ಸ್ಯಾಂಡಲ್ವುಡ್ ನಟಿ ರಂಜನಿ ರಾಘವನ್ ಫಿಟ್ನೆಸ್ ಪ್ರೇಮಿಗಳಿಗೆ ಸ್ಪೂರ್ತಿಯಾಗಿದ್ದಾರೆ. ನಂದಿ ಬೆಟ್ಟವನ್ನು ಓಡ್ತಾ ಹತ್ತಿದ ರಂಜನಿ ತಮ್ಮ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಕನ್ನಡತಿ ಎಂದೇ ಪ್ರಸಿದ್ಧಿ ಪಡೆದಿರುವ ಕಿರುತೆರೆ ಹಾಗೂ ಸ್ಯಾಂಡಲ್ವುಡ್ ನಟಿ ರಂಜನಿ ರಾಘವನ್ (Ranjani Raghavan) ಎಲ್ಲರಿಗೂ ಸ್ಪೂರ್ತಿ. ರಂಜನಿ ರಾಘವನ್ ಬರೀ ನಟನೆ ಮಾತ್ರ ನೆಚ್ಚಿಕೊಂಡಿಲ್ಲ. ಬಹಮುಖ ಪ್ರತಿಭೆ ರಂಜನಿ ರಾಘವನ್, ಆಕ್ಟಿಂಗ್ ಜೊತೆ ನಿರ್ದೇಶಕಿಯಾಗಿ, ಕಥೆಗಾರ್ತಿಯಾಗಿ ಬ್ಯುಸಿಯಾಗಿದ್ದಾರೆ. ಫಿಟ್ನೆಸ್ ವಿಷ್ಯದಲ್ಲೂ ರಂಜನಿ ರಾಘವನ್ ಮುಂದಿದ್ದಾರೆ. ಈಗ ರಂಜನಿ ರಾಘವನ್, ನಂದಿ ಬೆಟ್ಟ ಏರಿದ್ದಾರೆ. ವಿಶೇಷ ಅಂದ್ರೆ ರಂಜನಿ, ನಂದಿ ಬೆಟ್ಟವನ್ನು ಓಡ್ತಾ ಹತ್ತಿದ್ದಾರೆ.

ರಂಜನಿ ರಾಘವನ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಇದ್ರ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದು ನನ್ನ ಮೊದಲ ಹಿಲ್ಸ್ ರನ್ ಅಂತ ರಂಜನಿ ಹೇಳಿಕೊಂಡಿದ್ದಾರೆ. ನನ್ನ ಟೀನೇಜ್ ನಲ್ಲಿ ನಾನು ಹೊರಗಿನ ಪ್ರಪಂಚ ಹಾಗೂ ಸೂರ್ಯನ ಕಿರಣವನ್ನು ಅವೈಡ್ ಮಾಡ್ತಿದ್ದೆ. ಆದ್ರೆ ಈಗ ಸೂರ್ಯ ಮುತ್ತಿಡುತ್ತಿದ್ದಾನೆ. ಓಟ ಮತ್ತು ಫಿಟ್ನೆಸ್ ಮೂಲಕ ನಾನು ನನ್ನ ಬೆಳವಣಿಗೆ ಕಂಡುಕೊಳ್ತಿದ್ದೇನೆ ಎಂದ ರಂಜನಿ ರಾಘವನ್, ನಂದಿಬೆಟ್ಟವನ್ನು ಓಡ್ತಾ ಏರಲು ಪ್ರೋತ್ಸಾಹ ನೀಡಿದ, ಜೊತೆಯಲ್ಲಿ ಓಡಿದ ತಮ್ಮ ಪಾರ್ಟನರ್ ಗೆ ಧನ್ಯವಾದ ಹೇಳಿದ್ದಾರೆ.

ಅಷ್ಟೇ ಅಲ್ಲ, ನಂದಿ ಬೆಟ್ಟವನ್ನು ಏರಿದ ಖುಷಿಯನ್ನು ಫ್ಯಾನ್ಸ್ ಜೊತೆ ಹಂಚಿಕೊಂಡ ರಂಜನಿ ರಾಘವನ್ 8 ಕಿಲೋಮೀಟರ್ ಓಡಿದ್ದಾರೆ. 8 ಕಿಲೋಮೀಟರ್ ನಂದಿ ಬೆಟ್ಟ ಏರಲು ಅವರು ಒಂದು ಗಂಟೆ 27 ನಿಮಿಷ ತೆಗೆದುಕೊಂಡಿದ್ದಾರೆ. ಕೋಲ್ಡ್ ಜ್ಯೂಸ್ ಕುಡಿದು ಕೂಲ್ ಆದ ರಂಜನಿ, ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ. ಅದರ ಟಿಕೆಟ್ ಕೂಡ ಹಂಚಿಕೊಂಡಿರುವ ಅವರು, ನಂದಿ ಬೆಟ್ಟದ ಆರಂಭದಲ್ಲಿದ್ದ ಕಾರ್ ತಲುಪಲು ಬಸ್ ಪ್ರಯಾಣ ಬೆಳೆಸಿದ್ದರು.

