Asianet Suvarna News Asianet Suvarna News

5 ಲಕ್ಷದಿಂದ ಶುರುವಾದ ರಶ್ಮಿಕಾ ಸಿನಿ ಜರ್ನಿ, ಈಗಿರುವ ಸಂಭಾವನೆ ಅಬ್ಬಬ್ಬಾ...!

ತೆಲುಗು, ತಮಿಳಿನಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮಿಂಚಿಂಗ್| 2016 ರಿಂದ 2020 ರವೆರೆಗೆ ಒಟ್ಟು 13 ಸಿನಿಮಾಗಳಲ್ಲಿ ರಶ್ಮಿಕಾ ನಟನೆ ತೆಲುಗು, ತಮಿಳು, ಕನ್ನಡದಲ್ಲೂ ಬಹುಬೇಡಿಕೆಯ ನಟಿ ರಶ್ಮಿಕಾ

Rashmika Mandanna Sandalwood And Tollywood Cine Journey And Remuneration
Author
Bangalore, First Published Jan 16, 2020, 1:25 PM IST
  • Facebook
  • Twitter
  • Whatsapp

ಬೆಂಗಳೂರು[ಜ.16]: ಸದ್ಯ ಕರ್ನಾಟಕದಲ್ಲೆಡೆ ರಶ್ಮಿಕಾ ಮಂದಣ್ಣರವರ ವಿರಾಜಪೇಟೆ ಮನೆ ಮೇಲೆ ನಡೆದ ಐಟಿ ಹಾಗೂ ಇಡಿ ದಾಳಿ ಸದ್ದು ಮಾಡುತ್ತಿದೆ. ಕಿರಿಕ್ ಪಾರ್ಟಿಯ 'ಸಾನ್ವಿ' ತೆರಿಗೆ ವಂಚನೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹೀಗಿರುವಾಗ ರಶ್ಮಿಕಾ ಆಸ್ತಿ ಎಷ್ಟು ಎಂಬ ಪ್ರಶ್ನೆ ಒಂದೆಡೆಯಾದರೆ, ಅವರು ನಟಿಸಿದ ಸಿನಿಮಾಗಳು ಯಾವುವು? ಪಡೆದ  ಸಂಭಾವನೆ ಎಷ್ಟು ಎಂಬಿತ್ಯಾದಿ ಮಾಹಿತಿಯ ಹುಡುಕಾಟವೂ ನಡೆಯುತ್ತಿದೆ. ಇಲ್ಲಿದೆ ನೋಡಿ ರಶ್ಮಿಕಾ ಸಿನಿ ಜರ್ನಿ ಹಾಗೂ ಸಂಭಾವನೆಯ ಮಾಹಿತಿ

ರಶ್ಮಿಕಾ ಪಡೆದ ಸಂಭಾವನೆ

* ಕಿರಿಕ್ ಪಾರ್ಟಿ ಚಿತ್ರಕ್ಕೆ- 5 ಲಕ್ಷ 

* ಚಮಕ್ -ಕನ್ನಡ - 6 ಲಕ್ಷ ರೂಪಾಯಿ 

* ಅಂಜನಿಪುತ್ರ-ಕನ್ನಡ - 10 ಲಕ್ಷ ರೂಪಾಯಿ

* ಯಜಮಾನ-ಕನ್ನಡ - 12 ಲಕ್ಷ ರೂಪಾಯಿ

* ಚಲೋ - ತೆಲುಗು -15 ಲಕ್ಷ ರೂಪಾಯಿ

* ಗೀತಾ ಗೋವಿಂದಂ - ತೆಲುಗು - 20 ಲಕ್ಷ ರೂಪಾಯಿ

* ಡಿಯರ್ ಕಾಮ್ರೆಡ್ - ತೆಲುಗು - 25 ಲಕ್ಷ ರೂಪಾಯಿ

* ಸುಲ್ತಾನ್ - ತಮಿಳು - 30 ಲಕ್ಷ ರೂಪಾಯಿ

* ಸರಿಲೇರು ನೀಕೆವ್ವುರು - 1 ಕೋಟಿ ರೂಪಾಯಿ

"

ರಶ್ಮಿಕಾ ಮಂದಣ್ಣ ವಯಸ್ಸಿನ್ನೂ 23, ಸಂಪಾದನೆ ಮಾತ್ರ ಕೋಟಿ ಕೋಟಿ!

