‘777 ಚಾರ್ಲಿ’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳ ನಂತರ ಸೆಟ್ಟೇರಬಹುದಾದ ‘ಪುಣ್ಯಕೋಟಿ’ ಚಿತ್ರ ಹೊಂಬಾಳೆ ಫಿಲಮ್ಸ್‌ ನಲ್ಲಿ ನಿರ್ಮಾಣ ಆಗಲಿದೆ ಎನ್ನುವುದು ಸದ್ಯದ ಗುಮಾನಿ. ಇದರ ಸುತ್ತಲಿನ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುವೈರಲ್‌ ಆಗುತ್ತಿವೆ. ಈಗಲ್ಲದಿದ್ದರೂ ಮುಂದೆ ಹೊಂಬಾಳೆ ಫಿಲಮ್ಸ್‌ ಜತೆಗೆ ರಕ್ಷಿತ್‌ ಶೆಟ್ಟಿಸಿನಿಮಾ ಮಾಡಲಿದ್ದಾರೆ. ಅಲ್ಲದೆ ‘ಪುಣ್ಯಕೋಟಿ’ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುವ ಚಿತ್ರ. ಈ ಕಾರಣಕ್ಕೆ ಆ ಚಿತ್ರಕ್ಕೆ ಹೊಂಬಾಳೆ ಫಿಲಮ್ಸ್‌ ಸಾರಥ್ಯ ವಹಿಸುತ್ತಿದೆ ಎನ್ನಲಾಗುತ್ತಿದೆ. ಆದರೆ, ಕಿರಣ್‌ ರಾಜ್‌ ನಿರ್ದೇಶನದ ‘777 ಚಾರ್ಲಿ’ ಚಿತ್ರದ ಚಿತ್ರೀಕರಣದ ಕೊನೆಯ ಹಂತದಲ್ಲಿರುವ ರಕ್ಷಿತ್‌ ಶೆಟ್ಟಿಈ ಬಗ್ಗೆ ಹೇಳಿದ್ದೇನು?

-ಸದ್ಯಕ್ಕೆ ನಾನು ಹೊಂಬಾಳೆ ಫಿಲಮ್ಸ್‌ನಲ್ಲಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆ ರೀತಿಯ ಯಾವ ಬೆಳವಣಿಗೆಗಳು ನಮ್ಮ ನಡುವೆ ಆಗಿಲ್ಲ.

- ಸುಮ್ಮನೆ ಸುಳ್ಳು ಸುದ್ದಿಗಳನ್ನು ಬರೆದಿದ್ದಾರೆ.

ಶಿವಣ್ಣ, ರಕ್ಷಿತ್ ಶೆಟ್ಟಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ..! 

- ಪುಣ್ಯಕೋಟಿ ಸಿನಿಮಾ ಆರಂಭಿಸುವುದಕ್ಕೆ ತುಂಬಾ ಸಮಯ ಬೇಕು. ಹೀಗಾಗಿ ಆ ಚಿತ್ರವನ್ನು ಹೊಂಬಾಳೆ ಫಿಲಮ್ಸ್‌ನಲ್ಲಿ ನಿರ್ಮಾಣ ಮಾಡುತ್ತದೆ ಎಂಬುದು ಸುಳ್ಳು ಸುದ್ದಿ.

- ಈಗ ನಾನು ‘777 ಚಾರ್ಲಿ’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೇನೆ. ಇದರ ಶೂಟಿಂಗ್‌ ಕೊನೆಯ ಹಂತದಲ್ಲಿದೆ. ಅಂದರೆ ಇನ್ನೂ ಹತ್ತು ದಿನ ಮಾತ್ರ ಚಿತ್ರೀಕರಣ ಬಾಕಿ ಉಳಿದಿಕೊಂಡಿದೆ.

"

- 777 ಚಾರ್ಲಿ ನಮ್ಮ ನಿರೀಕ್ಷೆಗೂ ಮೀರಿ ಚೆನ್ನಾಗಿ ಮೂಡಿ ಬಂದಿದೆ. ಕೊರೋನಾ, ಲಾಕ್‌ಡೌನ್‌ ಕಾರಣಕ್ಕೆ ಮೇಕಿಂಗ್‌ನಲ್ಲಿ ಎಲ್ಲೂ ರಾಜಿ ಆಗಿಲ್ಲ. ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿರುವ ದೃಶ್ಯಗಳು ತೆರೆ ಮೇಲೆ ಅದ್ಭುತವಾಗಿ ಮೂಡಿ ಬರಲಿವೆ ಎನ್ನುವ ಭರವಸೆ ಇದೆ.

ಕೊನೆಗೂ ರಶ್ಮಿಕಾ ಪೋಸ್ಟ್‌ಗೆ ಕಾಮೆಂಟ್ ಮಾಡಿದ ರಕ್ಷಿತ್ ಶೆಟ್ಟಿ! 

- ಈ ಚಿತ್ರ ಮುಗಿದ ಮೇಲೆ ಸದ್ಯದಲ್ಲೇ ಹೇಮಂತ್‌ ರಾವ್‌ ನಿರ್ದೇಶನದ ಚಿತ್ರಕ್ಕೆ ಜತೆಯಾಗಲಿದ್ದೇನೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಈಗಾಗಲೇ ಎಲ್ಲ ತಯಾರಿಗಳು ಮುಗಿದಿವೆ. ಹೇಮಂತ್‌ ರಾವ್‌ ಒಂದು ಒಳ್ಳೆಯ ಕತೆ ಮಾಡಿಕೊಂಡಿದ್ದಾರೆ.