777 ಚಾರ್ಲಿ ಸಿನಿಮಾ ಒಟಿಟಿಯಲ್ಲಿ (OTT) ರಿಲೀಸ್ ಆಗಲು ಸಜ್ಜಾಗಿದೆ. ಸಿನಿಮಾ ರಿಲೀಸ್ ಆಗಿ 25 ದಿನಗಳಾಗಿದೆ. ಈ ಸಮಯದಲ್ಲಿ ಚಾರ್ಲಿ ಒಟಿಟಿ ರಿಲೀಸ್ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshith Shetty) ನಟನೆಯ 777 ಚಾರ್ಲಿ (777 Charlie) ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಕಮಾಯಿ ಮಾಡಿದೆ. ಚಾರ್ಲಿ ಮತ್ತು ಧರ್ಮನ ಭಾವನಾತ್ಮಕ ಪಯಣಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರಮಂದಿರಂಗಳಲ್ಲಿ ರಾರಾಜಿಸುತ್ತಿರುವ 777 ಚಾರ್ಲಿ 150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ. ಕಿರಣ್ ರಾಜ್ ಸಾರಥ್ಯದಲ್ಲಿ ಬಂದ 777 ಚಾರ್ಲಿ ಸಿನಿಮಾ ಸೂಪರ್ ಸಕ್ಸಸ್ ಕಾಣುತ್ತಿದ್ದಂತೆ ಒಟಿಟಿಗೆ ಎಂಟ್ರಿ ಕೊಡುತ್ತಿದೆ. 

ಹೌದು, 777 ಚಾರ್ಲಿ ಸಿನಿಮಾ ಒಟಿಟಿಯಲ್ಲಿ (OTT) ರಿಲೀಸ್ ಆಗಲು ಸಜ್ಜಾಗಿದೆ. ಸಿನಿಮಾ ರಿಲೀಸ್ ಆಗಿ 25 ದಿನಗಳಾಗಿದೆ. ಈ ಸಮಯದಲ್ಲಿ ಚಾರ್ಲಿ ಒಟಿಟಿ ರಿಲೀಸ್ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಒಟಿಟಿ ಪ್ರೇಕ್ಷಕರ ಮುಂದೆ ಚಾರ್ಲಿ ಜುಲೈ 29ರಂದು ಬರುತ್ತಿದೆ. ಈಗಾಗಲೇ ಸಿನಿಮಾತಂಡ ಒಟಿಟಿ ಹಕ್ಕನ್ನು ವೂಟ್ ಸೆಲೆಕ್ಟ್2ಗೆ ಮಾರಾಟ ಮಾಡಿತ್ತು. ಅದರಂತೆ ಜುಲೈ 29ರಂದು (July 29) 777 ಚಾರ್ಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. 

ಅಂದಹಾಗೆ ಚಾರ್ಲಿ ಸಿನಿಮಾ ರಿಲೀಸ್ ಆಗಿ 25 ದಿನಗಳು ಆಗಿವೆ. ಇತ್ತೀಚಿಗಷ್ಟೆ 777 ಚಾರ್ಲಿ ತಂಡ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು. ಸಿನಿಮಾ ಗೆದ್ದ ಖುಷಿಯನ್ನು ಮಾಧ್ಯಮದ ಜೊತೆ ಹಂಚಿಕೊಂಡಿತು ಸಿನಿಮಾತಂಡ. ಅಂದಹಾಗೆ ಕರ್ನಾಟಕದಲ್ಲಿ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 777 ಚಾರ್ಲಿ ಪ್ರದರ್ಶನ ಕಾಣುತ್ತಿದೆ. ಖಂಡಿತವಾಗಿಯೂ ಸಿನಿಮಾ 50 ದಿನ ಪೂರೈಸಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದರು. ಇನ್ನು ಸಿನಿಮಾದಿಂದ ಬಂದ ಲಾಭವನ್ನು ಸಿನಿಮಾತಂಡಕ್ಕೆ ಹಂಚಲು ರಕ್ಷಿತ್ ನಿರ್ಧರಿಸಿದ್ದಾರೆ. 

