ಚಿತ್ರದ ಹೆಸರು ಹಾಗೂ ಪೋಸ್ಟರ್‌ ಡಿಫರೆಂಟ್‌ ಆಗಿದ್ದು, ಕತೆಯೂ ಲವಲವಿಕೆಯಿಂದ ಕೂಡಿರಬಹುದು ಎಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದೆ.

ರಾಹುಲ್‌ ಪಿ ಕೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇವರು ರಕ್ಷಿತ್‌ ಶೆಟ್ಟಿಅಭಿನಯದ ‘ಉಳಿದವರು ಕಂಡಂತೆ’ ಚಿತ್ರಕ್ಕೆ ಸಹ ನಿರ್ದೇಶಕ ಆಗಿದ್ದವರು. ರಕ್ಷಿತ್‌ ಶೆಟ್ಟಿತಂಡದಲ್ಲಿ ಕೆಲಸ ಮಾಡುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಈಗ ಸದ್ದಿಲ್ಲದೇ ‘ಸಕುಟುಂಬ ಸಮೇತ’ ಚಿತ್ರದ ಶೂಟಿಂಗ್‌ ಮುಗಿಸಿದ್ದಾರೆ. ಸಿನಿಮಾ ಈಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಸಿನಿಮಾ ಬಿಡುಗಡೆ ಯಾವಾಗ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

 

ಅಚ್ಯುತ್‌ ಕುಮಾರ್‌, ಕೃಷ್ಣ ಹೆಬ್ಬಾಲೆ, ಭರತ್‌ ಜಿ ಬಿ, ಸಿರಿ ರವಿಕುಮಾರ್‌, ಪುಷ್ಪ ಬೆಳವಾಡಿ, ರೇಖಾ ಕೂಡ್ಲಿಗಿ, ಜಯಲಕ್ಷ್ಮೀ ಪಾಟೀಲ್‌ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ನಾಯಕ- ನಾಯಕಿ ಸಿನಿಮಾ ಎನ್ನುವುದಕ್ಕಿಂತ ಕಲಾವಿದರ ಸಿನಿಮಾ ಎಂಬುದನ್ನು ಚಿತ್ರದ ಟೈಟಲ್‌ ಹಾಗೂ ಪೋಸ್ಟರ್‌ ರಿವೀಲ್‌ ಮಾಡಿದೆ. ಕಮ್‌ರ್‍ ಚಾವ್ಲಾ, ಸಂದೇಪ್‌ ವಲ್ಲೂರಿ ಛಾಯಾಗ್ರಾಹಣ, ಮಿಧುನ್‌ ಮುಕುಂದನ್‌ ಸಂಗೀತ ಚಿತ್ರಕ್ಕಿದೆ. ‘ನಮ್ಮ ಪರಂವಃ ಸ್ಟುಡಿಯೋ ನಿರ್ಮಾಣದ ಮುಂದಿನ ಸಿನಿಮಾ ಇದು. ನಿಮ್ಮೆಲ್ಲರ ಬೆಂಬಲ ಇರಲಿ’ ಎನ್ನುವ ಸಾಲುಗಳ ಜತೆ ನಟ ರಕ್ಷಿತ್‌ ಶೆಟ್ಟಿಅವರು ಚಿತ್ರದ ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜಿ ಎಸ್‌ ಗುಪ್ತ, ನಿರ್ಮಾಣದಲ್ಲಿ ರಕ್ಷಿತ್‌ ಶೆಟ್ಟಿಅವರಿಗೆ ಸಾಥ್‌ ನೀಡುತ್ತಿದ್ದಾರೆ.