್ರಗಳನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ. ಸ್ವತಃ ತಮಿಳು ಗ್ರೇಟ್ ಡೈರೆಕ್ಟರ್ ಶಂಕರ್ ಅವರು ಉಪೇಂದ್ರ ಅವರ ನಿರ್ದೇಶನದ ಸಿನಿಮಾ ನೋಡಿ ಬೆನ್ನು ತಟ್ಟಿದ್ದಾರೆ. ಮುಂಬರುವ ಯುಐ ಸಿನಿಮಾ ಬಗ್ಗೆಯಂತೂ ಬೆಟ್ಟದಷ್ಟು ನಿರೀಕ್ಷೆಯಿದೆ.