ಸ್ಯಾಂಡಲ್‌ವುಡ್‌ ಕ್ರಶ್‌, ನ್ಯಾಷನಲ್‌ ಕ್ವೀನ್‌ ರಶ್ಮಿಕಾ ಮಂದಣ್ಣ ಅಕ್ಕಪಕ್ಕದ ರಾಜ್ಯದ ಚಿತ್ರರಂಗದಲ್ಲಿ ಬ್ಯುಸಿಯಾದ ನಂತರ ಕನ್ನಡದ ನಟರನ್ನು ಮರೆತೇ ಬಿಟ್ಟಿದ್ದಾರೆ, ಎಂಬ ಆರೋಪವೂ ಕೇಳಿ ಬರುತ್ತಿದೆ. ಪೊಗರು ಸಿನಿಮಾ ಪ್ರಚಾರ ಮಾಡಿದ್ದು, ನಾವೆಲ್ಲರೂ ನೋಡಿದ್ದೀವಿ ಅಂದ ಮೇಲೆ ಯಾವ ಕಾರಣಕ್ಕೆ ದರ್ಶನ್‌ ಜೊತೆಗಿರುವ ಪೋಟೋ ಹಂಚಿ ಕೊಂಡರು? ಇಲ್ಲಿದೆ ನೋಡಿ

ರಶ್ಮಿಕಾ ನಿದ್ದೆ ಕೆಡಿಸಿದ ಜಿರಳೆ: ಕಿರಿಕ್ ಚೆಲುವೆ ಬಿಚ್ಚಿಟ್ರು ನಿದ್ದೆ ಇಲ್ಲದ ರಾತ್ರಿ ಕಥೆ 

ಹೌದು! 2019ರಲ್ಲಿ ರಶ್ಮಿಕಾ ಮಂದಣ್ಣ 'ಯಜಮಾನ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ದರ್ಶನ್‌ಗೆ ಯಾರೇ ಜೋಡಿಯಾಗಲಿ ಅವರ ನಸೀಬ್‌ ಬದಲಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಯಜಮಾನ ಚಿತ್ರದಲ್ಲಿ ಕಾವೇರಿ ಪಾತ್ರಕ್ಕೆ ಹೆಚ್ಚಿನ ಮಹತ್ವವಿತ್ತು. ಸಿನಿಮಾ ತಂಡದ ಜೊತೆಗಿರುವ ಫೋಟೋ ಹಾಗೂ ದರ್ಶನ್‌ ಜೊತೆ ಸೆಲ್ಫೀ ಈ ಎರಡೂ ಫೋಟೋಗಳನ್ನು ರಶ್ಮಿಕಾ ಅಪ್ಲೋಡ್ ಮಾಡಿದ್ದಾರೆ. 

ಕನ್ನಡದಲ್ಲಿ ರಶ್ಮಿಕಾ ಮಂದಣ್ಣಂಗೆ ಇದು 4ನೇ ಸಿನಿಮಾವಾಗಿತ್ತು. ಆದರೆ ವಿ.ಹರಿಕೃಷ್ಣ ಮೊದಲ ಬಾರಿ ಸಂಗೀತ ನಿರ್ದೇಶಕರಾಗಿ ಜನಪ್ರಿಯತೆ ಪಡೆದುಕೊಂಡರು. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ತಾನ್ಯಾ ಹೋಪ್, ಧನಂಜಯ್, ಡೈನಾಮಿಕ್ ಕಿಂಗ್ ದೇವರಾಜ್‌, ಶಂಕರ್‌ ಅಶ್ವಥ್,  ರವಿಶಂಕರ್‌ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರೇ ತಂಡವೇ ಚಿತ್ರದಲ್ಲಿ ಅಭಿನಯಿಸಿತ್ತು. ರಶ್ಮಿಕಾ ಹಾಗೂ ದರ್ಶನ್‌ ಮೊದಲ ಡುಯೇಟ್‌ ಸಾಂಗ್ 'ಒಂದು ಮುಂಜಾನೇ' ಸಂಗೀತ ಲೋಕದಲ್ಲಿ ದೊಡ್ಡ ದಾಖಲೆಯನ್ನೂ ನಿರ್ಮಿಸಿತ್ತು.  

ಮಧ್ಯರಾತ್ರಿ 1 ಗಂಟೆಗೆ ಹುಬ್ಬಳ್ಳಿಯಲ್ಲಿ ದರ್ಶನ್‌ ನೋಡಲು ಬಂದ ಫ್ಯಾನ್ಸ್‌ಗೆ ಲಾಠಿಚಾರ್ಜ್! 

'ಪೊಗರು' ಸಿನಿಮಾ ಪ್ರಚಾರದಲ್ಲಿ ರಶ್ಮಿಕಾ ತೋರಿಸಿದ ಆಸಕ್ತಿ ಅಷ್ಟಕ್ಕಷ್ಟೆೇ. ಆದರೂ ಸಿನಿಮಾ 10 ದಿನದಲ್ಲಿ 51 ಕೋಟಿ ರೂ. ಕಲೆಕ್ಷನ್ ಮಾಡಿದೆ.  ಸದ್ಯಕ್ಕೆ ರಶ್ಮಿಕಾ ಕೈಯಲ್ಲಿ ಯಾವ ಕನ್ನಡ ಪ್ರಾಜೆಕ್ಟ್‌ ಇಲ್ಲವಾದರೂ ಅವಕಾಶ ಸಿಕ್ಕರೆ ಯಶ್ ಹಾಗೂ ಪುನೀತ್‌ ರಾಜ್‌ಕುಮಾರ್‌ ಜೊತೆ ಅಭಿನಯಿಸಬೇಕು ಎಂಬ ಆಸೆ ಹಂಚಿಕೊಂಡಿದ್ದರು. ಯಜಮಾನ ಚಿತ್ರ ಮಾರ್ಚ್‌ 1ರಂದು ಬಿಡುಗಡೆ ಮಾಡಲಾಗಿತ್ತು. ಇದೀಗ ರಾಬರ್ಟ್‌ ಸಿನಿಮಾ ಮಾರ್ಚ್‌ 11ಕ್ಕೆ ಬಿಡುಗಡೆಯಾಗುತ್ತಿದೆ. ಹಾಗಿದ್ರೆ ಮಾರ್ಚ್‌ ದರ್ಶನ್‌ಗೆ ಲಕ್ಕಿ ಇಯರ್‌ ಅಂತಾನೇ ಹೇಳಬಹುದು ಅಲ್ವಾ?