ರಶ್ಮಿಕಾ ಮಂದಣ್ಣ ಕೊಟ್ರು ಸಿಹಿ ಮುತ್ತು! | ಯಾರಿಗೆ ಕೊಟ್ಟಿದ್ದು ಎಂಬ ಕುತೂಹಲಕ್ಕೆ ಮಾತ್ರ ಉತ್ತರ ಸಿಕ್ಕಿಲ್ಲ |  

ಕರ್ನಾಟಕದ ಕ್ರಶ್, ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಸಿನಿ ಜರ್ನಿ ಶುರು ಮಾಡಿದ್ದು ಸ್ಯಾಂಡಲ್‌ವುಡ್‌ನಿಂದಾದ್ರೂ ಗುರುತಿಸಿಕೊಂಡಿದ್ದು ಮಾತ್ರ ಟಾಲಿವುಡ್‌ನಲ್ಲಿ. ಟಾಲಿವುಡ್‌ಗೆ ಹಾರಿದ್ದೇ ಹಾರಿದ್ದು. 'ಗೀತಾ ಗೋವಿಂದಂ', 'ಡಿಯರ್ ಕಾಮ್ರೆಡ್' ಸಿನಿಮಾದ ನಂತರ ಅವರ ಸ್ಟಾರೇ ಬದಲಾಗಿ ಹೋಯಿತು.

ಆನಂತರ ಸಿನಿಮಾಗಿಂತ ಹೆಚ್ಚಾಗಿ ಸುದ್ದಿ ಮಾಡಿದ್ದು ವಿವಾದಗಳಿಂದಲೇ. ಕನ್ನಡದ ಬಗ್ಗೆ ಆಗಾಗ ಅಸಡ್ಡೆ, ವಿಜಯ್ ದೇವರಕೊಂಡ ಜೊತೆಗೆ ಹೆಚ್ಚಾಗಿ ಓಡಾಡಿದ್ದು, 'ಗೀತಾ ಗೋವಿಂದಂ' ನಲ್ಲಿ ದೇವರಕೊಂಡ ಜೊತೆ ಲಿಪ್ ಲಾಕ್‌ ಸೀನ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದ್ದರು. 

ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಇದೀಗ ಹಾಕಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಯಾರಿಗೋ ಕಿಸ್ ಕೊಟ್ಟಿದ್ದಾರೆ. ಯಾರಿಗಪ್ಪಾ ಈ ಕಿಸ್ ಎಂಬ ಕುತೂಹಲ ಮೂಡಿಸಿದೆ. 

View post on Instagram