ಸೌತ್ ಚೆಲುವೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಕಿರಿಕ್ ಪಾರ್ಟಿ ಚೆಲುವೆ ತಮ್ಮ ಅಪ್‌ಡೇಟ್ ಫ್ಯಾನ್ಸ್‌ಗೆ ಕೊಡ್ತಾ ಫೊಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಇತ್ತೀಚೆಗೆ ನಟಿ ದೊಡ್ಡದೊಂದು ಪೋಸ್ಟ್ ಶೇರ್ ಮಾಡಿ ಚಿಕ್ಕ ವಿಚಾರವನ್ನು ಶೇರ್ ಮಾಡ್ಕೊಂಡಿದ್ದಾರೆ. ಅದೃಷ್ಟದ ಕುಕ್ಕಿಯೊಂದು ನನಗೆ ಸಿಗಬೇಕಾದ ಖುಷಿಯನ್ನು ಪಡೆಯುವ ದಾರಿ ನನಗೆ ಸಿಗುತ್ತದೆ ಎಂದಿತ್ತು, ನನಗೆ ಸಿಕ್ಕಿತು ಎಂದಿದ್ದಾರೆ.

ಕಿರಿಕ್ ಚೆಲುವೆ ಬಾಲಿವುಡ್ ಎಂಟ್ರಿ: ಸಿದ್ಧಾರ್ಥ್ ಮಲ್ಹೋತ್ರಾಗೆ ರಶ್ಮಿಕಾ ಜೋಡಿ

ನಾನು ಬಯಸಿದ ಖುಷಿ ನೀವಾಗಿದ್ರಿ. ನಮ್ಮೆಲ್ಲರ ಒಳಗೆ ನಾವು ಬಯಸುವುದನ್ನು ಪಡೆಯುವ ಶಕ್ತಿ ಇದೆ. ಆದಕ್ಕೆ ಸ್ವಲ್ಪ ಸಮಯ ಬೇಕು. ತಾಳ್ಮೆ, ಶ್ರಮ ಬೇಕು. ನನಗದು ಹೇಗೆ ಸಿಕ್ಕಿತೋ ನಿಮಗೂ ಹಾಗೆಯೇ ಸಿಗುತ್ತದೆ ಎಂದಿದ್ದಾರೆ.

ನಟಿ ಇತ್ತೀಚೆಗಷ್ಟೇ ರ್ಯಾಪರ್ ಬಾದ್‌ಶಾ ಅವರ ಹಾಡಿನಲ್ಲಿ ನಟಿಸಿದ್ದು, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ.