Asianet Suvarna News Asianet Suvarna News

ಟ್ರೈಲರ್ ರಿಲೀಸ್, 'ಸಪ್ತ ಸಾಗರದಾಚೆ ಎಲ್ಲೋ B' ಸಿನಿಮಾ ಬಿಡುಗಡೆ ಕನ್ಫರ್ಮ್

ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ- ಭಾಗ 1' ಚಿತ್ರವು ಈಗಾಗಲೇ ಓಟಿಟಿಯಲ್ಲಿ ಕೂಡ ಪ್ರಸಾರ ಕಂಡಿದ್ದು ಜನಮೆಚ್ಚುಗೆ ಗಳಿಸಿದೆ. ಇದೀಗ, ಬಿಡುಗಡೆಯಾಗಿರುವ ಈ ಚಿತ್ರದ ಟ್ರೈಲರ್ ನೋಡಿದರೆ, ಕಥೆಯ ಇನ್ನೊಂದು ಆಯಾಮ ಇದರಲ್ಲಿದೆ ಎಂಬ ಊಹೆ ಮಾಡಬಹುದು. 

Rakshit Shetty lead Sapta Sagaradaache Ello B release on 17th Nov 2023 srb
Author
First Published Oct 28, 2023, 12:24 PM IST

ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ- ಭಾಗ 2' ಸಿನಿಮಾ ನವೆಂಬರ್ 17 (17 ನವೆಂಬರ್ 2023) ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಮೊದಲು ಬಿಡುಗಡೆಯಾಗಿದ್ದ ಸಪ್ತ ಸಾಗರದಾಚೆ ಎಲ್ಲೋ- ಭಾಗ 1' ಸಿನಿಮಾವನ್ನು ಹಲವರು ಮೆಚ್ಚಿಕೊಂಡಿದ್ದರು. ಈ ಚಿತ್ರವು ತಮಿಳು, ತೆಲುಗು ಮ ಮಲಯಾಳಂ ಹಾಗೂ ಕನ್ನಡದಲ್ಲಿ ಬಿಡುಗಡೆಯಾಗಿ ಹಲವರ ಮೆಚ್ಚುಗೆ ಗಳಿಸಿದೆ. ಅವರೆಲ್ಲರೂ 'ಸಪ್ತ ಸಾಗರದಾಚೆ ಎಲ್ಲೋ- ಭಾಗ 2' ಬಿಡುಗಡೆಗಾಗಿ ಕಾಯುತ್ತಿದ್ದಾರೆ. 

'ಸಪ್ತ ಸಾಗರದಾಚೆ ಎಲ್ಲೋ- ಭಾಗ 2' ಬುಡಗಡೆಗೆ ಕಾಯುತ್ತಿದ್ದವರಿಗೆ ಸಂತೋಷದ ಸುದ್ದಿ ಸಿಕ್ಕಿದೆ. ಸಾಕಷ್ಟು ಸಾರಿ ಬಿಡುಗಡೆಯನ್ನು ಮುಂದೂಡಿದ್ದ ಈ ಚಿತ್ರದ ನಿರ್ಮಾಣ ಸಂಸ್ಥೆ 'ಪರಂವಾ' ಸ್ಟುಡಿಯೋಸ್ ಇದೀಗ ನವೆಂಬರ್ 17 (17 ನವೆಂಬರ್ 2023) ರಂದು ಬಿಡುಗಡೆಗೆ ಘೊಷಿಸಿ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಟ್ರೈಲರ್ ಸಮೇತ ಪೋಸ್ಟ್ ಮಾಡಿದೆ. ಹೀಗಾಗಿ ಇದು ಅಧಿಕೃತ ಸುದ್ದಿ ಎನ್ನಬಹುದು. 

ಬಿಗ್ ಬಾಸ್‌ನಲ್ಲಿ ಇಶಾನಿ-ಮೈಕಲ್‌ 'ಅನ್‌ಸೀನ್‌ ಕಥೆಗಳು', ಏನಿದು ಲವ್ ಮಿಸ್ಟರಿ!

ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ- ಭಾಗ 1' ಚಿತ್ರವು ಈಗಾಗಲೇ ಓಟಿಟಿಯಲ್ಲಿ ಕೂಡ ಪ್ರಸಾರ ಕಂಡಿದ್ದು ಜನಮೆಚ್ಚುಗೆ ಗಳಿಸಿದೆ. ಇದೀಗ, ಬಿಡುಗಡೆಯಾಗಿರುವ ಈ ಚಿತ್ರದ ಟ್ರೈಲರ್ ನೋಡಿದರೆ, ಕಥೆಯ ಇನ್ನೊಂದು ಆಯಾಮ ಇದರಲ್ಲಿದೆ ಎಂಬ ಊಹೆ ಮಾಡಬಹುದು. ಮುಂಬರುವ ಭಾಗದಲ್ಲಿ ಈಗಾಗಲೇ 'ಸಪ್ತ ಸಾಗರದಾಚೆ ಎಲ್ಲೋ- ಭಾಗ 1'ರಲ್ಲಿ ಆಗಿದ್ದಕ್ಕೆ ಕಾರಣವೋ ಅಥವಾ ಸಾಕ್ಷಿಯೋ ಏನೋ ಸಿಗಬಹುದು. ಆದರೆ, ಸಿನಿಮಾ ನೋಡದೇ ಊಹೆಯನ್ನು ಒಪ್ಪಿ ಮಾತನಾಡುವುದು ಕಷ್ಟವೇ. 

ಡ್ರೋನ್ ವಿಷಯ ಮತ್ತೆ ಎಳೆದು ತಂದ ವಿನಯ್-ಸ್ನೇಹಿತ್, ಸಂದೇಹಗಳಿಗೆ ಬೆಚ್ಚಿಬಿದ್ರಾ ಪ್ರತಾಪ್?

ಒಟ್ಟಿನಲ್ಲಿ, ಸದ್ಯ ರಕ್ಷಿತ್ ಶೆಟ್ಟಿ ಅಭಿಮಾನಿಗಳು 'ಸಪ್ತ ಸಾಗರದಾಚೆ ಎಲ್ಲೋ- ಭಾಗ 2'ಕ್ಕೆ ಕಾಯುತ್ತಿದ್ದಾರೆ. ಅವರೆಲ್ಲರ ಆಸೆ ನವೆಂಬರ್ 17ರಂದು ಕೈಗೂಡಲಿದೆ. ಮತ್ತೆ ಚಿತ್ರದ ಬಿಡುಗಡೆಯನ್ನು ಮುಂದೂಡದೇ ಇರಲಿ ಎಂಬುದು ಅಭಿಮಾನಿಗಳ ಆಸೆ. ಇನ್ನು 15 ದಿನಗಳು ಕಳೆದ ಬಳಿಕ ಸ್ವಲ್ಪ ದಿನ ಕಳೆದರಾಯಿತು, 'ಸಪ್ತ ಸಾಗರದಾಚೆ ಎಲ್ಲೋ- ಭಾಗ 2' ಥಿಯೇಟರ್‌ಗೆ ಬರಲಿದೆ. ಕುತೂಹಲವಿರುವವರು ಹೋಗಿ ನೋಡಿ ಆನಂದಿಸಬಹುದು. 

Follow Us:
Download App:
  • android
  • ios