ಸೆಲ್ಫಿ ಕೇಳಿದ ಫ್ಯಾನ್‌ ಮೇಲೆ ರೇಗಾಡಿದ ಬಾಡಿಗಾರ್ಡ್‌; ಸಿಟ್ಟು ಮಾಡಿಕೊಂಡ ರಶ್ಮಿಕಾ ಮಂದಣ್ಣ

ಮೊದಲ ಬಾರಿ ಅಭಿಮಾನಿಗಳ ಪರ ನಿಂತುಕೊಂಡ ರಶ್ಮಿಕಾ ಮಂದಣ್ಣ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್. 

Rashmika Mandanna says no to bodyguard for sending her fan away vcs

ಕೊಡಗಿನ ಕುವರಿ ಸ್ಯಾಂಡಲ್‌ವುಡ್‌ ಸಾನ್ವಿ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಹಿಂದಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸೆಟ್‌ನಿಂದ ಕ್ಯಾರವಾನ್‌ಗೆ ಪ್ರಯಾಣ ಮಾಡುವಾಗ ರಶ್ಮಿಕಾ ಫೋಟೋ ಮತ್ತು ವಿಡಿಯೋ ಸೆರೆ ಹಿಡಿಯಲು ಪ್ಯಾಪರಾಜಿಗಳು ಮತ್ತು ಫ್ಯಾನ್‌ಗಳು ಕಾಯುತ್ತಿರುತ್ತಾರೆ. ಇತ್ತೀಚಿಗೆ ನಡೆದ ಘಟನೆಯ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೊದಲ ಬಾರಿ ರಶ್ಮಿಕಾ ಮಂದಣ್ಣ ಫ್ಯಾನ ಪರ ನಿಂತಿದ್ದಾರೆ ಎಂದು ಕಾಮೆಂಟ್‌ಗಳು ಹರಿದು ಬರುತ್ತಿದೆ. 

ವೈಟ್ ಆಂಟ್ ವೈಟ್‌ ಔಟ್‌ಫಿಟ್‌ನಲ್ಲಿ ಶೂಟಿಂಗ್ ಮುಗಿಸಿಕೊಂಡು ಕ್ಯಾರೆವಾನ್‌ ಪ್ರವೇಶ ಮಾಡುವಾಗ ರಶ್ಮಿಕಾ ಮಂದಣ್ಣರನ್ನು ಪ್ಯಾಪರಾಜಿಗಳು ಅಡ್ಡ ಹಾಕುತ್ತಾರೆ. ಇಷ್ಟೊಂದು ಫೋಟೋ ಮತ್ತು ವಿಡಿಯೋ ಕ್ಲಿಕ್ ಮಾಡಿ ಏನು ಮಾಡುತ್ತೀರಾ? ಎಂದು ರಶ್ಮಿಕಾ ಪ್ರಶ್ನೆ ಮಾಡುತ್ತಾರೆ. ಈ ಸಮಯದಲ್ಲಿ ಇಬ್ಬರು ಅಭಿಮಾನಿಗಳು ಫೋಟೋ ಕ್ಲಿಕ್ ಮಾಡಿಕೊಳ್ಳಲು ಮುಂದಾಗುತ್ತಾರೆ. ಅಷ್ಟರಲ್ಲಿ ರಶ್ಮಿಕಾ ಬಾಡಿಗಾರ್ಡ್‌ ಆತನ ಮೇಲೆ ರೇಗಾಡಿ ನೂಕುವುದಕ್ಕೆ ಪ್ರಯತ್ನ ಮಾಡುತ್ತಾರೆ. 'ಆತನನ್ನು ಬಿಡಿ ಹಾಗೆ ಮಾಡಬೇಡಿ ಬಿಡಿ ಬಿಡಿ' ಎಂದು ರಶ್ಮಿಕಾ ತಡೆಯುತ್ತಾಳೆ. ಈ ವಿಡಿಯೋಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. 

ಮ್ಯಾಗಜಿನ್ ಕವರ್ ಪೇಜ್‌ನಲ್ಲಿ ರಶ್ಮಿಕಾ ಬೋಲ್ಡ್ ಪೋಸ್

'ರಶ್ಮಿಕಾಗೆ ತುಂಬಾನೇ ಕ್ಲೋಸ್‌ ಆಗಿ ಫ್ಯಾನ್ ಬರುತ್ತಿದ್ದ ಕಾರಣ ಬಾಡಿಗಾರ್ಡ್‌ ತಡೆದಿದ್ದಾರೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು 'ಸ್ಟಾರ್ ನಟರು ಈ ರೀತಿ ಮಾಡುವುದನ್ನು ರಶ್ಮಿಕಾ ಗಮನಿಸಿದ್ದಾರೆ ಹೀಗಾಗಿ ಅಕೆ ಕೂಡ ಇದೇ ಟ್ರಿಕ್ ಪ್ಲೇ ಮಾಡುತ್ತಿದ್ದಾಳೆ' ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. 