ಇದು ನನ್ನ ಮೊದಲ ಬೆಟ್ಟದ ಓಟವಾಗಿತ್ತು. ನೀವೂ ಟ್ರೈ ಮಾಡಿ ಅಂತ ವಿಡಿಯೋದ ಕೊನೆಯಲ್ಲಿ ಕ್ಯಾಪ್ಷನ್ ಹಾಕಿದ್ದಾರೆ. ರಂಜನಿ ರಾಘವನ್ ವಿಡಿಯೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ನಿಮ್ಮಿಂದ ಮೋಟಿವೇಷನ್ ಸಿಕ್ಕಿದೆ, ನೀವು ಎಲ್ಲರನ್ನೂ ಮೋಟಿವೇಟ್ ಮಾಡ್ತೀರಿ, ನಿಮಗೆ ಒಳ್ಳೆ ಪಾರ್ಟನರ್ ಸಿಕ್ಕಿದ್ದಾರೆ ಎನ್ನುವ ಕಮೆಂಟ್ ಗಳನ್ನು ಮಾಡಿದ್ದಾರೆ.

ಇನ್ನು ರಂಜನಿ ರಾಘವನ್ ವೃತ್ತಿ ವಿಷ್ಯಕ್ಕೆ ಬರೋದಾದ್ರೆ ರಂಜನಿ ಸದ್ಯ ಡಿ ಡಿ ಡಿಕ್ಕಿ ((Di Di Dikki) )ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಇದು ಅವರು ನಿರ್ಮಾಣ ಮಾಡ್ತಿರುವ ಮೊದಲ ಸಿನಿಮಾ. ಈಗಾಗಲೇ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾ ಯಾವಾಗ ರಿಲೀಸ್ ಅನ್ನೋದನ್ನು ಹೇಳ್ತೆನೆ ಅಂತ ರಂಜನಿ ಹೇಳಿದ್ದಾರೆ. ರಂಜನಿ ರಾಘವನ್, ವಿಜಯ ರಾಘವೇಂದ್ರ ಜೊತೆ ನಟಿಸಿದ ಸ್ವಪ್ಮ ಮಂಟಪ ಸಿನಿಮಾ ನಿನ್ನೆ ತೆರೆಗೆ ಬಂದಿದೆ. ಇದು ವಿಭಿನ್ನ ಪಾತ್ರವಾಗಿರುವ ಕಾರಣ ರಂಜನಿ, ಸಿನಿಮಾ ಒಪ್ಪಿಕೊಂಡಿರೋದಾಗಿ ಸಂದರ್ಶನವೊಂದರಲ್ಲಿ ಹೇಳಿದ್ರು.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಕನ್ನಡತಿ ಸೀರಿಯಲ್ ಮೂಲಕ ಹೆಚ್ಚು ಪ್ರಸಿದ್ಧಿಗೆ ಬಂದ ರಂಜನಿ ರಾಘವನ್ ಲೇಖಕಿ ಕೂಡ ಹೌದು. ಕೆಲ ತಿಂಗಳ ಹಿಂದೆ ರಂಜನಿ ರಾಘವನ್, ತಾವು ಮದುವೆಯಾಗುತ್ತಿರುವ ಹುಡುಗನ ಫೋಟೋ ಹಾಕಿ, ಅವರ ಬಗ್ಗೆ ಮಾಹಿತಿ ನೀಡಿದ್ದರು. ರಂಜನಿ ರಾಘವನ್, ಸಾಗರ್ ಭಾರಧ್ವಜ್ ಅವರನ್ನು ಮದುವೆ ಆಗಲಿದ್ದಾರೆ. ಸಾಗರ್, ಅಥ್ಲೇಟ್. ರಂಜನಿಯವರ ಕಾಲೇಜ್ ಗೆಳೆಯ. ಇಬ್ಬರ ಬಾಂಡಿಂಗ್ ಚೆನ್ನಾಗಿದೆ. ರಂಜನಿ ಫಿಟ್ನೆಸ್ ಗೆ ಸಾಗರ್ ಸಹಕಾರ ಸಾಕಷ್ಟಿದೆ ಎಂಬುದು ಈಗ ಗೊತ್ತಾಗಿದೆ. ಸದ್ಯ ರಂಜನಿ, ಡಿ, ಡಿ ಡಿಕ್ಕಿ ಸಿನಿಮಾ ಕನಸು ಕಾಣ್ತಿದ್ದರೂ, ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಫ್ಯಾನ್ಸ್ ಗೆ ಕಾಡ್ತಿದೆ.

View post on Instagram