Asianet Suvarna News Asianet Suvarna News

Upendra: ನಾನು ಆರಾಮಾಗಿದ್ದೀನಿ, ಶೂಟಿಂಗ್‌ ಮುಂದುವರೆಸಿದ್ದೀವಿ; ವಿಡಿಯೋ ಮೂಲಕ ಉಪೇಂದ್ರ ಪ್ರತಿಕ್ರಿಯೆ

ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆದ ಬೆನ್ನಲ್ಲೇ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಮೂಲಕ ರಿಯಲ್ ಸ್ಟಾರ್ ಸ್ಪಷ್ಟನೆ ನೀಡಿದ್ದಾರೆ.

real star Upendra reaction after health issue viral sgk
Author
First Published Nov 24, 2022, 3:11 PM IST

ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆದ ಬೆನ್ನಲ್ಲೇ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಮೂಲಕ ರಿಯಲ್ ಸ್ಟಾರ್ ಸ್ಪಷ್ಟನೆ ನೀಡಿದ್ದಾರೆ. ಚಿತ್ರೀಕರಣ ಸೆಟ್ ನಿಂದನೇ ಪ್ರತಿಕ್ರಿಯೆ ನೀಡಿರುವ ಉಪೇಂದ್ರ, 'ನಾನು ಆರೋಗ್ಯವಾಗಿ ಇದ್ದೀನಿ, ಏನು ಆಗಿಲ್ಲ' ಎಂದಿದ್ದಾರೆ. ಉಪೇಂದ್ರ ಸದ್ಯ ಯುಐ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೋಹನ್ ಬಿ ಕೆರೆ ಸ್ಟೂಡಿಯೋದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಅಲ್ಲಿಂದನೆ ಮಾತನಾಡಿದ ಉಪೇಂದ್ರ, ' ನಾವು ಮೋಹನ್ ಬಿ ಕೆರೆ ಸ್ಟೋಡಿಯೋದಲ್ಲಿ ಇದ್ದೀವಿ. ಆರಾಮಾಗಿ ಇದ್ದೀನಿ. ಇಲ್ಲಿ ಡಸ್ಟ್ ಜಾಸ್ತಿ ಇತ್ತು. ಹಾಗಾಗಿ ಸ್ವಲ್ಪ ಕಷ್ಟವಾಗಿತ್ತು. ಏನು ಆಗಿಲ್ಲ. ಶೂಟಿಂಗ್ ಮುಂದುವರೆಸಿದ್ದೀವಿ. ಎಲ್ಲರೂ ಇದ್ದಾರೆ ನೋಡಿ' ಎಂದು ಹೇಳಿದ್ದಾರೆ. 

ಅಂದಹಾಗೆ ಉಪೇಂದ್ರ ಯುಐ ಸಿನಿಮಾದ ಆಕ್ಷನ್ ದೃಶ್ಯಗಳ ಚಿತ್ರೀಕರಣ ಮಾಡುತ್ತಿದ್ದಾರೆ. ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಆಕ್ಷನ್ ದೃಶ್ಯದ ಚಿತ್ರೀಕರಣ ಮಾಡುತ್ತಿದ್ದಾರೆ. ಯುಐ ಸಿನಿಮಾ ಉಪೇಂದ್ರ ನಿರ್ದೇಶನ ಮಾಡಿ, ನಟಿಸುತ್ತಿರುವ ಸಿನಿಮಾ. ಈ ಸಿನಿಮಾಗೆ ನಿರ್ಮಾಪಕ ಕೆಪಿ ಶ್ರೀಕಾಂತ್ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕಲಾವಿದರ ದೊಡ್ಡ ದಂಡೇ ಇದೆ. ನಿಧಿ ಸುಬ್ಬಯ್ಯ, ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಸಂಬರ್ಗಿ, ನಿರ್ಮಾಪಕ ಉಮೇಶ್‌ ಬಣಕಾರ್‌, ನಿರ್ದೇಶಕ ಓಂ ಸಾಯಿಪ್ರಕಾಶ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. 

ಪ್ರಿಯಾಂಕಾ ಎಲ್ಲಿ ಉಗ್ರಾವತಾರ ತಾಳ್ತಾರೋ ಅಂತ ಭಯ: ಉಪೇಂದ್ರ

ಉಪೇಂದ್ರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ವೈರಲ್ ಆಗಿತ್ತು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಉಪೇಂದ್ರ ಅವರನ್ನು ತಕ್ಷಣ ಆಸ್ಪತ್ರೆಗೆ  ದಾಖಲಿಸಲಾಗಿದ್ದು ಬೆಂಗಳೂರಿನ ನೆಲಮಂಗಳ ಬಳಿ ಇರುವ ಹರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿತ್ತು. ಆದರೀಗ ಉಪೇಂದ್ರ ಅವರೆ ಸ್ಪಷ್ಟನೆ ನೀಡುವ ಮೂಲಕ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡರು. ಆತಂಕದಲ್ಲಿದ್ದ ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಮಾತು ಕೇಳಿ ನಿಟ್ಟುಸಿರು ಬಿಟ್ಟಿದ್ದಾರೆ.

Upendra; ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಉಪೇಂದ್ರ ಸದ್ಯ ಯುಐ ಸಿನಿಮಾ ಜೊತೆಗೆ ಕಜ್ಬ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಕಬ್ಜ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಉಪೇಂದ್ರ ಜೊತೆ ಬಹುಭಾಷ ನಟಿ ಶ್ರೀಯಾ ಶರಣ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಕಬ್ಜ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.  
 

Follow Us:
Download App:
  • android
  • ios