Asianet Suvarna News Asianet Suvarna News

Kabzaa Teaser; ಅದ್ದೂರಿಯಾಗಿ ಎಂಟ್ರಿ ಕೊಟ್ಟ ಉಪೇಂದ್ರ-ಸುದೀಪ್, ಹೇಗಿದೆ ನೋಡಿ ಟೀಸರ್?

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾದ ಟೀಸರ್ ಅದ್ದೂರಿಯಾಗಿ ರಿಲೀಸ್ ಆಗಿದೆ. ರಿಯಲ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಬಂದ ಕಬ್ಜ ಟೀಸರ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. 

real star upendra starrer kabzaa movie teaser released sgk
Author
First Published Sep 17, 2022, 5:20 PM IST

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾದ ಟೀಸರ್ ಅದ್ದೂರಿಯಾಗಿ ರಿಲೀಸ್ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಬಂದ ಕಬ್ಜ ಟೀಸರ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಬ್ಜ ಸಿನಿಮಾದ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಸಿನಿಮಾದ ಪೋಸ್ಟರ್ ಬಿಟ್ಟರೆ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ಕೊನೆಗೂ ರಿಯಲ್ ಸ್ಟಾರ್ ಕಬ್ಜ ದರ್ಶನ ಆಗಿದೆ. ಇಂದು (ಸೆಪ್ಟಂಬರ್ 17) ಸಂಜೆ ಓರಾಯನ್ ಮಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಕಬ್ಜ ಟೀಸರ್ ರಿಲೀಸ್ ಆಗಿದೆ. 

ಆರ್ ಚಂದ್ರು ಸಾರಥ್ಯದಲ್ಲಿ ಮೂಡಿ ಬಂದಿರುವ ಕಬ್ಜ ಟೀಸರ್ ಅದ್ದೂರಾಗಿ ಮೂಡಿಬಂದಿದೆ. ಅದ್ದೂರಿ ಮೇಕಿಂಗ್, ಬ್ಯಾಗ್ರೌಂಡ್ ಸ್ಕೋರ್, ರೆಟ್ರೋ ಶೈಲಿಯ ಟೀಸರ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 2 ನಿಮಿಷದ ಟೀಸರ್‌ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಸುದೀಪ್ ಮತ್ತು ಶ್ರಿಯಾ ಶರಣ್ ದರ್ಶನ ಕೂಡ ಆಗಿದೆ. ಡಾರ್ಕ್ ಶೇಡ್‌ನಲ್ಲಿ ಕಬ್ಜ ಸಿನಿಮಾ ಮೂಡಿಬಂದಿದೆ ಎನ್ನುವುದು ಟೀಸರ್ ನೋಡಿದ್ರೆ ಗೊತ್ತಾಗುತ್ತಿದೆ. ಅಂದಹಾಗೆ ಈ ಟೀಸರ್ ನಲ್ಲಿ ಯಾವುದೇ ಡೈಲಾಗ್ ಇಲ್ಲ, ರಿಯಲ್ ಸ್ಟಾರ್ ಆಗಲಿ ಅಥವಾ ಸುದೀಪ್ ಆಗಲಿ ಆಕ್ಷನ್‌ನಲ್ಲೆ ಹವಾ ಎಬ್ಬಿಸಿದ್ದಾರೆ. 

ಅಂದಹಾಗೆ ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಕೂಡ ನಟಿಸುತ್ತಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್​ ಅಭಿನಯಿಸುತ್ತಿದ್ದಾರೆ. ಅದ್ದೂರಿಯಾಗಿ ನಡೆದ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಟಾಲಿವುಡ್‌ ಸ್ಟಾರ್ ರಾಣಾ ದಗ್ಗುಬಾಟಿ ವಿಶೇಷ ಅತಿಥಿಯಾಗಿ ಹಾಜರಾಗಿದ್ದರು. ಅಂದಹಾಗೆ ರಾಣಾ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. 

ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಬಂಪರ್ ಬಹುಮಾನ ಗೆಲ್ಲಿ

ಅಂದಹಾಗೆ ಸೆಪ್ಟಂಬರ್ 18 ರಿಯಲ್ ಸ್ಟಾರ ಉಪೇಂದ್ರ ಅವರ ಹುಟ್ಟುಹಬ್ಬ. ಜನ್ಮದಿನದ ಒಂದು ದಿನಕ್ಕೂ ಮೊದಲೇ ಬಹುನಿರೀಕ್ಷೆಯ ಸಿನಿಮಾದ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ಮಾಡಲಾಗುತ್ತಿದೆ. ಪೋಸ್ಟರ್ ಗಳು ಬಿಟ್ಟರೆ ಸಿನಿಮಾದಿಂದ ಬೇರೆ ಯಾವುದೇ ಮಾಹಿತಿ ಬಹಿರಂಗವಾಗಿರಲಿಲ್ಲ. ಇದೀಗ ಮೊದಲ ಹಂತವಾಗಿ ಟೀಸರ್ ಬಡುಗಡೆ ಮಾಡಲಾಗಿದೆ. ರೆಟ್ರೋ ಶೈಲಿಯಲ್ಲಿ ಮೂಡಿಬಂದಿರುವ ಈ ಸಿನಿಮಾದ ಪೋಸ್ಟರ್ ಗಳು ಈಗಾಗಲೇ ವೈರಲ್ ಆಗಿವೆ. ಇದೀಗ ಟೀಸರ್ ಕೂಡ ಸದ್ದು ಮಾಡುತ್ತಿದೆ

.

ಕಬ್ಜ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬರ್ತಿರುವ ಸಿನಿಮಾ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಕೂಡ ಈ ಸಿನಿಮಾ ಬಿಡುಗಡೆ ಆಗಲಿದೆ. ಉಪೇಂದ್ರ ಮತ್ತು ಕಿಚ್ಚ ಸುದೀಪ್​ ಈಗಾಲೆ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗಾಗಲೇ ಮೇಕಿಂಗ್ ಮೂಲಕ ಸದ್ದು ಮಾಡುತ್ತಿದ್ದ ಕಬ್ಜ ಟೀಸರ್ ಹೇಗಿರಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

Follow Us:
Download App:
  • android
  • ios