 

ರಣಬೀರ್‌ ಜೊತೆ ರಾಶ್:

ನಟಿ ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ, ಬಾಲಿವುಡ್‌ನಲ್ಲಿ ಒಬ್ಬರೇ ಒಬ್ಬರು ಸ್ಟಾರ್ ತನ್ನನ್ನು ಮೇಡಮ್ ಎಂದು ಕರೆಯುತ್ತಾರೆ ಎಂದು ಬಹಿರಂಗ ಪಡಿಸಿದ್ದಾರೆ. ಅಲ್ಲದೆ ಅದು ತನಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ.  ರಶ್ಮಿಕಾರನ್ನು ಮೇಡಮ್ ಎಂದು ಕರೆಯುತ್ತಿರುವ ಬಾಲಿವುಡ್ ಸ್ಟಾರ್ ನಟ ಯಾರಿರಬಹುದು ಎಂದು ಯೋಚಿಸತ್ತಿದ್ದೀರಾ? ಅದು ಮತ್ಯಾರು ಅಲ್ಲ ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್. ಹೌದು, ಬಾಲಿವುಡ್‌ನಲ್ಲಿ ರಣಬೀರ್ ಕಪೂರ್ ಮಾತ್ರ ಮೇಡಮ್ ಎಂದು ಕರೆಯುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ. 

777 ಚಾರ್ಲಿ, ರಕ್ಷಿತ್ ನಟನೆ ನೋಡಿ ರಶ್ಮಿಕಾ ಕಾಲೆಳೆದ ನೆಟ್ಟಿಗರು..!

ರಣಬೀರ್ ಕಪೂರ್ ಜೊತೆ ನಟನೆಯ ಅನುಭವ ಬಿಚ್ಚಿಟ್ಟ ರಶ್ಮಿಕಾ, 'ಅವರು ತುಂಬಾ ಲವಿಂಗ್ ವ್ಯಕ್ತಿ. ಅವರನ್ನು ಮೊದಲು ಭೇಟಿಯಾದಾಗ ತುಂಬಾ ನರ್ವಸ್ ಆಗಿದ್ದೆ. ಬಳಿಕ ಆರಾಮಾದೆ. ಈಗ ಯೋಚಿಸುತ್ತೇನೆ ರಣಬೀರ್ ಮತ್ತು ಸಂದೀಪ್ ರೆಡ್ಡಿ ಜೊತೆ ಕೆಲಸ ಮಾಡುವುದು ತುಂಬಾ ಸುಲಭ.ನಾನು ಯಾವಾಗಲು ಬೇರೆ ಬೇರೆ ಭಾಷೆ ಕಲಿಯಲು ಪ್ರಯತ್ನಿಸುತ್ತೇನೆ ಯಾಕೆಂದರೆ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲು ಸಾಧ್ಯವಾಗುತ್ತದೆ. ಪ್ಯಾನ್ ಇಂಡಿಯಾ ಸ್ಟಾರ್ ಎನ್ನುವ ಪರಿಕಲ್ಪನೆ ಈಗಷ್ಟೆ ಬಂದಿದೆ. ನಾನು ಪ್ರಪಂಚದಾದ್ಯಂತ ಪ್ರೇಕ್ಷಕರ ಹೃದಯ ತಲುಪುವರೆಗೂ ನಾನು ಇದನ್ನು ಮಾಡುತ್ತೇನೆ. ಇನ್ನಷ್ಟು ಭಾಷೆ ಕಲಿಯುವುದಾದರು ಸರಿ' ಎಂದು ಹೇಳಿದರು.
 
Rap ಮೇಲೆ ಮುಜಗರ:

ಮುಂಬೈನಲ್ಲಿ ನಡೆದ ಡೈರೆಕ್ಟರ್ ಕರಣ್ ಜೋಹರ್ ಬರ್ಥಡೇ ಪಾರ್ಟಿಯಲ್ಲಿ ರಶ್ಮಿಕಾ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ "ಬ್ಲಾಕ್ & ಬ್ಲಿಂಗ್ ಥೀಮ್' ಇಟ್ಟಿದ್ದರಿಂದ, ಸೆಕ್ಸಿಯಾಗಿರುವ ಕಪ್ಪು ಡ್ರೆಸ್‌ನಲ್ಲಿ ಬಂದಿದ್ದರು. ಆದರೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಾಗ ಪಾಪ್ ಮುಂದೆ ಡ್ರೆಸ್ ಮುಜುಗರ ಮೂಡಿಸಿತು. ಕ್ಯಾಮೆರಾ ಎದುರು ಡ್ರೆಸ್ ಸರಿಮಾಡಿಕೊಳ್ಳುತ್ತಾ ಮುಜುಗರದಿಂದ ವರ್ತಿಸುವಂತೆ ಮಾಡಿತು. ಸಾಮಾಜಿಕ ಜಾಲತಾಣಗಳಲ್ಲಿ " ಮುಜುಗರ ಮೂಡಿಸುವ ಡ್ರೆಸ್ ಏಕೆ ಹಾಕಬೇಕಿತ್ತು?' ಎಂದು ವೈರಲ್ ವಿಡಿಯೋಗೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಡ್ರೆಸ್ ವಿಚಾರದಲ್ಲಿ ಮತ್ತೆ ಟ್ರೋಲ್ ಆಗಿದ್ದು, ಕನ್ನಡಿಗರಿಗೂ ಹಾಗೂ ಫ್ಯಾನ್ಸ್‌ಗೂ ಬೇಸರವಾಗಿದೆ. ಈ ಹಿಂದೆ ಏರ್ಪೋರ್ಟ್ನಲ್ಲಿಕಾಣಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ತಮ್ಮ ಶಾರ್ಟ್ ಡ್ರೆಸ್‌ನಿಂದ ಟ್ರೋಲ್‌ಗೆ ಸಿಕ್ಕಿಬಿದ್ದಿದ್ದರು. 

Latest Videos
Follow Us:
Download App:
  • android
  • ios