ರಶ್ಮಿಕಾ ಸಿನಿ ಜರ್ನಿ

* 2012-  ಮಾಡೆಲಿಂಗ್ ಆರಂಭ, ಕ್ಲೀನ್ & ಕ್ಲಿಯರ್ ಫ್ರೆಸ್ ಆಫ್ ಇಂಡಿಯಾ ಟೈಟಲ್ ಗಳಿಸಿದ ರಶ್ಮಿಕಾ

* 2013 - ಬೆಂಗಳೂರಿನ ಟಾಪ್ ಮಾಡೆಲ್ ಸ್ಪರ್ಧೆಯಲ್ಲಿ ಗೆದ್ದಿದ್ದ ರಶ್ಮಿಕಾ

* 2016- ‘ಕಿರಿಕ್ ಪಾರ್ಟಿ’ ಮೂಲಕ ಚಿತ್ರರಂಗ ಪ್ರವೇಶಿಸಿದ  ರಶ್ಮಿಕಾ ಮಂದಣ್ಣ

* 2017- ‘ಅಂಜನೀಪುತ್ರ’ ಚಿತ್ರದಲ್ಲಿ  ಪುನೀತ್ ರಾಜ್ಕುಮಾರ್ ಜತೆ ಜೋಡಿ

* 2017- ‘ಚಮಕ್’ ಚಿತ್ರದಲ್ಲಿ ಗಣೇಶ್ ಜತೆ ಡ್ಯುಯೆಟ್ ಹಾಡಿದ ರಶ್ಮಿಕಾ

* 2019- ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ‘ಯಜಮಾನ’ ಚಿತ್ರದಲ್ಲಿ ನಟನ

* ಧ್ರುವ ಸರ್ಜಾ ಜತೆ ನಟಿಸಿರುವ ಬಿಡುಗಡೆಗೆ ಸಿದ್ಧವಾಗಿರುವ ‘ಪೊಗರು’ ಚಿತ್ರ 

ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ, ಇಡಿ ದಾಳಿ: ಈವರೆಗೆ ಏನೇನಾಯ್ತು?

ರಶ್ಮಿಕಾ ಟಾಲಿವುಡ್ ಸಿನಿ ಜರ್ನಿ

* 2018- ನಟ ವಿಜಯ್ ದೇವರಕೊಂಡ ಜತೆ ‘ಗೀತಾ ಗೋವಿಂದಂ’ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ

* 2019- ವಿಜಯ್ ದೇವರಕೊಂಡ ಜತೆ ‘ಡಿಯರ್ ಕಾಮ್ರೆಡ್’ನಲ್ಲೂ ನಟನೆ

* 2019 - ನಾಗಾರ್ಜುನ್- ನಾನಿ ಜತೆ ‘ದೇವದಾಸು’ ಚಿತ್ರದಲ್ಲಿ ನಟನೆ

* 2020 - ಟಾಲಿವುಟ್ ಪ್ರಿನ್ಸ್ ಮಹೇಶ್ ಬಾಬು ಜತೆ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ನಟನೆ

* ನಟ ನಿತಿನ್ ರೆಡ್ಡಿ ಜತೆ ನಟಿಸಿರುವ ‘ಭೀಷ್ಮ’ ಚಿತ್ರ ತೆರೆಗೆ ಸಿದ್ಧ

* ನಟ ಅಲ್ಲು ಅರ್ಜುನ್ ಅಭಿನಯದ ‘AA-20’ ಚಿತ್ರದಲ್ಲೂ ರಶ್ಮಿಕಾ  ಮಿಂಚಿಂಗ್

* ತಮಿಳು ನಟ ಕಾರ್ತಿ ಅಭಿನಯದ ‘ಸುಲ್ತಾನ್’ ಚಿತ್ರದಲ್ಲೂ ರಶ್ಮಿಕಾ ಅಭಿನಯ

Follow Us:
Download App:
  • android
  • ios