ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ | ಟಾಲಿವುಡ್‌ಗೆ ಹಾರಿ ಎರಡು ವರ್ಷ ತುಂಬಿದೆ | ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಸಿಕ್ಕಾಪಟ್ಟೆ ಯಶಸ್ಸು, ಹೆಸರು ತಂದುಕೊಟ್ಟ ಚಿತ್ರ 

ಬೆಂಗಳೂರು (ಏ. 12): ಕರ್ನಾಟಕದ ಕ್ರಶ್, ಟಾಲಿವುಡ್ ಅಭಿಮಾನಿಗಳ ನೆಚ್ಚಿನ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಫುಲ್ ಖುಷ್ ಮೂಡ್ ನಲ್ಲಿದ್ದಾರೆ. ಅರೇ! ಏನಾದ್ರೂ ವಿಶೇಷನಾ ಎಂದು ಹುಬ್ಬೇರಿಸಬೇಡಿ! ರಶ್ಮಿಕಾ ಟಾಲಿವುಡ್ ಗೆ ಕಾಲಿಟ್ಟು ಎರಡು ವರ್ಷ ತುಂಬಿದ ಸಂಭ್ರಮದಲ್ಲಿದ್ದಾರೆ ಕೊಡಗಿನ ಕುವರಿ. 

Add Asianetnews Kannada as a Preferred SourcegooglePreferred

2016 ರಲ್ಲಿ ತೆರೆ ಕಂಡ ಕಿರಿಕ್ ಪಾರ್ಟಿ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಈ ಚಿತ್ರ ಸೂಪರ್ ಹಿಟ್ ಆಗುತ್ತಿದ್ದಂತೆ ಗಣೇಶ್ ಜೊತೆ ಚಮಕ್ ನಲ್ಲಿಯೂ, ಪುನೀತ್ ಜೊತೆ ಅಂಜನೀಪುತ್ರದಲ್ಲಿಯೂ ಕಾಣಿಸಿಕೊಂಡರು. ನಂತರ ರಶ್ಮಿಕಾ ಸಕ್ಸಸ್ ಗ್ರಾಫ್ ಮೇಲೆರುತ್ತಾ ಹೋಯಿತು. 

ನಂತರ 2017, ಏಪ್ರಿಲ್ 11 ರಂದು ಚಲೋ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡದ ಕುವರಿಗೆ ಭರ್ಜರಿ ಸ್ವಾಗತ ನೀಡಿದ ಟಾಲಿವುಡ್ ಮಂದಿ ತಮ್ಮದೇ ಕೂಸೆಂದು ಅಪ್ಪಿಕೊಂಡರು. 

ನಂತರ ವಿಜಯ್ ದೇವರಕೊಂಡ ಜೊತೆ ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಸಿಕ್ಕಾಪಟ್ಟೆ ಯಶಸ್ಸನ್ನು ತಂದುಕೊಡ್ತು. 

ಕಿರಿಕ್ ಪಾರ್ಟಿ ನಂತರ ರಕ್ಷಿತ್ ಶೆಟ್ಟಿ ಜೊತೆ ಕುಚ್ ಕುಚ್ ಹೋತಾ ಹೇ ಶುರುವಾಗಿ ಮೊಹಬ್ಬತೇ ವರೆಗೆ ಬಂದು ನಿಂತಿತ್ತು. ಆನಂತರ ಇದ್ದಕ್ಕಿದ್ದಂತೆ ಬ್ರೇಕ್ ಆಪ್ ಆಗಿ ನಂತರ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡರು.