'ಕಾಟನ್ ಕ್ಯಾಂಡಿ' ಯಶಸ್ಸಿನ ನಂತರ, ಮುಂಬರುವ ಕಾರ್ಯಕ್ರಮಗಳಿಗೆ ಮುನ್ನ ವಿರಾಮ ತೆಗೆದುಕೊಂಡ ಚಂದನ್ ಶೆಟ್ಟಿ, ಸ್ನೇಹಿತರೊಂದಿಗೆ ಹಿಮಾಚಲ ಪ್ರದೇಶಕ್ಕೆ ಪ್ರವಾಸ ಹೊರಟಿದ್ದಾರೆ. ನಾಗ್ಪುರ, ಆಗ್ರಾ ತಾಜ್‌ಮಹಲ್ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸದ ವಿವರ ಹಂಚಿಕೊಳ್ಳುತ್ತಿದ್ದಾರೆ.
ಕನ್ನಡದ ಫೇಮಸ್ ರಾಪರ್ ಚಂದನ್ ಶೆಟ್ಟಿಯವರು (Chandan Shetty) ಹಿಮಾಚಲ ಪ್ರದೇಶಕ್ಕೆ ಕಾರಿನಲ್ಲಿ ಸ್ನೇಹಿತರ ಜೊತೆ ಟ್ರಿಪ್ ಹೋಗಿರುವುದು ಗೊತ್ತೇ ಇದೆ. ಅಲ್ಲಿಗೆ ಹೊರಟಿರುವ ಅವರು ನಾಗ್ಪುರ, ಜಗತ್ತಿನ ಎತ್ತರದ ಬ್ರಿಡ್ಜ್ 'ಚಿಚಂ' ನೋಡಿದ ಬಳಿಕ, ಸೀದಾ 'ಪ್ರೇಮಿಗಳ ಸೌಧ' ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿದ್ದಾರೆ. ಅವರನ್ನು ಪ್ರೇಮ ಸೌಧದ ಮುಂದೆ ನೋಡಿ ಅಭಿಮಾನಿಗಳು ಪುಳಕಗೊಂಡಿದ್ದಾರೆ, ಹರ್ಷ ಹರಿಸುತ್ತಿದ್ದಾರೆ. ತಾಜ್ ಮಹಲ್ ಮುಂದೆ ನಿಂತು ವಿಡಿಯೋ ಮಾಡಿ, ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇವೆಲ್ಲವು ಈಗ ಹಳೆಯ ಸುದ್ದಿ!
ಆದರೆ, ಚಂದನ್ ಶೆಟ್ಟಿ ಹಿಮಾಚಲ ಪ್ರದೇಶಕ್ಕೆ ಟೂರ್ ಹೋಗಿದ್ದು ಓಕೆ, ಅಲ್ಲಿ ಸಾಕಷ್ಟು ಐತಿಹಾಸಿಕ ಸ್ಥಳಗಳನ್ನು, ಫೇಮಸ್ ಜಾಗಗಳನ್ನು ನೋಡಿದ್ದು ಓಕೆ... ಅದನ್ನು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸುತ್ತಿರುವುದೂ ಓಕೆ... ಆದರೆ, ಈಗ ಇದ್ದಕ್ಕಿದ್ದಂತೆ ಟ್ರಿಪ್ ಹೋಗಿರುವುದು ಯಾಕೆ? ಎಲ್ಲರಲ್ಲೂ ಮೂಡುತ್ತಿರುವ ಕಟ್ಟಕಡೆಯ ಪ್ರಶ್ನೆ ಇದು..! ಬಹಳಷ್ಟು ಮನಸ್ಸುಗಳ ಪ್ರಶ್ನೆಗೆ ಇಲ್ಲಿದೆ ಉತ್ತರ ಬೇಕಾದ್ರೆ, ನೋಡಿ..
ತಾಜ್‌ಮಹಲ್ ಮುಂದೆ ಚಂದನ್ ಶೆಟ್ಟಿ ಪ್ರತ್ಯಕ್ಷ...! ಹೊಸ ಹುಡುಗಿ, Love Story ಏನಾದ್ರೂ... !?
ಚಂದನ್ ಶೆಟ್ಟಿ ಯಾರೊಂದಿಗೆ ಟ್ರಿಪ್‌ಗೆ ಹೋಗಿದ್ದಾರೆ ಎಂಬ ಬಗ್ಗೆ ಹಲವರಿಗೆ ಕುತೂಹಲವಿದೆ, ಅವರು ತಮ್ಮ ಸ್ನೇಹಿತರೊಂದಿಗೆ ಹೋಗಿದ್ದಾರೆ ಎಂಬುದು ಅದಕ್ಕೆ ಉತ್ತರ.. ಯಾರು ಸ್ನೇಹಿತರು ಎಂಬುದನ್ನು ತಿಳಿದುಕೊಳ್ಳಲು ಅವರ ಸೋಷಿಯಲ್ ಮೀಡಿಯಾಗಳಲ್ಲೇ ಇದೆ ಉತ್ತರ..! ಇನ್ನು ಎಲ್ಲಿಗೆಲ್ಲಾ ಹೋಗಿದ್ದಾರೆ ಎನ್ನುವುದಕ್ಕೂ ಅಲ್ಲೇ ಇದೆ ಉತ್ತರ.. ಹಾಗಿದ್ದರೆ ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆ ಯಾವುದು? ಅದು.. ಈಗ್ಲೇ ಯಾಕೆ ಹೋಗಿದ್ದಾರೆ ಎಂಬುದಷ್ಟೇ..!
ಅದಕ್ಕೆ ಉತ್ತರ ಹೀಗಿದೆ.. ಚಂದನ್ ಶೆಟ್ಟಿಯವರು ಸದ್ಯ ಮ್ಯೂಸಿಕ್ ವಿಡಿಯೋ 'ಕಾಟನ್ ಕ್ಯಾಂಡಿ' ಸಕ್ಸಸ್' ಎಂಜಾಯ್ ಮಾಡುತ್ತಿದ್ದಾರೆ. ಈ ಕಾಟನ್ ಕ್ಯಾಂಡಿ ವಿಡಿಯೋ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಆಗಿದ್ದು, ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇತ್ತೀಚೆಗಷ್ಟೇ 16 ಮಿಲಿಯನ್ ವ್ಯೂಸ್ ಕಂಡಿದ್ದು ಹೊಸ ದಾಖಲೆ ಬರೆದಿದೆ. ಮುಂದೆ ಬೇರೆಬೇರೆ ಹೊಸ ಹೊಸ ಕೆಲಸಗಳು ಚಂದನ್ ಶೆಟ್ಟಿ ಪಾಲಿಗೆ ಸಾಲುಗಟ್ಟಿ ನಿಂತಿವೆ. ಹೀಗಾಗಿ ಸಣ್ಣದೊಂದು ಗ್ಯಾಪ್ ತೆಗೆದುಕೊಂಡು ಅವರು ಟೂರ್ ಆಯೋಜಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಅಣ್ಣಾವ್ರ 'ಭಕ್ತ ಕುಂಬಾರ' ಶೂಟಿಂಗ್ ವೇಳೆ ಮನಸ್ತಾಪ ಆಗಿದ್ದು ನಿಜವೇ? ಇಲ್ಲಿದೆ ಸತ್ಯ ಸಂಗತಿ!
ಒಟ್ಟಿನಲ್ಲಿ, ಈಗ ಅಡ್ವೆಂಚರ್‌ಗೆ ಮನಸ್ಸನ್ನು ರೆಡಿಯಾಗಿಸಿಕೊಂಡಿರುವ ಚಂದನ್ ಶೆಟ್ಟಿಯವರು ಹಿಮಾಚಲ ಪ್ರದೇಶದಲ್ಲಿ ಸದ್ಯ ಸಾಕಷ್ಟು ಸಾಹಸಕ್ಕೆ ತಮ್ಮನ್ನು ಒಡ್ಡಿಕೊಂಡು ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಇದಕ್ಕೂ ಮೊದಲು ಅವರು ಆಸ್ಟ್ರೇಲಿಯಾದ ಸಿಡ್ನಿಗೆ ಹೋಗಿದ್ದರು. ಅಲ್ಲಿ ತಮ್ಮ ಬಾಲ್ಯದ 'ವಿಮಾನ ಓಡಿಸುವ' ಕನಸನ್ನು ನನಸು ಮಾಡಿಕೊಂಡು ಬಂದಿದ್ದಾರೆ. ಮುಂದೆ ತಮ್ಮ ವೃತ್ತಿಜೀವನದಲ್ಲಿ ಅದ್ಯಾವ ಸಾಹಸಕ್ಕೆ ರೆಡಿಯಾಗಲಿದ್ದಾರೆ ಚಂದನ್ ಶೆಟ್ಟಿ ಎಂಬುದನ್ನು ಕಾದು ನೋಡಬೇಕಾಗಿದೆ.