777 ಚಾರ್ಲಿಯಿಂದ 150 ಕೋಟಿ ಲಾಭ: ಶೇ. 15ರಷ್ಟು ಹಂಚಿದ ರಕ್ಷಿತ್ ಶೆಟ್ಟಿ

ಚಾರ್ಲಿಯಿಂದ ಬಂದ ಲಾಭ ಶೇರ್ ಮಾಡಿದ ರಕ್ಷಿತ್ 

ಸಿನಿಮಾ ಯಶಸ್ಸಿನಲ್ಲಿ ಉಳಿದವರಿಗೂ ಪಾಲು ನೀಡಲು ಚಿತ್ರತಂಡ ನಿರ್ಧಾರ ಮಾಡಿ ಪತ್ರ ಬಿಡುಗಡೆ ಮಾಡಿದೆ. ಶೇ 10ರಷ್ಟು ಚಿತ್ರದಲ್ಲಿ ಕೆಲಸ ಮಾಡಿದವರಿಗೆ ಮತ್ತು ಶ್ವಾನಗಳ ರಕ್ಷಣೆ ಮಾಡುವ NGOಗಳಿಗೆ ನೀಡಲು ತೀರ್ಮಾನ ಮಾಡಿದ್ದಾರೆ. '777 ಚಾರ್ಲಿ ನಿಮ್ಮನ್ನು ತಲುಪಿ 25 ದಿನಗಳು ಕಳೆದರೂ, ಎಂದಿನಂತೆ ನಿಮ್ಮಿಂದ ನಮಗೆ ಸಿಗುತ್ತಿರೋ ಪ್ರೀತಿ ಅನನ್ಯ. ಈ ಚಿತ್ರದಿಂದ ನಾವು ಗಳಿಸಿರುವ ಮೆಚ್ಚುಗೆ ಮತ್ತು ಮನ್ನಣೆಯಿಂದ ನಾವು ಅತ್ಯಂತ ಧನ್ಯರಾಗಿದ್ದೇವೆ. ಈ ಅಭೂತಪೂರ್ವ ಯಶಸ್ಸಿಗೆ ಬಮ್ಮ ತಂಡದ ಪರಿಶ್ರಮವಿದೆ. ಈ ಚಿತ್ರವನ್ನು ಯಶಸ್ವಿಯಾಗಿ ತೆರೆಗೆ ತರುವಲ್ಲಿ ಹಲವಾರು ರೀತಿಯಲ್ಲಿ ಶ್ರಮಿಸಿರುವ ಚಿತ್ರತಂಡದ ಜೊತೆಗೆ 777 ಚಾರ್ಲಿ ಗಳಿಸಿರುವ ಲಾಭದ ಶೇಕಡಾ 10ರಷ್ಟಯ ಹಂಚಿಕೊಳ್ಳಲು ನಾವು ನಿರ್ಧರಿಸಿದ್ದೇವೆ' ಎಂದು ರಕ್ಷಿತ್ ಅಂಡ್ ತಂಡ ಬಹಿರಂಗ ಪಡಿಸಿದ್ದರು. 

ಶ್ವಾನ ಪ್ರೀತಿಯಿಂದ ಗಳಿಸಿದ ಹಣವನ್ನು ಶ್ವಾನಕ್ಕೇ ಅರ್ಪಿಸಲು ಮುಂದಾದ ಸಿಂಪಲ್ ಸ್ಟಾರ್

    '777 ಚಾರ್ಲಿ ಚಿತ್ರತಂಡಕ್ಕೆ ಸಾಕುಪ್ರಾಣಿಗಳ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಬೇಕಾದ ಪರಿಶ್ರಮ ಹಾಗೂ ಸೌಲಭ್ಯಗಳ ಬಗ್ಗೆ ಕಾಳಜಿ ಇದ್ದು ಈ ನಿಟ್ಟಿನಲ್ಲಿ ನಿರಾಶ್ರಿತ ಶ್ವಾನಗಳ ಹಾಗೂ ಮೂಕಪ್ರಾಣಿಗಳ ರಕ್ಣೆ ಮತ್ತು ಪೋಷಣೆಗೆ ಸಮರ್ಪಿತವಾಗಿ ದೇಶಾದ್ಯಂತ ಕೆಲಸ ಮಾಡುತ್ತಿರುವ NGOಗಳಿಗೆ, 777 ಚಾರ್ಲಿ ಗಳಿಸಿರುವ ಲಾಭದ ಶೇಕಡಾ 5ರಷ್ಟು ತಲುಪಿಸಲು ನಾವು ನಿರ್ಧರಿಸಿದ್ದೇವೆ. ನಮ್ಮ ಈ ಅಳಿಲು ಸೇವೆ ಇನ್ನಿತ್ತರರಿಗೆ ಸ್ಫೂರ್ತಿಯಾಗಬಹುದು. ನಮ್ಮ ಜಗತ್ತನ್ನು ನಿಮ್ಮ ಪ್ರೀತಿಯಿಂದ ಬೆಳಗಿಸಿದಕ್ಕಾಗಿ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾಗಳು' ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.